ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ರಾತ್ರಿ ಕಫ್ರ್ಯೂ(ನೈಟ್ ಕಫ್ರ್ಯೂ) ವಿಧಿಸುವ ಆಲೋಚನೆ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕೊರೊನಾ ಅಲೆ ಹಬ್ಬುವುದನ್ನು ತಡೆಯಲು ನೈಟ್ ಕಫ್ರ್ಯೂ(Night Curfew) ವಿಧಿಸಲಾಗಿದ್ದು, ರಾಜ್ಯದಲ್ಲೂ ಅದೇ ಮಾದರಿಯನ್ನು ಅನುಸರಿಸುತ್ತೀರಾ ಎಂಬ ಪ್ರಶ್ನೆಗೆ, ಸದ್ಯ ನಮ್ಮ ಮುಂದೆ ಅಂತಹ ಆಲೋಚನೆ ಇಲ್ಲ ಎಂದರು.


Recruitment 2020: SSLC ಪಾಸಾದವರಿಗೆ ಗುಡ್ ನ್ಯೂಸ್: ಅಂಚೆ ಇಲಾಖೆಯಲ್ಲಿ 2,443 ಹುದ್ದೆಗಳ ಭರ್ತಿಗೆ ಅರ್ಜಿ!


ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದ ನಾನಾ ಕಡೆ ಕೊರೊನಾ ಅಲೆ ಬೇರೆ ಬೇರೆ ರೂಪದಲ್ಲಿ ಹಬ್ಬುತ್ತಿದ್ದು, ಇದು ಹಿಂದಿನ ವೈರಸ್‍ಗಿಂತಲೂ ಬಹಳ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಖುದ್ದು ಪ್ರಧಾನಿಯವರೇ ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವ ಯಾವ ಮುನ್ನಚ್ಚರಿಕೆಗಳನ್ನು ಕೈಗೊಳ್ಳಬೇಕೊ ಅವೆಲ್ಲವನ್ನೂ ಕೈಗೊಳ್ಳಲಾಗಿದೆ ಎಂದರು.


SC/ST ನೌಕರರ ಬಡ್ತಿ, ಬ್ಯಾಕ್ ಲಾಗ್ ಹುದ್ದೆ ಭರ್ತಿ: ಸಮಸ್ಯೆ ನಿವಾರಣೆಗೆ ಸಮಿತಿ ರಚಿಸಲು ಸಿದ್ದರಾಮಯ್ಯ ಒತ್ತಾಯ


ವರ್ಷಾಚರಣೆಗೆ ಈಗಾಗಲೇ ಬಿಬಿಎಂಪಿ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಬಂಧ ಹಾಕಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಬಾರಿ ಹೊಸ ವರ್ಷಾಚರಣೆ ರಾಜ್ಯದಲ್ಲಿ ಇರುವುದಿಲ್ಲ. ಇದನ್ನು ಪ್ರತಿಯೊಬ್ಬರು ಪಾಲನೆ ಮಾಡಲೇಬೇಕೆಂದು ಸಿಎಂ ಮನವಿ ಮಾಡಿದರು. ಕೊರೊನಾ ಅಲೆ ಇರುವುದರಿಂದ ಹೊಸ ವರ್ಷಾಚರಣೆಯನ್ನು ಯಾರೊಬ್ಬರೂ ಆಚರಿಸಲೇಬಾರದು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆಂದು ಹೇಳಿದರು.


BBMP Actಗೆ ರಾಜ್ಯಪಾಲರ ಅನುಮೋದನೆ: ಕಾಯ್ದೆಯ ಪ್ರಮುಖ ಅಂಶಗಳು


ಬ್ರಿಟನ್‍ನಲ್ಲಿ ಬೇರೆ ರೂಪದ ವೈರಸ್ ಕಾಣಿಸಿಕೊಂಡಿರುವುದರಿಂದ ನಮ್ಮ ಸರ್ಕಾರ ಕೂಡ ಈಗಾಗಲೇ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ವಿದೇಶಿಗರು ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಕೋವಿಡ್ ಟೆಸ್ಟ್ , ಹೋಂ ಕ್ವಾರಂಟೇನ್ ಸೇರಿದಂತೆ ನಾನಾ ರೀತಿಯ ಮುಂಜಾಗ್ರತೆ ವಹಿಸಿದ್ದೇವೆ. ಸದ್ಯಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


Gram Panchayat Election: ಮೊದಲ ಹಂತದ ಚುನಾವಣೆಯ ಮತದಾನ ಆರಂಭ