Shock To Auto Drivers: ಆಟೋ ಚಾಲಕರು ಹೆಚ್ಚಿನ ಹಣ ಕೇಳುತ್ತಾರೆ, ಕರೆದ ಕಡೆ ಬರೋದೇ ಇಲ್ಲ, ಆಟೋ ಚಾಲಕರು ಯುನಿಫಾರಂ ಬಳಸಲ್ಲ, ರಾತ್ರಿ ವೇಳೆ ಪ್ರಯಾಣಿಕರಿಂದ ದುಪಟ್ಟು ಹಣ ವಸೂಲಿ, ಸೇರಿದಂತೆ  ನಕಲಿ ಇನ್ಸೂರೆನ್ಸ್ ಗಳು, ವಾಹನ ಪರವಾನಿಗೆ ಬಗ್ಗೆ ನಿರಂತರ ದೂರುಗಳು ಕೇಳಿ ಬಂದಿದ್ದವು. 


COMMERCIAL BREAK
SCROLL TO CONTINUE READING

ಆಟೋ ಚಾಲಕರಿಂದ (Auto Drivers) ದಿನ ನಿತ್ಯ ಸಾರ್ವಜನಿಕರಿಗೆ ಆಗುತ್ತಿರುವ ಈ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿ ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಗರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದು, ಅಂತಹವರ ವಿರುದ್ಧ ಕೇಸ್‌ ದಾಖಲಿಸಿ ದಂಡ ವಿಧಿಸಿದ್ದಾರೆ.   


ಇದನ್ನೂ ಓದಿ- Car Reselling: ಹಳೆಯ ಕಾರನ್ನು ಮಾರಾಟ ಮಾಡಬೇಕೇ..? ಹಾಗಾದ್ರೆ ಹೀಗೆ ಮಾಡಿ, ಉತ್ತಮ ಹಣ ಗಳಿಸಿ..!


ಚಿಂತಾಮಣಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಹಾಗೂ ತಂಡ ನಗರ ಭಾಗದ ವಿವಿಧ ಸರ್ಕಲ್ ಗಳಲ್ಲಿ ದಾಖಲೆಗಳು ಹಾಗೂ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಓಡಿಸುತ್ತಿದ್ದ ಆಟೋ (Auto) ರಿಕ್ಷಗಳನ್ನು ಹಿಡಿದು ದಂಡ ವಿಧಿಸಿ ಕಳುಹಿಸಿದ್ದಾರೆ.


ಇದನ್ನೂ ಓದಿ- ಆಟೋ ಪ್ರಯಾಣಿಕರಿಗೆ ಶಾಕ್-ಇನ್ಮೆ‌ಲೆ ವರ್ಷಕೊಮ್ಮೆ ಆಟೋ ಮೀಟರ್ ದರ...!?


ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಠಾಣೆಯ ಆರಕ್ಷಕ ನಿರೀಕ್ಷಕರದ ವಿಜಿ ಕುಮಾರ್, ಹಲವು ಆಟೋ ಚಾಲಕರು ರಾತ್ರಿ ವೇಳೆ ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ವಾಹನ ಪರವಾನಿಗೆ, ನಕಲಿ ಇನ್ಸೂರೆನ್ಸ್ ಗಳು ಮಾಡಿಕೊಂಡು ಆಟೋ ಓಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮಂಗಳವಾರದ (ಜುಲೈ 09) ದಿನ 50ಕ್ಕೂ ಹೆಚ್ಚು ಆಟೋಗಳನ್ನು ಸೀಸ್ ಮಾಡಿ ದಂಡ ವಿಧಿಸಲಾಗಿದೆ.  ಮುಂದಿನ ದಿನಗಳಲ್ಲಿ ಇದೆ ಮುಂದುವರೆದರೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದರ ಬಗ್ಗೆ ಆಟೋ ಚಾಲಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿರುವದಾಗಿ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.