Swarm Of Bees: ಯುವಕನ ಕೈಮೇಲೆ ಗೂಡು ಕಟ್ಟಿದ ಜೇನುನೊಣಗಳು... ವಿಡಿಯೋ ನೋಡಿ

Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನರು ಅವಾಕ್ಕಾಗಿದ್ದಾರೆ. ತನ್ನಷ್ಟಕ್ಕೆ ತಾನೇ ಅದ್ಭುತವಾಗಿರುವ ಈ ವಿಡಿಯೋದಲ್ಲಿ ಆಘಾತಕಾರಿ ಸಂಗತಿ ಎಂದರೆ ಯುವಕನ ಇಡೀ ಕೈ ಜೇನುನೊಣಗಳಿಂದ ಆವರಿಸಿದೆ. ಆದರೆ, ಯುವಕನಿಗೆ ಮಾತ್ರ ಯಾವುದೇ ರೀತಿಯ ತೊಂದರೆಯಾಗಿಲ್ಲ.  

Written by - Nitin Tabib | Last Updated : Oct 28, 2022, 03:37 PM IST
  • ಯುವಕನ ಎಡಗೈ ಮೇಲೆ ಜೇನುನೊಣಗಳು ಗೂಡು ಕಟ್ಟಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
  • ಯುವಕ ತನ್ನ ಮುಷ್ಠಿಯನ್ನು ಕಟ್ಟಿದ್ದಾನೆ ಮತ್ತು
  • ಅವನು ಜೇನುನೊಣಗಳಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿಲ್ಲ.
Swarm Of Bees: ಯುವಕನ ಕೈಮೇಲೆ ಗೂಡು ಕಟ್ಟಿದ ಜೇನುನೊಣಗಳು... ವಿಡಿಯೋ ನೋಡಿ title=
Swarm Of Bees On Youth Arm

Swarm Of Bees On Arms Of Boy: ಇಂಟರ್ನೆಟ್ ಜಗತ್ತಿನಲ್ಲಿ ಹಲವು ವಿಸ್ಮಯಕಾರಿ ಸಂಗತಿಗಳು ನಿತ್ಯ ನೋಡಲು ಸಿಗುತ್ತವೆ. ಅವು ನಿಜವೋ ಅಥವಾ ಸುಳ್ಳೋ ಎಂಬುದನ್ನು ನಂಬುವುದು ಸ್ವಲ್ಪ ಕಷ್ಟಸಾಧ್ಯವೇ ಸರಿ. ಯುವಕನ ಕೈಮೇಲೆ ಜೇನುಗಳು ಗೂಡು ಕಟ್ಟಿರುವ ಆಘಾತಕಾರಿ ವಿಡಿಯೋವೊಂದು ಇದೀಗ ಮುನ್ನಲೆಗೆ ಬಂದಿದೆ. ವಿಶೇಷ ಎಂದರೆ, ಜೇನುನೊಣಗಳ ಜೊತೆಗೆ ಆ ಯುವಕ ಇಡೀ ರಸ್ತೆಯಲ್ಲಿ ತಿರುಗಾಡುತ್ತಿದ್ದಾನೆ ಮತ್ತು ಸರಳವಾಗಿ ಯಾವುದೇ ಕಷ್ಟವಿಲ್ಲದೆ ಅಲೆದಾಡುತ್ತಿದ್ದಾನೆ. 

ಆತನ ಕೈಗಳಿಗೆ ಜೇನು ನೊಣಗಳು ಅಂಟಿಕೊಂಡಿವೆ
ಈ ಘಟನೆ ಅಮೆರಿಕಾದ ಒಂದು ಪಟ್ಟಣದ್ದಾಗಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಈ ಯುವಕ ಜೇನು ನೊಣಗಳ ಅಂಗಡಿ ಹೊಂದಿದ್ದಾನೆ ಮತ್ತು ಜೇನುತುಪ್ಪದ ವ್ಯಾಪಾರ ಮಾಡುತ್ತಾನೆ ಎನ್ನಲಾಗಿದೆ. ಆದರೆ, ಜೇನು ನೊಣಗಳು ಆತನ ಕೈಮೇಲೆ ಆಂಟಿಕೊಂಡಿರುವುದು ಮಾತ್ರ ಸ್ವಲ್ಪ ಅಘಾತಕಾರಿಯಾಗಿದೆ. ಏಕೆಂದರೆ, ಅವುಗಳಿಗೆ ಸ್ವಲ್ಪ ತೊಂದರೆಯಾದರೂ ಸಾಕು ಅವು ತಮ್ಮ ಕೊಂಡಿಯಿಂದ ಕುಟುಕುತ್ತವೆ.

ಇದನ್ನೂ ಓದಿ-Viral Video: ಕೆಲವೇ ಸೆಕೆಂಡ್ ಗಳಲ್ಲಿ ಸಂಪೂರ್ಣ ಜಿಂಕೆಯನ್ನು ಗಬಗಬನೇ ನುಂಗಿ ಹಾಕಿದ ದೈತ್ಯ ಹೆಬ್ಬಾವು

ಮುಷ್ಠಿಯನ್ನು ಬಿಗಿದುಕೊಂಡಿರುವ ಯುವಕ 
ಯುವಕನ ಎಡಗೈ ಮೇಲೆ ಜೇನುನೊಣಗಳು ಗೂಡು ಕಟ್ಟಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಯುವಕ ತನ್ನ ಮುಷ್ಠಿಯನ್ನು ಕಟ್ಟಿದ್ದಾನೆ ಮತ್ತು ಅವನು ಜೇನುನೊಣಗಳಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿಲ್ಲ. ಆದರೆ, ಇದರ ಹಿಂದಿನ ಕಾರಣ ಹೊರಬಿದ್ದಾಗ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ, ಜೇನುನೊಣಗಳನ್ನು ಆತ ಒಂದು ತಂತ್ರದಿಂದ ನಿಯಂತ್ರಿಸಿದ್ದಾನೆ.

ಇದನ್ನೂ ಓದಿ-Viral Video: ಮದುವೆ ಮಂಟಪದಲ್ಲಿ ವರನಿಗೆ ಮುತ್ತಿಟ್ಟ ವಧು: ನಾಚಿ ನೀರಾದ ಮದುಮಗ-ವಿಡಿಯೋ ನೋಡಿ

ಇದರಿಂದ ಯಾವುದೇ ಹಾನಿಯಾಗಿಲ್ಲ
ನಿಜ ಹೇಳಬೇಕೆಂದರೆ ಯುವಕ ರಾಣಿ ಜೇನುನೊಣವನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಾನೆ. ಹೀಗಾಗಿ ಜೇನು ನೊಣಗಳು ಆತನ ಮೇಲೆ ದಾಳಿ ಇಟ್ಟಿವೆ. ದಾಳಿ ನಡೆಸಿದರೂ ಕೂಡ ಅವು ಯುವಕನಿಗೆ ಯಾವುದೇ ರೀತಿಯ ಹಾನಿ ತಲುಪಿಸಿಲ್ಲ. ಯುವಕ ಜೇನುನೊಣ ಮತ್ತು ಜೇನುತುಪ್ಪದ ವ್ಯಾಪಾರ ನಡೆಸುತ್ತಿರುವುದೇ ಇದಕ್ಕೆ ಕಾರಣವಾಗಿರಬಹುದು. ಅದೇನೇ ಇದ್ದರೂ ವಿಡಿಯೋ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ ಮತ್ತು ಜನರು ಹಲವು ರೀತಿಯ ಊಹಾಪೋಹಗಳಲ್ಲಿ ತೊಡಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News