ಚಾಮರಾಜನಗರ: ಶಕ್ತಿ ಯೋಜನೆ ಜಾರಿಯಾದ ಬಳಿಕ  ಚಾಮರಾಜನಗರ‌ ಜಿಲ್ಲೆಯಲ್ಲಿ ಪ್ರಯಾಣಿಸಿದ ಒಟ್ಟು ಪ್ರಯಾಣಿಕರಲ್ಲಿ ಶೇ.64 ರಷ್ಟು ಮಂದಿ ಮಹಿಳೆಯರೇ ಪ್ರಯಾಣ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು... ಶಕ್ತಿ‌ ಯೋಜನೆಗೆ ಜಿಲ್ಲೆಯಲ್ಲಿ ಮಹಿಳೆಯರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶಕ್ತಿ ಯೋಜನೆ‌ ಜಾರಿಯಾದ ದಿನದಿಂದ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 1,63,44,799 ಮಂದಿ ಪ್ರಯಾಣ ಮಾಡಿದ್ದು ಇವರಲ್ಲಿ 1,05,76,930 ಮಂದಿ ಮಹಿಳೆಯರೇ ಪ್ರಯಾಣ ಮಾಡಿದ್ದಾರೆ.‌


ಇದನ್ನೂ ಓದಿ- Lover murder: ಯುವತಿಯ ಕತ್ತಿಗೆ ಚಾಕು ಇರಿದು ಕೊಲೆಗೈದ ಯುವಕ! ಕಾರಣವೇನು ಗೊತ್ತಾ?


ರಾಜ್ಯ ಸರ್ಕಾರ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳ ಪೈಕಿ ಜೂ.11 ರಂದು ಶಕ್ತಿ ಯೋಜನೆ ಜಾರಿಯಾಗಿದೆ. ಉದ್ಯೋಗಕ್ಕಾಗಿ ದೂರದ ನಗರ, ಪಟ್ಟಣಗಳಿಗೆ ತೆರಳುವ ಮಹಿಳೆಯರಿಗೆ, ಶಾಲಾ- ಕಾಲೇಜು ವಿದ್ಯಾರ್ಥಿನಿಯರು, ಯಾತ್ರ ಸ್ಥಳಗಳಿಗೆ ತೆರಳುವವರು ಯೋಜನೆಯ ಫಲಾನುಭವಿಗಾಗಿದ್ದಾರೆ.


ಜೂನ್ 11ರಂದು ಶಕ್ತಿ ಯೋಜನೆ ಚಾಮರಾಜನಗರ ಜಿಲ್ಲೆಯಲ್ಲಿ ಆರಂಭಗೊಂಡಿತು.  ಜೂನ್ ಅಂತ್ಯದವರೆಗೆ ಒಟ್ಟಾರೆ 41,93,946 ಪ್ರಯಾಣಿಕರು ಚಾಮರಾಜನಗರ ನಿಗಮದ ಬಸ್ಸುಗಳಲ್ಲಿ ಸಂಚರಿಸಿದ್ದಾರೆ. ಈ ಪೈಕಿ 24,10,918 ರಷ್ಟು ಮಹಿಳೆಯರು ಪ್ರಯಾಣಿಸಿದ್ದಾರೆ. ಜುಲೈ ತಿಂಗಳಿನಲ್ಲಿ ಒಟ್ಟು 79,05,964 ಸಂಚರಿಸುವ ಪ್ರಯಾಣಿಕರಲ್ಲಿ  54,76,569 ರಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ  42,44,889 ಪ್ರಯಾಣಿಕರು ಸಂಚರಿಸುವವರ ನಡುವೆ 26,89,443 ಮಹಿಳೆಯರು ಶಕ್ತಿ ಯೋಜನೆ ಫಲ‌ ಪಡೆದಿದ್ದಾರೆ.


ಇದನ್ನೂ ಓದಿ- ಅನ್ನದಾತರ ಹೋರಾಟಕ್ಕೆ ಮಣಿದ ಸರ್ಕಾರ: ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣಕ್ಕೆ ಬ್ರೇಕ್!


ಒಟ್ಟಾರೆ ಯೋಜನೆ ಆರಂಭಗೊಂಡ ದಿನದಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,63,44,799 ಪ್ರಯಾಣಿಕರು ನಿಗಮದ ಬಸ್ಸುಗಳಲ್ಲಿ ಸಂಚರಿಸಿದ್ದು ಇವರಲ್ಲಿ 1,05,76,930 ಮಹಿಳಾ ಪ್ರಯಾಣಿಕರು ಇದ್ದು ಶೇ. 64.71ರಷ್ಟು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದಂತಾಗಿದೆ. ಒಟ್ಟಿನಲ್ಲಿ ಶಕ್ತಿ ಯೋಜನೆ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.