Student Dies Of Heart Attack: ಹಿರಿಯರು, ವಯೋವೃದ್ಧರಿಗೆ ಬಾಧಿಸುತ್ತಿದ್ದ ಹೃದಯಾಘಾತ ಈಗ ಎಳೆಯರಲ್ಲೂ ಕಾಡುತ್ತಿದ್ದು 3 ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಚಾಮರಾಜನಗರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದ ಸಂತ ಪ್ರಾನ್ಸಿಸ್ ಶಾಲೆಯಲ್ಲಿ 3 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 8 ವರ್ಷದ ತೇಜಸ್ವಿನಿ ಎಂಬಾಕೆ ಶಾಲಾವರಣದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಸ್ನೇಹಿತರ ಜೊತೆಗಿದ್ದ ತೇಜ್ವಸಿನಿ ಹಠಾತ್ತನೇ ಕುಸಿದು ಬಿದ್ದಿದ್ದನ್ನು ಕಂಡು  ಕೂಡಲೇ ಶಾಲಾ ಸಿಬ್ಬಂದಿ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿdರಾದರೂ ಅಷ್ಟರಲ್ಲಾಗಲೇ ಪುಟ್ಟ ಕಂದಮ್ಮ ಹೃದಯಾಘಾತದಿಂದ ಅಸುನೀಗಿದ್ದಳು. 


ಇದನ್ನೂ ಓದಿ- ಕರ್ನಾಟಕಕ್ಕೂ ಕಾಲಿಟ್ಟ ಚೀನಾ ವೈರಸ್..! ಎಚ್ಎಂಪಿ‌ವಿ ವೈರಸ್ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ...!


ಚೆನ್ನಾಗಿಯೇ ಇದ್ದ ಬಾಲಕಿ ಹೃದಯಾಘಾತಕ್ಕೆ ಬಲಿ: ಆಘಾತಕಾರಿ ಘಟನೆ ಕೇಳಿ ಶಾಲೆಗೆ ಬಿಇಒ ಭೇಟಿ: 
3ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಅಸುನೀಗಿದ ವಿಚಾರ ತಿಳಿದ ಚಾಮರಾಜನಗರ ಬಿಇಒ  ಹನುಮಂತಶೆಟ್ಟಿ ಸಂತ ಪ್ರಾನ್ಸಿಸ್ ಶಾಲೆಗೆ ಭೇಟಿ ಕೊಟ್ಟರು. ಶಾಲಾ ಸಿಬ್ಬಂದಿ, ವೈದ್ಯರಿಂದ ಮಾಹಿತಿ ಪಡೆದರು. 


ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬದನಗುಪ್ಪೆ ಗ್ರಾಮದ  ಲಿಂಗರಾಜು ಮತ್ತು ಶೃತಿ ಎಂಬ ದಂಪತಿಯ ಮಗಳಾದ ತೇಜಸ್ವಿನಿ 3 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.‌ ಶಾಲಾ ವರಾಂಡದಲ್ಲಿ ಆಕೆ ಕುಸಿದು ಬಿದ್ದಿದ್ದನ್ನು ಕಂಡು ಆಸ್ಪತ್ರೆಗೆ ರವಾನೆ ಮಾಡಿ ಔಷೋದಪಚಾರ ಮಾಡಿದರೂ‌ ಕೂಡ ಫಲಿಸದೇ ಅಸುನೀಗಿದ್ದು ವೈದ್ಯರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ ಎಂದರು.


ಇದನ್ನೂ ಓದಿ- HMPV Virus Scare: 'ಭಯಪಡುವ ಅಗತ್ಯವಿಲ್ಲ' ಆದರೆ... ಎಚ್ಎಂಪಿ‌ವಿ ವೈರಸ್ ಬಗ್ಗೆ ಕರ್ನಾಟಕ ಸರ್ಕಾರದ ಮಾರ್ಗಸೂಚಿ..!


ಒಟ್ಟಿನಲ್ಲಿ ಹಿರಿಯರಿಂದ ಯುವ ಜನತೆಗೆ ಬಾಧಿಸುತ್ತಿರುವ ಹೃದಯಾಘಾತ ಈಗ ಎಳೆಯರಲ್ಲೂ ಕಂಡುಬಂದಿರುವುದು ಆತಂಕಕಾರಿಯಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.