ಆಟೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದ ಬ್ರೇಕ್, BMRCL ಮಹತ್ವದ ನಿರ್ಧಾರ

ನಮ್ಮ ಮೆಟ್ರೋ ನಿಲ್ದಾಣದಿಂದ ಕಾರ್ಯಾಚರಿಸುವ ಆಟೋ ಚಾಲಕರಿಗೆ BMRCL ಶಾಕ್ ನೀಡಿದೆ. ಆಟೋ ಚಾಲಕರ ಸುಲಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ನಿರ್ಧಾರ ಕೈಗೊಂಡಿದೆ. 

Written by - Ranjitha R K | Last Updated : Oct 4, 2022, 10:45 AM IST
  • ಆಟೋ ಪ್ರಯಾಣಿಕರಿಗೆ ಸಿಹಿ ಸುದ್ದಿ
  • ಆಟೋ ಚಾಲಕರಿಗೆ ಶಾಕಿಂಗ್ ನ್ಯೂಸ್
  • BMRCL ಮಹತ್ವದ ನಿರ್ಧಾರ
ಆಟೋ ಪ್ರಯಾಣಿಕರಿಗೆ ಸಿಹಿ ಸುದ್ದಿ : ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದ ಬ್ರೇಕ್, BMRCL ಮಹತ್ವದ ನಿರ್ಧಾರ title=
pre paid auto in nmma metro station (file photo)

ಬೆಂಗಳೂರು : ಆಟೋ ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದಲೇ ಬ್ರೇಕ್ ಬಿದ್ದಿದೆ. ಬಿಎಂ ಆರ್ ಸಿಎಲ್  ನಿರ್ಧಾರದಿಂದ ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆದರೆ ಆಟೋ ಚಾಲಕರಿಗೆ ಮಾತ್ರ ಈ ನಿರ್ಧಾರ ಶಾಕ್ ನೀಡಿದೆ. 

ನಮ್ಮ ಮೆಟ್ರೋ ನಿಲ್ದಾಣದಿಂದ ಕಾರ್ಯಾಚರಿಸುವ ಆಟೋ ಚಾಲಕರಿಗೆ BMRCL ಶಾಕ್ ನೀಡಿದೆ. ಹೌದು, ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿ  ಪ್ರೀಪೇಡ್ ಆಟೋ ವ್ಯವಸ್ಥೆ ಮಾಡಲಾಗುವುದು.  ಆಟೋ ಚಾಲಕರ ಸುಲಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ. 

ಇದನ್ನೂ ಓದಿ : CFI ಮೇಲೆ ದಾಳಿ ವೇಳೆ ಸಿಕ್ಕಿದೆ ಯುವ ಸಮೂಹವನ್ನು ಬ್ರೈನ್ ವಾಶ್ ಮಾಡುವ ನರಮೇಧದ ಪತ್ರ

ಇನ್ನು ಮುಂದೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಿಪೇಯ್ಡ್ ಆಟೋ ಸೇವೆ  ಲಭ್ಯವಾಗಲಿದೆ. ಡಿಸೆಂಬರ್ ಒಂದರಿಂದಲೇ ಪ್ರಿಪೇಡ್ ಆಟೋ ಸೇವೆ ಆರಂಭವಾಗುವ ನಿರೀಕ್ಷೆ ಇದೆ.  ಬನಶಂಕರಿ, ಬೈಯಪ್ಪನಹಳ್ಳಿ, ನಾಗಸಂದ್ರ, ಮೆಜೆಸ್ಟಿಕ್ ನಲ್ಲಿ ಪ್ರಾಯೋಗಿಕ ಪ್ರೀ ಪೇಯ್ಡ್ ಆಟೋ ಆರಂಭವಾಗಲಿದೆ.

RTO ನಿಗದಿ ಪಡಿಸಿರುವ ಮೀಟರ್ ದರಕ್ಕೆ ಅನುಗಗುಣವಾಗಿಯೇ ಪ್ರೀ ಪೇಯ್ಡ್ ಆಟೋ ದರ ನಿಗದಿ ಮಾಡಲಾಗುವುದು. ರಾತ್ರಿ ಹೊತ್ತು  ಒಂದೂವರೆ ಪಟ್ಟು ದರ ಪಾವತಿಸಬೇಕಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ದಿನದ 24 ತಾಸೂ ಕೂಡ ಆಟೋ ಸೇವೆ ಲಭ್ಯವಾಗಲಿದೆ. 

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆ: ಮೈಸೂರಿಗೆ ಸೋನಿಯಾ ಗಾಂಧಿ ಆಗಮನ

RTO ನಿಗದಿ ಮಾಡಿರುವ ಆಟೋ ದರ : 
• ಮೊದಲ‌ 1.8kmಗೆ ₹30 ಆಟೋ ಸಾಮಾನ್ಯ ದರ
• ನಂತರದ ಪ್ರತಿ kmಗೆ ₹15 ದರ ನಿಗದಿ
• ಮೊದಲ ಐದು ನಿಮಿಷ ಕಾಯುವಿಕೆ ಉಚಿತ
• ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ ₹5
•  20 kg ವರೆಗೆ ಲಗೇಜ್ ಸಾಗಣೆ ಉಚಿತ
• 21 kg ಇಂದ 50 kg ವರೆಗೆ ₹5 ದರ ನಿಗದಿ
• ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (₹30+₹15)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News