ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಸಮೀಪದ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ ದೇವಾಲಯ, ಪ್ರಸನ್ನಾ ಮೀನಾಕ್ಷಿ ರಂಗನಾಥಸ್ವಾಮಿ ದೇವಾಲಯ ಹಾಗೂ ಮಧ್ಯರಂಗನಾಥಸ್ವಾಮಿ ದೇವಾಲಯದ ಹುಂಡಿಗಳ ಎಣಿಕೆ ನಡೆದಿದ್ದು 10 ಲಕ್ಷ  ರೂ. ಹಣ ಸಂಗ್ರಹವಾಗಿದೆ. 


COMMERCIAL BREAK
SCROLL TO CONTINUE READING

113 ದಿನಗಳ ಬಳಿಕ‌ ಸಮೂಹ ದೇವಾಲಯದಲ್ಲಿ ಹುಂಡಿ‌ ಎಣಿಕೆ‌ ಕಾರ್ಯ ನಡೆದಿದ್ದು  10,13,620 ರೂ‌. ಸಂಗ್ರಹವಾಗಿದ್ದು 2.5 ಗ್ರಾಂ ಚಿನ್ನದ ಸರ, 23 ಗ್ರಾಂ ಬೆಳ್ಳಿ ಪದಾರ್ಥವನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ.


ಇದನ್ನೂ ಓದಿ : ಬೆಂಕಿಯಲ್ಲಿ ಅರಳಿದ ಹೂ ಖರ್ಗೆ...!


ಇನ್ನು, ಹುಂಡಿ ಎಣಿಕೆ ವೇಳೆ ದೇವರಿಗೆ ಬರೆದ ಎರಡು ಕೋರಿಕೆ ಪತ್ರಗಳು ಸಿಕ್ಕಿದ್ದು ಒಂದು ಪತ್ರದಲ್ಲಿ 'ಕಾಲೇಜಿನಲ್ಲಿ ಯಾರೂ ತನ್ನ ಸುದ್ದಿಗೆ ಬರಬಾರದು, ಓದುವ ಜ್ಞಾನ ಕೊಡು, ಸರ್-ಮೇಡಂ ಯಾರೂ ತಪ್ಪಾಗಿ ತಿಳಿದುಕೊಳ್ಳದಂತೆ ಮಾಡು, ಹೆಚ್ಚು ಅಂಕ ಕೊಟ್ಟು ಪಾಸ್ ಮಾಡುಸು ತಾಯಿ ಎಂದು ವಿದ್ಯಾರ್ಥಿ ಕೋರಿದ್ದಾನೆ. 


ಇನ್ನು ಮತ್ತೊಂದು ಪತ್ರವು ಯುವತಿಯೊಬ್ಬಳು ಬರೆದಂತಿದ್ದು ತಾನು ಇಚ್ಛೆ ಪಟ್ಟ ಹುಡುಗನನ್ನೇ ಮದುವೆ ಮಾಡಿಸುವ ಕೋರಿಕೆಯಂತೆ 'ತಾ ಇಷ್ಟಪಟ್ಟ ಮನೆ ಸಿಗಲಿ, ಆ ಮನೆಯವರು ಒಳ್ಳೆಯದು ಮಾಡಲಿ, ಸಾಲ ತೀರಲಿ' ಎಂದು ಒಂದು ಪೇಜ್ ತುಂಬೆಲ್ಲಾ ಬರೆದು ದೇವರಿಗೆ ಅರ್ಪಿಸಿದ್ದಾಳೆ.


ಇದನ್ನೂ ಓದಿ : Suresh Prabhu : 'ದೇಶವನ್ನು ಅಭಿವೃದ್ದಿಯ ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಬೆಂಗಳೂರಿನದ್ದು ಪ್ರಮುಖ ಪಾತ್ರ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.