ಬೆಂಗಳೂರು : ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ಮಾಡಲು ಬಂದಿದ್ದ ಡೀಲರ್ ನನ್ನ ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರ ಮೂಲದ ವೆಪನ್ ಡೀಲರ್ ನೀಲೇಶ್ ಎಂಬುವವನು ಬೆಂಗಳೂರಿನಲ್ಲಿ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯುಳ್ಳ ಕಿಡಿಗೇಡಿಯೊಬ್ಬನಿಗೆ ಡೆಲವರಿ ನೀಡಲು ಬಂದಿದ್ದ.
ಇದನ್ನೂ ಓದಿ : ಕಲಾಸಿಪಾಳ್ಯ ಮಾರುಕಟ್ಟೆ ಶಿಫ್ಟ್: ಸರ್ಕಾರ ನಿರ್ಧಾರ
ಆರ್ಡರ್ ನೀಡಿದ್ದ ವ್ಯಕ್ತಿ ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಮಿನಲ್ ಬ್ಯಾಗ್ರೌಂಡ್ ಹೊಂದಿದ್ದಾನೆ. ಅನುಮಾನಸ್ಪದವಾಗಿ ಬ್ಯಾಗ್ ಹಿಡಿದು ಓಡಾಡುತ್ತಿರುವ ಬಗ್ಗೆ ಇನ್ಫಾರ್ಮ್ ಗಳಿಂದ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೂಡಲೇ ಆರೋಪಿಯನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ನೀಲೇಶ್ ನಾವರೆ ಬಳಿ ಎರಡು ಕಂಟ್ರಿಮೇಡ್ ಪಿಸ್ತೂಲ್, ಆರು ಜೀವಂತ ಗುಂಡುಗಳು ಪತ್ತೆಯಾಗಿವೆ. ಸದ್ಯ ಡಿ.ಜೆ. ಹಳ್ಳಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಣೇಶ ಹಬ್ಬ ಆಚರಣೆ ವೇಳೆ ಗಲಭೆ ಸೃಷ್ಟಿಸುವ ಸಲುವಾಗಿ ಪಿಸ್ತೂಲ್ ತರೆಸಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಧ್ಯ ಪೊಲೀಸರು ಬಂದೂಕು ಯಾರು ಬುಕ್ ಮಾಡಿದ್ರು ಎಂಬ ಬಗ್ಗೆ ಸಿಕ್ಕಿರುವ ಮೊಬೈಲ್ ನಂಬರ್ ಬೆನ್ನತ್ತಿರುವ ಹೊರಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.