BBMP Actಗೆ ರಾಜ್ಯಪಾಲರ ಅನುಮೋದನೆ: ಕಾಯ್ದೆಯ ಪ್ರಮುಖ ಅಂಶಗಳು

ಬಿಬಿಎಂಪಿ ಆಯುಕ್ತರನ್ನು ರಾಜಕೀಯ ಕಾರಣಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲಾಗಿದ್ದು ಆಯುಕ್ತರ ಅಧಿ​ಕಾರ ಅವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು ಎಂದು ನೂತನ ಕಾಯಿದೆ ಹೇಳುತ್ತದೆ.

Written by - Yashaswini V | Last Updated : Dec 22, 2020, 10:45 AM IST
  • ಬಡವರಿಗೆ ಕಸದ ಶುಲ್ಕದಲ್ಲಿ ಶೇಕಡಾ 50ರಷ್ಟು ವಿನಾಯಿತಿ
  • ಬಿಬಿಎಂಪಿ ವಾರ್ಡುಗಳ ಸಂಖ್ಯೆ 198ರಿಂದ 243ಕ್ಕೆ ಏರಿಕೆ
  • ಮೇಯರ್‌ - ಉಪಮೇಯರ್‌ ಅವಧಿ 1ರಿಂದ ಎರಡೂವರೆ ವರ್ಷಗಳಿಗೆ ಹೆಚ್ಚಳ
BBMP Actಗೆ ರಾಜ್ಯಪಾಲರ ಅನುಮೋದನೆ: ಕಾಯ್ದೆಯ ಪ್ರಮುಖ ಅಂಶಗಳು title=
Highlights of BBMP Act (File Image)

ಬೆಂಗಳೂರು: ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆಗೆ ತಂದಿದ್ದ ತಿದ್ದುಪಡಿಗೆ (BBMP Act amendment) ರಾಜ್ಯಪಾಲ ವಜೂಭಾಯ್ ವಾಲಾ ಅಂಕಿತಹಾಕಿದ್ದಾರೆ.

ರಾಜ್ಯ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯಿದೆಗೆ ತಂದಿದ್ದ ತಿದ್ದುಪಡಿಗೆ ರಾಜ್ಯಪಾಲ ವಜೂಭಾಯ್ ವಾಲಾ ಅಂಕಿತ ಹಾಕಿರುವುದರಿಂದ ಮುಂದೆ ಬಿಬಿಎಂಪಿ ವ್ಯಾಪ್ತಿ ಹಿರಿದಾಗಲಿದೆ. ನೂತನ ಕಾಯಿದೆಯ ಪ್ರಮುಖ ಅಂಶಗಳು ಈ ರೀತಿ ಇವೆ.

- ನೂತನ‌ ತಿದ್ದುಪಡಿಗೆ ಅನುಗುಣವಾಗಿ ಬಿಬಿಎಂಪಿಯ (BBMP) ರಚನೆಯಾಗಲಿದ್ದು ಬಿಬಿಎಂಪಿ ವ್ಯಾಪ್ತಿ ಮತ್ತಷ್ಟು ಹಿರಿದಾಗಲಿದೆ. ಕಾಯಿದೆ ಪ್ರಕಾರ ಬಿಬಿಎಂಪಿ ಸುತ್ತಾ 1 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿರುವ ಗ್ರಾಮ, ಗ್ರಾಮ ಪಂಚಾಯಿತಿ (Gram Panchayat), ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗೆ ಸೇರಿದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಇದರಿಂದ ಬಿಬಿಎಂಪಿ ವಾರ್ಡುಗಳ ಸಂಖ್ಯೆ 198ರಿಂದ 243ಕ್ಕೆ ಏರಿಕೆ ಆಗಲಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ʼBPL ಕಾರ್ಡ್ ಹೊಂದಿರುವ ಕುಟುಂಬʼಗಳಿಗೆ ಸಿಹಿ ಸುದ್ದಿ!

- ಮೇಯರ್‌ ಹಾಗೂ ಉಪಮೇಯರ್‌ ಅವಧಿಯನ್ನು 1 ವರ್ಷದಿಂದ ಎರಡೂವರೆ ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ನೂತನ ಕಾಯಿದೆಯಲ್ಲಿ ಮೇಯರ್‌ ಹಾಗೂ ಉಪ ಮೇಯರ್‌ ಕಾರ್ಯವ್ಯಾಪ್ತಿಗಳ ಬಗ್ಗೆಯೂ ಉಲ್ಲೇಖವಿದೆ. ಮೇಯರ್‌ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ವರದಿ ಅಥವಾ ಮಾಹಿತಿ ಕೇಳಿದರೆ 15 ದಿನಗಳೊಳಗಾಗಿ ಮುಖ್ಯ ಆಯುಕ್ತರು ನೀಡಬೇಕು.

- ಬಿಬಿಎಂಪಿಯ ಆಡಳಿತಾತ್ಮಕ ಮುಖ್ಯಸ್ಥರಾಗಿ ಇರುವ ಆಯುಕ್ತ ಹುದ್ದೆಯನ್ನು ಮುಖ್ಯ ಹುದ್ದೆಯನ್ನಾಗಿ ಪರಿವರ್ತಿಸುವಂತೆ ಕಾಯಿದೆ ಹೇಳುತ್ತದೆ‌. ರಾಜ್ಯ ಸರ್ಕಾ​ರದ ಪ್ರಧಾನ ಕಾರ್ಯ​ದ​ರ್ಶಿಯ ಹುದ್ದೆ​ಗಿಂತ ಕಡಿಮೆ ಇಲ್ಲದ​ವ​ರ​ನ್ನು ಆಯುಕ್ತರಾಗಿ ನೇಮ​ಕ ಮಾಡಬೇಕಾಗುತ್ತದೆ.

- ಬಿಬಿಎಂಪಿ ಆಯುಕ್ತರನ್ನು ರಾಜಕೀಯ ಕಾರಣಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇದಕ್ಕೆ ಬ್ರೇಕ್ ಹಾಕಲಾಗಿದ್ದು ಆಯುಕ್ತರ ಅಧಿ​ಕಾರ ಅವಧಿ ಎರ​ಡು ವರ್ಷ​ಗ​ಳಿ​ಗಿಂತ ಕಡಿಮೆ ಇಲ್ಲ​ದಂತೆ ನಿಯೋ​ಜನೆ ಮಾಡಬೇಕು ಎಂದು ನೂತನ ಕಾಯಿದೆ ಹೇಳುತ್ತದೆ.

ಇದನ್ನೂ ಓದಿ: ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ...!

- ಎರಡು ವರ್ಷದ ಮುಖ್ಯ ಆಯು​ಕ್ತರ ಆಡ​ಳಿತ ಹಾಗೂ ನಿರ್ವ​ಹಣೆ ರಾಜ್ಯ ಸರ್ಕಾ​ರಕ್ಕೆ ತೃಪ್ತಿ​ಕ​ರ​ವಾದ​ರೆ, ಆಯುಕ್ತರ ಅಧಿ​ಕಾರ ಅವ​ಧಿ​ಯ​ನ್ನು ಮುಂದು​ವ​ರಿ​ಸಬಹುದಾಗಿದೆ. ಅದೇ ರೀತಿ ಅವಧಿಗೆ ಮೊದಲೇ ಆಯುಕ್ತರನ್ನು ವರ್ಗಾವಣೆ ಮಾಡಬೇಕಾದರೆ ಕಾರಣಗಳನ್ನು ತಿಳಿಸಬೇಕಾಗುತ್ತದೆ‌.

- ಆಯುಕ್ತರು ಮಾತ್ರವಲ್ಲದೆ ವಲಯ ಆಯುಕ್ತರ ವ್ಯಾಪ್ತಿಯನ್ನು ಕಾಯ್ದೆಯಲ್ಲಿ ವಿವರಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ ಹಂತಕ್ಕಿಂತ ಕಡಿಮೆ ಇಲ್ಲದ ಅಧಿಕಾರಿಯನ್ನೇ ವಲಯ ಆಯುಕ್ತರನ್ನಾಗಿ ನೇಮಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ.

- ಬೆಂಗಳೂರಿನಲ್ಲಿ (Bangalore) ತ್ಯಾಜ್ಯ ನಿರ್ವಹಣೆಯೇ ಬಹಳ ದೊಡ್ಡ ಸಮಸ್ಯೆಯಾಗಿದ್ದು ಬಡವರಿಗೆ ಶೇಕಡ 50ರಷ್ಟು ಮಾತ್ರ ಕಸದ ಶುಲ್ಕ ವಿಧಿಸಲು ನೂತನ ಕಾಯ್ದೆ ಸೂಚಿಸಿದೆ.

- ನಗರದಲ್ಲಿ ಸಾರ್ವಜ​ನಿ​ಕರಿಗೆ ತುರ್ತಾಗಿ ಸ್ಪಂದಿ​ಸುವ ಉದ್ದೇ​ಶ​ದಿಂದ ವಿಪತ್ತು ನಿರ್ವ​ಹಣಾ ಸಮಿ​ತಿ​ ರಚನೆ ಮಾಡಿಕೊಳ್ಳಬೇಕಿದೆ.

- ಪಾಲಿ​ಕೆಯ ವ್ಯಾಪ್ತಿ​ಯಲ್ಲಿ ಅಧಿ​ಕಾರ ವಿಕೇಂದ್ರೀ​ಕ​ರಣ ಮಾಡುವ ಉದ್ದೇ​ಶ​ದಿಂದ ವಿಧಾ​ನ​ಸಭಾ ಕ್ಷೇತ್ರ​ವಾರು ಹಾಗೂ ವಾರ್ಡ್‌​ನಲ್ಲಿ ‘ಪ್ರಾಂತ್ಯ ಸಭೆ’ಗಳು ಅಥವಾ ಏರಿಯಾ ಸಭಾಗಳ ರಚನೆ ಮಾಡಲು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಕೆಲವು ಕಡೆ ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಲಕ್ಷ ರೂ.ವರೆಗೆ ದಂಡ

- ಏರಿಯಾ ಸಭಾಗಳಲ್ಲಿ ವಾರ್ಡಿನ ಪ್ರತಿಯೊಬ್ಬ ಮತದಾರರೂ ಸದಸ್ಯರಾಗಿರಲಿದ್ದಾರೆ. ಸಮಿತಿಯು ಶಾಸ​ಕರ ಅಧ್ಯಕ್ಷತೆಯಲ್ಲಿ ಇರಲಿದೆ. ಪಾಲಿಕೆ ವ್ಯಾಪ್ತಿ​ಯಲ್ಲಿ ಇಲ್ಲಿಯ​ವ​ರೆಗೆ ವಾರ್ಡ್‌ ಮಟ್ಟ​ದ ಸಮಿ​ತಿ​ಗಳು ಅಸ್ತಿ​ತ್ವ​ದಲ್ಲಿ ಇದ್ದವು. ಈಗ ಪ್ರತಿ ವಿಧಾ​ನ​ಸಭಾ ಕ್ಷೇತ್ರ​ವಾರು ಸಮಿ​ತಿ​ಗ​ಳನ್ನು ರಚನೆಗೆ ಅವಕಾಶ ಕಲ್ಪಿಸಲಾಗಿದೆ.

- ಹಾಲಿ ಇರುವ ತೆರಿಗೆಗಳ ಜೊತೆಗೆ ಮನೋರಂಜನಾ ತೆರಿಗೆ ವಿಧಿಸಲು ನೂತನ ಕಾಯ್ದೆ ಸೂಚಿಸಿದೆ.

- ಪಾಲಿ​ಕೆ ವ್ಯಾಪ್ತಿಯ ಪ್ರತಿ ವಿಧಾ​ನ​ಸಭಾ ಕ್ಷೇತ್ರ ವ್ಯಾಪ್ತಿ​ಯಲ್ಲಿ ಒಂದು ವಿಧಾ​ನ​ಸಭಾ ಸಮಾ​ಲೋ​ಚನಾ ಸಮಿ​ತಿ​ಯ​ನ್ನು ರಚ​ನೆ ಮಾಡುವಂತೆ ಹೇಳಿದೆ. ಶಾಸ​ಕರು ಸಮಿ​ತಿಯ ಅಧ್ಯ​ಕ್ಷ​ರಾಗಿರಲಿದ್ದಾರೆ. ಸಮಿ​ತಿಯ ಅಧಿ​ಕಾರ 30 ತಿಂಗಳವರೆಗೆ ಇರ​ಲಿದೆ. 

- ಪಾಲಿಕೆ ವ್ಯಾಪ್ತಿ​ಯಲ್ಲಿ ಪ್ರತಿ ವಲ​ಯಕ್ಕೂ ಒಂದೊಂದು ಸಮಿ​ತಿ​ಯನ್ನು ರಚನೆ ಮಾಡಲು ಸೂಚಿಸಲಾಗಿದೆ.

- ಪಾಲಿಕೆಯ ಸ್ಥಾಯಿ ಸಮಿ​ತಿ​ಗಳ ಸಂಖ್ಯೆ 12 ರಿಂದ 15 ಕ್ಕೆ ಏರಿಕೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News