`ಈದ್ಗಾ ಮೈದಾನವು ಆಟದ ಮೈದಾನವಾಗಿ ಮಾತ್ರ ಬಳಸಲು ಹೈಕೋರ್ಟ್ ಆದೇಶ`
ಮಧ್ಯ ಪ್ರವೇಶಿಸಿ ಹೈ ಕೋರ್ಟ್, ಇದು ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡಬಹುದಲ್ಲಾ. ಆಟದ ಮೈದಾನವಾಗಿ ಮಾತ್ರ ಬಳಸಬಹುದಲ್ಲಾ ಎಂದು ಪ್ರಶ್ನಿಸಿತು.
ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದದ ಇಂದು ಹೈಕೋರ್ಟ್ ಏಕಸದಸ್ಯಪೀಠದಲ್ಲಿ ರಿಟ್ ಅರ್ಜಿ ವಿಚಾರಣೆ ನಡೆಯಿತು. ಬಿಬಿಎಂಪಿ ಈ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಆದೇಶವನ್ನ ಪ್ರಶ್ನಿಸಿ ವಕ್ಫ್ ಬೋರ್ಡ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಇಂದು ಅದನ್ನು ನ್ಯಾ.ಹೇಮಂತ್ ಚಂದನ್ ಗೌಡರ್ ರವರ ಪೀಠದಲ್ಲಿ ವಿಚಾರಣೆ ನಡೆಯಿತು.
ವಕ್ಫ್ ಬೋರ್ಡ್ ಪರ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ವಾದ ಮಂಡಿಸಿ, ಚಾಮರಾಜಪೇಟೆಯ ಮೈದಾನವು ವಕ್ಫ್ ಬೋರ್ಡ್ ಸೇರಿದ್ದು, ಆದ್ರೆ, ಬಿಬಿಎಂಪಿ ಕಂದಾಯ ಇಲಾಖೆಗೆ ಸೇರಿದೆ ಎಂಬ ಆದೇಶ ಸರಿಯಲ್ಲವೆಂದು ವಾದ ಮಂಡಿಸಿದರು.
ಇದನ್ನೂ ಓದಿ : Bangalore Police : ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ನೀಡಲು ಬಂದ್ದಿದ್ದ ಡೀಲರ್ ಅಂದರ್
ವಕ್ಫ್ ಬೋರ್ಡ್ ವಾದಕ್ಕೆ ಎಜಿ ಪ್ರಭುಲಿಂಗ್ ನಾವದಗಿ ಆಕ್ಷೇಪ ವ್ಯಕ್ತಪಡಿಸಿ, 1965 ರಲ್ಲೂ ಸರ್ಕಾರ ಸರ್ವೆ ನಡೆಸಿತ್ತು ಯಾರೂ ಆಕ್ಷೇಪಿಸಿರಲಿಲ್ಲ. 57 ವರ್ಷಗಳಿಂದಲೂ ಆಸ್ತಿ ಸರ್ಕಾರದ ಹೆಸರಿನಲ್ಲಿದೆ. ಆಸ್ತಿ ತಮ್ಮದೆಂಬುವುದಕ್ಕೆ ವಕ್ಫ್ ಬೋರ್ಡ್ ದಾಖಲೆ ಹಾಜರುಪಡಿಸಿಲ್ಲ. ಮಾಲೀಕತ್ವ ತಮ್ಮದೆಂದು ಸಿವಿಲ್ ಕೋರ್ಟ್ ಮೊರೆ ಹೋಗಲಿ. ಅಧಿಸೂಚನೆ ಮೂಲಕ ವಕ್ಫ್ ಬೋರ್ಡ್ ಆಸ್ತಿ ತಮ್ಮದೆನ್ನಲು ಸಾಧ್ಯವಿಲ್ಲ ಎಂದು ವಾದಿಸಿದರು.
ಮಧ್ಯ ಪ್ರವೇಶಿಸಿ ಹೈ ಕೋರ್ಟ್, ಇದು ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡಬಹುದಲ್ಲಾ. ಆಟದ ಮೈದಾನವಾಗಿ ಮಾತ್ರ ಬಳಸಬಹುದಲ್ಲಾ ಎಂದು ಪ್ರಶ್ನಿಸಿತು.
ವಕ್ಫ್ ಬೋರ್ಡ್ ನ ಅಧಿಸೂಚನೆ ಪ್ರಶ್ನಿಸಲು ಸರ್ಕಾರ ಸ್ವತಂತ್ರವಿದೆ. ಯಥಾಸ್ಥಿತಿ ಕಾಪಾಡಿ ಇಲ್ಲವೇ ತಡೆಯಾಜ್ಞೆ ನೀಡುತ್ತೇನೆ ಎಂದು ಸರ್ಕಾರಕ್ಕೆ ನ್ಯಾ. ಹೇಮಂತ್ ಚಂದನ್ ಗೌಡರ್ ಸೂಚನೆ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೈಕೋರ್ಟ್ ಗೆ ಅಡ್ವೊಕೆಟ್ ಜನರಲ್ ಮನವಿ ಮಾಡಿದರು.
ನೀವು ಬಿಬಿಎಂಪಿಗೆ ಹಾಜರಾಗುತ್ತಿದ್ದೀರೋ, ಸರ್ಕಾರಕ್ಕೋ.. ಮುಂದಿನ ವಿಚಾರಣೆವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಲು ಸಮಸ್ಯೆ ಏನಿದೆ? ಅನಗತ್ಯ ಘಟನೆಗಳಿಗೆ ಅವಕಾಶ ನೀಡಬೇಡಿ. ಬಿಬಿಎಂಪಿ ಅಧಿಕಾರಿಗಳಿಂದ ಸಲಹೆ ಪಡೆಯಬೇಡಿ ಎಂದು ಹೈಕೋರ್ಟ್ ವಿಚಾರಣೆ ಸ್ವಲ್ಪ ಕಾಲ ಮುಂದೂಡಿದೆ.
ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿರುವ ವಕ್ಫ್ ಬೋರ್ಡ್ ಪರ ವಕೀಲರು, ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಪ್ರಾರ್ಥನೆ ಮಾಡಲು ಅವಕಾಶಕ್ಕೆ ಮನವಿ ಮಾಡಿದರು. ಪ್ರಾರ್ಥನೆಗೆ ಮುನ್ನ ಹೈಕೋರ್ಟ್ ಅನುಮತಿ ಪಡೆಯಬೇಕು. ಹೈಕೋರ್ಟ್ ನ್ಯಾ. ಹೇಮಂತ್ ಚಂದನ್ ಗೌಡರ್ ಅಭಿಪ್ರಾಯವನ್ನು ವಿಚಾರಣೆ ಕೆಲ ಕಾಲ ಮುಂದೂಡಿದರು.
ಇದನ್ನೂ ಓದಿ : ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್: ಸರ್ಕಾರ ನಿರ್ಧಾರ
ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದವನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ ನೀಡಿದೆ. ಮೈದಾನವನ್ನ ಆಟದ ಮೈದಾನವಾಗಿ ಮಾತ್ರ ಬಳಸಲು ಹೈಕೋರ್ಟ್ ಆದೇಶಿಸಿದೆ. ರಂಜಾನ್, ಬಕ್ರೀದ್ ವೇಳೆ ಮಾತ್ರ ಪ್ರಾರ್ಥನೆಗೆ ಬಳಸಬಹುದು ಎಂದು ನ್ಯಾ. ಹೇಮಂತ್ ಚಂದನ್ ಗೌಡರ್ ರವರಿದ್ದ ಪೀಠ ಆದೇಶ ನೀಡಿ, ವಿಚಾರಣೆಯನ್ನು ಸೆ.23ಕ್ಕೆ ಮುಂದೂಡಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.