Chikkaballapur Lok Sabha constituency history : ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. 2014ರಲ್ಲಿ ಮೊಯ್ಲಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಕಾಂಗ್ರೆಸ್‌ ಕೋಟೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡದ್ದು ರಾಜಕೀಯ ಇತಿಹಾಸ. ಆರೆಸ್ಸೆಸ್‌ ಹಾಗೂ ಬಿಜೆಪಿಗೆ ನೆಲೆಯೇ ಇಲ್ಲದ ಚಿಕ್ಕಬಳ್ಳಾಪುರದಲ್ಲಿ 2009ರಿಂದ ಮಾತ್ರವೇ ಬಿಜೆಪಿ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿ ಸ್ಪರ್ಧೆ ಒಡ್ಡುತ್ತಾ ಬರುತ್ತಿದೆ. ಅಲ್ಲಿಯವರೆಗೆ ಕ್ಷೇತ್ರದಲ್ಲಿ ಜನತಾ ದಳ ಮತ್ತು ಕಾಂಗ್ರೆಸ್‌ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳು ಆಗಿದ್ದವು.


COMMERCIAL BREAK
SCROLL TO CONTINUE READING

ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಒಕ್ಕಲಿಗರು, ಬಲಿಜಿಗರು ಪ್ರಾಬಲ್ಯ ಹೊಂದಿದ್ದಾರೆ ಆದರೆ ಕ್ಷೇತ್ರದಲ್ಲಿ ಬಹುತೇಕರು ಅಹಿಂದ ವರ್ಗದ ಅಲ್ಪಸಂಖ್ಯಾಕರೇ ಸಂಸದರಾಗಿ ಆಯ್ಕೆಗೊಂಡಿದ್ದರು ಮೊದಲ ಹಾಗೂ ಕಳೆದ ಚುನಾವಣೆಯಲ್ಲಿ ಎಂ.ವಿ. ಕೃಷ್ಣಪ್ಪ ಮತ್ತು ಬಿ.ಎನ್‌. ಬಚ್ಚೇಗೌಡರಂಥ ಒಕ್ಕಲಿಗರು ಗೆದ್ದಿದ್ದು ಬಿಟ್ಟರೆ, ಉಳಿದಂತೆ ವಿ.ಕೃಷ್ಣರಾವ್‌, ಪ್ರಸನ್ನಕುಮಾರ್‌, ಆರ್‌.ಎಲ್‌.ಜಾಲಪ್ಪ, ವೀರಪ್ಪ ಮೊಲಿ ಹಲವು ಬಾರಿ ಸಂಸದರಾಗಿದ್ದಾರೆ. ವಿಶೇಷ ಅಂದರೆ ಕ್ಷೇತ್ರದಲ್ಲಿ ವಿ.ಕೃಷ್ಣ ರಾವ್‌ (1984ರಿಂದ 1991) ಹಾಗೂ ಜಾಲಪ್ಪ 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಬಳಿಕ 1998ರಿಂದ 2004ರ ವರೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. 2009, 2014ರಲ್ಲಿ ಮೊಯ್ಲಿ ಸತತ ಗೆಲುವು ಪಡೆದರು. ಆದರೆ 2019ರಲ್ಲಿ 3ನೇ ಬಾರಿಗೆ ಗೆಲುವು ಪಡೆಯಲಾಗಲಿಲ್ಲ.


ಇದನ್ನೂ ಓದಿ: ಲೋಕಸಭೆ ಚುನಾವಣೆ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಧೂಳಿಪಟ : ಬಿ.ವೈ. ವಿಜಯೇಂದ್ರ


* 1977: ಎಂ.ವಿ. ಕೃಷ್ಣಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1980: ಎಸ್.ಎನ್. ಪ್ರಸನ್ನ ಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1984: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1989: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1991: ವಿ. ಕೃಷ್ಣ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1996: ಆರ್.ಎಲ್. ಜಾಲಪ್ಪ, ಜನತಾ ದಳ
* 1998: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 1999: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 2004: ಆರ್.ಎಲ್. ಜಾಲಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 2009: ಎಂ. ವೀರಪ್ಪ ಮೊಯಿಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 2014: ಎಂ. ವೀರಪ್ಪ ಮೊಯಿಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
* 2019: ಬಿ.ಎನ್.ಬಚ್ಚೇಗೌಡ, ಭಾರತೀಯ ಜನತಾ ಪಕ್ಷ


ವಿಧಾನಸಭಾ ಕ್ಷೇತ್ರಗಳು
* ಗೌರಿಬಿದನೂರು
* ಬಾಗೇಪಲ್ಲಿ
* ಚಿಕ್ಕಬಳ್ಳಾಪುರ
* ಯಲಹಂಕ
* ಹೊಸಕೋಟೆ
* ದೇವನಹಳ್ಳಿ
* ದೊಡ್ಡಬಳ್ಳಾಪುರ
* ನೆಲಮಂಗಲ


2019 ಲೋಕಸಭಾ ಚುನಾವಣೆಯ ಫಲಿತಾಂಶ
ಕ್ಷೇತ್ರ : ಚಿಕ್ಕಬಳ್ಳಾಪುರ ಲೋಕಸಭಾ
ಸಂಸದರು : ಬಚ್ಚೇಗೌಡ- ಬಿಜೆಪಿ
ಪಡೆದ ಮತ : 7,45,912 (% 53.78% )
ಪ್ರತಿ ಸ್ಪರ್ಧಿ : ವೀರಪ್ಪ ಮೊಯ್ಲಿ
ಪಡೆದ ಮತ : 5,63,912 (%40.65 % )
ನಿರ್ಣಾಯಕ ಜಾತಿ: ಒಕ್ಕಲಿಗ, ದಲಿತ, ಬ್ರಾಹ್ಮ, ಮುಸ್ಲಿಂ
ಒಟ್ಟು ಮತದಾರರ ಸಂಖ್ಯೆ : 13.87.987



 ಇನ್ನು ಕ್ಷೇತ್ರದಲ್ಲಿ ಜಾತಿವಾರು ನೋಡೋದಾದ್ರೆ
* ಒಕ್ಕಲಿಗ    7,40,00
* ದಲಿತ    5,80,000
* ಮುಸ್ಲಿಂ    1,20,000
* ಬಲಿಜ    1,40,000
* ಕುರುಬ    88,000
* ಎಸ್‌ಟಿ    55,000
* ಇತರೆ       80,000


ಬಿಜೆಪಿ ಅಭ್ಯರ್ಥಿ ಪರಿಚಯ
* ಹೆಸರು ಕೆ ಸುಧಾಕರ್
* ಹುಟ್ಟಿದ ದಿನಾಂಕ 27/06/ 1973 
* ಹುಟ್ಟಿದ ಸ್ಥಳ: ಪೇರೆಸಂದ್ರ
* ಪಕ್ಷದ ಹೆಸರು: ಬಿಜೆಪಿ
* ಶಿಕ್ಷಣ : ಎಂಬಿಬಿಎಸ್ ಸಿದ್ದಾರ್ಥ ವೈದ್ಯಕೀಯ ಕಾಲೇಜು
* ತಂದೆಯ ಹೆಸರು:  ಪಿ ಎನ್ ಕೇಶವರೆಡ್ಡಿ(ನಿವೃತ್ತ ಶಿಕ್ಷಕ )
* ಪತ್ನಿಯ ಹೆಸರು :  ಪ್ರೀತಿ
* ಜಾತಿ : ಒಕ್ಕಲಿಗ
* ವಿಳಾಸ :  ಸದಾಶಿವನಗರ, ಬೆಂಗಳೂರು


ರಾಜಕೀಯ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ ಕೆ.ಸುಧಾಕರ್ ನಾಲ್ಕನೇ ಬಿ.ಎಸ್.ಯಡಿಯೂರಪ್ಪ ಮಂತ್ರಿಮಂಡಲದಲ್ಲಿ ಅತ್ಯಂತ ಕಿರಿಯ ಕ್ಯಾಬಿನೆಟ್ ಸಚಿವ


* 2020 - 2023
ಕರ್ನಾಟಕ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ


* 2020 - 2023
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ 


* 2013 - 2020 ಕಾಂಗ್ರೆಸ್ ಪಕ್ಷದಿಂದ 
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.