ಪಂಚ ಗ್ಯಾರೆಂಟಿ ಯೋಜನೆಗಳ ಎಷ್ಟೇ ಕಷ್ಟ ಬಂದರು ಅನುಷ್ಠಾನ ಮಾಡುತ್ತೇವೆ!
ವಿಧಾನಸೌಧದಲ್ಲಿ ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತಾನ್ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಮಹಿಳೆಯರಿಗೇ ಸಂಬಂಧಿಸಿದ್ದು ಎಂದರು.
ಬೆಂಗಳೂರು: ವಿಧಾನಸೌಧದಲ್ಲಿ ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಯಲ್ಲಿ ಮಾತಾನ್ನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಮಹಿಳೆಯರಿಗೇ ಸಂಬಂಧಿಸಿದ್ದು,ಯಾವ ಟೀಕೆಗು ತಲೆ ಕೆಡಿಸಿಕೊಳ್ಳುವುದಿಲ್ಲ, ಸೊಪ್ಪು ಹಾಕಲ್ಲ.ಜುಲೈ 1 ರಿಂದ ಗೃಹ ಜ್ಯೋತಿಗೆ ಚಾಲನೆ ಸಿಗಲಿದೆ. ಎಲ್ಲರಿಗೂ 200 ಯುನಿಟ್ ಕೊಡಿ ಎನ್ನುತ್ತಾರೆ,ಅವರಿಗೆ ಜ್ಞಾನ ಇಲ್ಲ, ಎಡಬಿಡಂಗಿ ಮಾತುಗಳು.70 ಯುನಿಟ್ ಬಳಸುತ್ತಿರುವವರುಗೂ 200 ಯುನಿಟ್ ಕೊಡಿ ಎಂದರೆ ಹೇಗೆ?ಎಂದು ಸಿಎಂ ಪ್ರಶ್ನಿಸಿದರು.
ಪಂಚ ಗ್ಯಾರೆಂಟಿ ಯೋಜನೆಗಳ ಎಷ್ಟೇ ಕಷ್ಟ ಬಂದರು ಅನುಷ್ಠಾನ ಮಾಡುತ್ತೇವೆ!:
ಇದನ್ನೂ ಓದಿ: Photo Gallery: ರಾಜ್ಯಾದ್ಯಂತ ಮಹಿಳೆಯರ ಉಚಿತ ಬಸ್ ಪ್ರಯಾಣದ ಕ್ಷಣಗಳು
ನಾವು ಕೊಟ್ಟ ಮಾತು ಹಿಂದೆ ಸರಿಯುವ ಪ್ರಶ್ನೆ ಬರಲ್ಲ. ಆರ್ಥಿಕ ದಿವಾಳಿ ಆಗಲಿದೆ ಹೀಗಾಗಿ ಗ್ಯಾರೆಂಟಿ ಅನುಷ್ಠಾನ ಆಗಲ್ಲ ಎಂದರು. ವಾರ್ಷಿಕವಾಗಿ ₹59,000 ಕೋಟಿ ವೆಚ್ಚ ಆಗಲಿದೆ, ಅನುಷ್ಠಾನ ಮಾಡುತ್ತೇವೆ ಎಂದು ಘೋಷಣೆ ಮಾಡಿದರು.
ಈ ಸಾಲಿಗೆ 40 ಸಾವಿರ ಕೋಟಿ ರೂ ಬೇಕು,ಯಾವ ಜನರಿಗೆ ಖರ್ಚು ಮಾಡುತ್ತೇವೆ ಎನ್ನುವುದು ಮುಖ್ಯ.ದುಡ್ಡಿಲ್ಲ ಎಂದು 5 ಕೆಜಿಗೆ ಅಕ್ಕಿಯನ್ನ ಕಡಿಮೆ ಮಾಡಿದ್ರು,ಈಗ 10 kg ಆಹಾರ ಧಾನ್ಯ ಕೊಡ್ತೇವೆ.ಇದಕ್ಕೆ 10 ಸಾವಿರದ 100 ಕೋಟಿ ರೂ. ಬೇಕು,ರೈತರ ಸಾಲ ಮನ್ನ ಮಾಡದೆ ಬಂಡವಾಳ ಶಾಹಿಗಳ ಸಾಲ ಮನ್ನ ಮಾಡಿದವರು ನಮ್ಮ ಬಗ್ಗೆ ಮಾತನಾಡುತ್ತಾರೆ,ಎಂದು ಮಾತಿನಲ್ಲಿ ಬಿಜೆಪಿ ಸರ್ಕಾರಕ್ಕೆ ಮಾತಿನಲ್ಲಿ ತಿವಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.