ಚಿತ್ರದುರ್ಗ : ಪಾಗಲ್ ಪ್ರೇಮಿಯ ಕಿರುಕುಳದಿಂದ ಮನನೊಂದ‌ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಮೇಲಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿತ್ರ ಡಾನ್ ಬೊಸ್ಕೋ ಕಾಲೇಜಿನಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ನಗರದ ಮಹೇಶ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ  ವಿದ್ಯಾರ್ಥಿನಿ ಪ್ರೇಮ( 18) ಹಾಗು ತರುಣ್  ಮದ್ಯೆ ಸ್ನೇಹ ಬೆಳೆದಿತ್ತು.ಈ ವೇಳೆ ತರುಣ್ ಪಿಯುಸಿ ಫೇಲ್ ಆಗಿದ್ದು, ಪ್ರೇಮ ಮಾತ್ರ ಚಿತ್ರ ಡಾನ್ ಬಾಸ್ಕೊ ಕಾಲೇಜಿನಲ್ಲಿ ಪ್ರಥಮ ಬಿಎಸ್‌ಸಿ ಓದುತ್ತಿದ್ದರು. ಆದ್ರೆ ಪ್ರೇಮ ಅವರ ಸಂಪರ್ಕ ಬಿಡದ ತರುಣ್, ನಿತ್ಯ ಈಕೆಗೆ ಚಾಟಿಂಗ್ ಮಾಡ್ತಾ, ಪ್ರೀತಿಸುವಂತೆ ಪೀಡಿಸುತಿದ್ದನು.


ಇದನ್ನೂ ಓದಿ:ಒಂದು ಕಾಲದಲ್ಲಿ ಆ್ಯಂಕರ್.. ಈಗ ಸ್ಟಾರ್‌ ಹೀರೋಯಿನ್..! ಕಿಚ್ಚ ಸುದೀಪ್‌ ಫ್ಯಾನ್ಸ್‌ಗಂತೂ ಈಕೆ ಫೇವರಿಟ್‌..


ಇದರಿಂದ ಮನನೊಂದ ವಿದ್ಯಾರ್ಥಿನಿ ತನ್ನ ಮನೆಯವರಿಗೆ ನಿನ್ನೆ ಈ ವಿಷಯ ತಿಳಿಸಿದ್ದಳು. ಆಗ ಅದನ್ನೆಲ್ಲ ನಾವು ನೋಡಿಕೊಳ್ತೇವೆ ನೀನು ಕಾಲೇಜಿಗೆ ಹೋಗು ಅಂತ ಪ್ರೇಮ ಅವರ ತಂದೆ ಸಮಾಧಾನ ಹೇಳಿದ್ದರು. ಹೀಗಾಗಿ ಇಂದು ಕಾಲೇಜಿಗೆ‌ ತೆರಳಿದ್ದ ಪ್ರೇಮ, ಕಾಲೇಜಿನ ಮೂರನೇ ಅಂತಸ್ತನ್ನು ಏರಿ, ಅಲ್ಲಿಂದು ಜಿಗಿದು ಸಾವನ್ನಪ್ಪಿದ್ದಾಳೆ. 


ಹೀಗಾಗಿ ಈ ಪ್ರಕರಣ‌ದಲ್ಲಿ ಸೂಕ್ತ ತನಿಖೆ ನಡೆಸಿ ತರುಣನನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರೇಮ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ