ಈ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ ಹೊರೆ ಇಲ್ಲ!
ವಿದ್ಯಾರ್ಥಿಯ ದೇಹದ ತೂಕಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಭಾರ ಇರುವ ಶಾಲಾ ಬ್ಯಾಗ್ ಹೊರುವ ಹೊರೆ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿರುವ ಶಾಶ್ವತ ಸಮಸ್ಯೆಯಾಗಿದೆ. ಇದನ್ನು ಮನಗೊಂಡ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯು, ತನ್ನ ಎಲ್ಲಾ ೬೦ ಶಾಖೆಗಳಲ್ಲಿ ನಿಯಮಿತವಾಗಿ ಮಕ್ಕಳ ಬ್ಯಾಗ್ ತಪಾಸಣೆ ನಡೆಸುತ್ತಿದೆ. ಬ್ಯಾಗ್ ಗಳ ನಿರಂತರ ಹೊರೆಯಿಂದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು, ಎಲ್ಲಾ ಶಾಖೆಗಳಲ್ಲಿ ತೂಕಯಂತ್ರದ ಮೂಲಕ ಬ್ಯಾಗ್ ತೂಕವನ್ನು ಅಳೆಯಲಾಗುತ್ತದೆ.
ಇದನ್ನೂ ಓದಿ-Viral News: ನೋಡನೋಡುತ್ತಲೇ ಮಹಿಳೆಯನ್ನ ಗಬಕ್ಕನೆ ನುಂಗಿದ ಹೆಬ್ಬಾವು: ಭಯಾನಕ ದೃಶ್ಯ ನೋಡಿ
ಕಳೆದ ಎರಡು ದಶಕಗಳಲ್ಲಿ ಹೆಚ್ಚಿನ ಬ್ಯಾಗ್ ಹೊರೆಯು ಶಿಕ್ಷಣ ವ್ಯವಸ್ಥೆಯ ಜ್ವಲಂತ ಸಮಸ್ಯೆಯಾಗಿದ್ದು, ಈ ಬಗ್ಗೆ ಶಿಕ್ಷಣ ಹಾಗೂ ಆರೋಗ್ಯ ತಜ್ಞರು ಧ್ವನಿ ಎತ್ತಿದ್ದರು.NCERT ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಮಕ್ಕಳ ಮೇಲೆ ಬೀರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಸವಿವರವಾದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಅದರ ಆಧಾರದ ಮೇಲೆ ಕೇಂದ್ರ ಶಿಕ್ಷಣ ನಿರ್ದೇಶನಾಲಯವು 'ಸ್ಕೂಲ್ ಬ್ಯಾಗ್ ಪಾಲಿಸಿ 2020' ಅಡಿಯಲ್ಲಿ '1 ರಿಂದ 10 ನೇ ತರಗತಿಯವರೆಗೆ' ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳು ಒಯ್ಯುವ ಶಾಲಾ ಬ್ಯಾಗ್‌ಗಳ ತೂಕ ಅವರ ದೇಹದ ತೂಕದ ಶೇ.10ಕ್ಕಿಂತ ಹೆಚ್ಚಿರಬಾರದು ಎಂದು ಆದೇಶ ನೀಡಿದೆ.
ಕೇಂದ್ರ ಶಿಕ್ಷಣದ ಆದೇಶಕ್ಕೆ ಅನುಗುಣವಾಗಿ, ಆರ್ಕಿಡ್ಸ್ ಸಂಸ್ಥೆಯು ಪ್ರತಿ ತರಗತಿಗಳಿಗೆ ಬ್ಯಾಗ್ ತೂಕವನ್ನು ನಿಗದಿಪಡಿಸಿದೆ
ತರಗತಿ |
ಬ್ಯಾಗ್ ತೂಕ |
---|---|
I, II |
2.5kg |
III, IV, V |
2-3 kg |
VI, VII |
4kg |
VIII,IX, |
4.5 kg |
X |
5 kg |
"ಕಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ಶಾಲಾ ಬ್ಯಾಗ್‌ಗಳ ಅಳತೆಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ
ಅವರು ತಮ್ಮ ಶಾಲಾ ಬ್ಯಾಗ್‌ಗಳ ತೂಕವನ್ನು ತಿಳಿಯಲು ಸದಾ ಕುತೂಹಲದಿಂದ ಇರುತ್ತಾರೆ.. ಚೀಲವನ್ನು ಪರಿಶೀಲಿಸಲು ಶಾಲೆಯಲ್ಲಿ ತೂಕದ ಯಂತ್ರವನ್ನುಇರಿಸಲಾಗಿದೆ. ಶಾಲೆಯ ಭದ್ರತಾ ಸಿಬ್ಬಂದಿಗಳು ಬ್ಯಾಘ್ ತೂಕ ಜಾಸ್ತಿ ಇರುವ ವಿದ್ಯಾರ್ತಿಗಳ ಬ್ಯಾಗನ್ನು ಪರಿಶೀಲಿಸಿ, ಖಾಸಗಿ ವಸ್ತುಗಳು ಕಂಡು ಬಂದರೆ ಪೋಷಕರಿಗೆ ತಿಳಿಸುತ್ತೇವೆ. ತರಗತಿಯ ಮುಖ್ಯ ಶಿಕ್ಷಕಿ ಕೂಡ ಈ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುತ್ತಾರೆ”ಎಂದು ಆರ್ಕಿಡ್ಸ್ ದಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸುರಕ್ಷತೆ ಮತ್ತು ಭದ್ರತಾ ಅಧಿಕಾರಿ ರಮೇಶ್ ಡಿಪ್ಲಿ ಹೇಳಿದರು.
ಇದನ್ನೂ ಓದಿ-Swarm Of Bees: ಯುವಕನ ಕೈಮೇಲೆ ಗೂಡು ಕಟ್ಟಿದ ಜೇನುನೊಣಗಳು... ವಿಡಿಯೋ ನೋಡಿ
“ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ನಲ್ಲೊ ಹೆಚ್ಚಾಗಿ ಆಟ ಸಾಮಾನುಗಳು ಕಾಣಸಿಗುತ್ತವೆ. ಕೆಲವೊಮ್ಮೆ ಮಕ್ಕಳು ತರಾತುರಿಯಲ್ಲಿ ಮನೆಯ ವಸ್ತುಗಳನ್ನು ಬ್ಯಾಗ್ ನಲ್ಲಿ ಇರಿಸುತ್ತಾರೆ. ಎಲ್ಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬ್ಯಾಗ್ ಪರಿಶೀಲನೆ ನಡೆಸುತ್ತೇವೆ. ಇದರಿಂದ ಯಾವುದನ್ನು ತರಬಾರದು ಎಂಬ ಅರಿವು ವಿದ್ಯಾರ್ಥಿಗಳಿಗೆ ಇರುತ್ತದೆ. ಹಾಗೆಯೇ ಪ್ರಾಥಮಿಕ ವಿದ್ಯಾರ್ಥಿಗಳಿಗೆ ತೆಳುವಾದ ನೋಟು ಪುಸ್ತಕಗಳನ್ನು ವಿತರಿಸಲಾಗಿದೆ. ಕೆಲವು ಪುಸ್ತಕಗಳನ್ನು ಶಾಲೆಯಲ್ಲೇ ಇರಿಸಲು ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಜಾಗವನ್ನು ನೀಡಲಾಗಿದೆ” ಎನ್ನುತ್ತಾರೆ ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆ ಮೈಸೂರು ರಸ್ತೆ ಶಾಖೆಯ ಪ್ರಾಂಶುಪಾಲೆ ಲೀನಾ ಪಾಸ್ಕಲ್ .
ಭಾರವಾದ ಶಾಲಾ ಚೀಲವು ಬೆಳೆಯುತ್ತಿರುವ ಮಕ್ಕಳ ಮೇಲೆ ಅನಿಶ್ಚಿತ ದೈಹಿಕ ಪರಿಣಾಮಗಳನ್ನು ಬೀರುತ್ತದೆ. ಮಕ್ಕಳಲ್ಲಿ ಎದುರಾಗಬಹುದಾದ ಸಮಸ್ಯೆಗಳು ಈ ಕೆಳಗಿನಂತಿವೆ
ಕುತ್ತಿಗೆ ಸ್ನಾಯು ಸೆಳೆತ
ಬೆನ್ನುಮೂಳೆ ಸಮಸ್ಯೆ
ತಲೆ ನೋವು, ಭುಜ ನೋವು ಹಾಗೂ ತೋಳು ನೋವು
ದೇಹದ ಭಂಗಿಯನ್ನು ಬದಲಿಸುತ್ತದೆ.
ನರಮಂಡಲ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ದೀರ್ಘಕಾಲದವರೆಗೆ ದೇಹದಲ್ಲಿ ಅಸಮತೋಲವನ್ನು ಉಂಟುಮಾಡುತ್ತದೆ
ಬ್ಯಾಗ್ ತಪಾಸಣಾ ಕ್ರಮವು ಪೋಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ ಮತ್ತು ಅವರು ಶಾಲೆಯ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ