ಬೆಂಗಳೂರು : Independence day 2022 : ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನಲೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ  ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಜನತೆಯನ್ನುದ್ದೇಶಿಸಿ ಮಾತಾಡಿದ ಅವರು ರಾಜ್ಯಕ್ಕೆ ಐದು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.   


COMMERCIAL BREAK
SCROLL TO CONTINUE READING

 ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ, ರಾಜ್ಯಕ್ಕೆ    ಐದು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.   ಸ್ವಚ್ಛತೆ,  ಪೌಷ್ಠಿಕತೆ ಕಾಪಾಡಲು, ರೈತರು, ಶ್ರಮಿಕರ ಅಭ್ಯುದಯಕ್ಕೆ ಹಾಗೂ ಸೈನಿಕರ ಕ್ಷೇಮಾಭಿವೃದ್ಧಿಗೆ ಕೆಲವು ಕೊಡುಗೆ ನೀಡಲು ಸರ್ಕಾರದ ಹೊಸ ಯೋಜನೆ ಘೋಷಿಸಿದೆ. 
 
 ಇದನ್ನೂ ಓದಿ : ರಾಜ್ಯದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ: ಜಿಲ್ಲೆ ಜಿಲ್ಲೆಗಳಲ್ಲಿ ಹಾರಾಡಿತು ತ್ರಿವರ್ಣ ಧ್ವಜ
 
 ಹೊಸ ಯೋಜನೆಗಳು : 
1) ಎಲ್ಲಾ ಸರ್ಕಾರಿ ಶಾಲೆ, ಕಾಲೇಜಲ್ಲಿ 100% ಶೌಚಾಲಯ ನಿರ್ಮಾಣವನ್ನು 250 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನ 
2) ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಮಾದರು ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ವರೆಗೆ ಸಾಲ- ಸಹಾಯಧನ
3) ರೈತ ಮಕ್ಕಳಿಗೆ ಜಾರಿ ಮಾಡಿರುವ ರೈತ ವಿದ್ಯಾನಿಧಿ ಯೋಜನೆ ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ
4) ಭೂ ರಹಿತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಹೊಸ 4050 ಅಂಗನವಾಡಿ ತೆರೆಯಲು ಯೋಜನೆ, ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಠಿಕ ಆಹಾರ, ಶಾಲಾ ಪೂರ್ವ ಶಿಕ್ಷಣ ನೀಡಲು ಅವಕಾಶ, ಜೊತೆಗೆ 8100 ಮಹಿಳೆಯರಿಗೂ ಇದರಿಂದ ಉದ್ಯೋಗಾವಕಾಶ 
5 ) ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಹಾಗೂ 25 ಲಕ್ಷ ರೂಪಾಯಿ ಸಹಾಯಧನ 


ನಂತರ ಮಾತನಾಡಿದ ಸಿಎಂ, ಎಲ್ಲರೂ ಒಗ್ಗಟ್ಟಾಗಿ ಶ್ರಮ ವಹಿಸಿ ದೇಶ ಕಟ್ಟೋಣ , 100 ವರ್ಷಕ್ಕೆ ಭದ್ರಬುನಾದಿ ಹಾಕೋಣ ಎಂದು ಸಂದೇಶ ಸಾರಿದರು. 


ಸಿಎಂ ಭಾಷಣದ ಬಳಿಕ ಪಥ ಸಂಚಲನ ನಡೆಯಿತು.‌ ಕೆಎಸ್ಆರ್ ಪಿ,  ಸಿಎಆರ್ ಪಿಎಫ್, ಬಿಎಸ್ಎಫ್, ಸಿಎಆರ್, ಪೊಲೀಸ್ ಟ್ರಾಫಿಕ್, ಮಹಿಳಾ ಟ್ರಾಫಿಕ್, ಹೋಮ್ ಗಾರ್ಡ್ ಅಗ್ನಿಶಾಮಕ, ಶ್ವಾನದಳ ಸೇರಿದಂತೆ ಮತ್ತು ಬ್ಯಾಂಡ್ ನ ಒಟ್ಟು 36 ತುಕಡಿಗಳಲ್ಲಿ ಸುಮಾರು 1200 ಮಂದಿ ಪಥಸಂಚಲನದಲ್ಲಿ ಭಾಗಿಯಾದರು. 


 ಇದನ್ನೂ ಓದಿ : Independence Day 2022: ಧ್ವಜಾರೋಹಣದ ವೇಳೆ ಮಹಾ ಎಡವಟ್ಟು..!


ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 800 ಮಕ್ಕಳಿಂದ  ನೃತ್ಯ ಪ್ರದರ್ಶನ ನಡೆಯಿತು. ಮಕ್ಕಳಿಂದ ಈಸೂರು ಹೋರಾಟ ಹಾಗೂ ಜೈ ಜವಾನ್ ಮತ್ತು ಜೈ ಕಿಸಾನ್ ಸಾಂಸ್ಕೃತಿಕ ಕಾರ್ಯಕ್ರಮ, ಹಾಗೂ ದೇಹದಾಡ್ಯ ಪ್ರದರ್ಶನ ನಡೆಯಿತು. ಕೋವಿಡ್ ನಂತರ ಇದೇ ಮೊದಲು ಸಾರ್ವಜನಿಕರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಪ್ರೇಕ್ಷಕರ ಗ್ಯಾಲರಿಯಲ್ಲಿ ಜನರು ತುಂಬಿದ್ದರು‌.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ