ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆ ಬಹುತೇಕ ಫೈನಲ್ ಆಗಿದ್ದು, ಯಾರಿಗೆ ಯಾವ ಖಾತೆ ಎಂಬುದು ಪಟ್ಟಿ ನಾಳೆ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಜ.13ರಂದು ನಡೆದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ(B.S.Yediyurappa) ನೇತೃತ್ವದ ಸಂಪುಟ ವಿಸ್ತರಣೆಯಲ್ಲಿ 'ಸಪ್ತ' ಶಾಸಕರು ಮಂತ್ರಿಗಿರಿ ಅಲಂಕರಿಸಿದ್ದಾರೆ. ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಎಂ.ಟಿ.ಬಿ. ನಾಗರಾಜ್, ಆರ್.ಶಂಕರ್, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಉಮೇಶ್ ಕತ್ತಿ ಸೇರಿ 7 ಮಂದಿ ನೂತನ ಸಚಿವರಾಗಿದ್ದಾರೆ. ಉನ್ನತ ಮೂಲಗಳ ಪ್ರಕಾರ ನಾಳೆ(ಬುಧವಾರ) ಯಾರಿಗೆ, ಯಾವ ಖಾತೆ ಸಿಗಲಿದೆ ಎಂಬುದರ ಪಟ್ಟಿ ಇಲ್ಲಿದೆ.


Congress: ರಾಜ್ಯದ ಮಹಿಳೆಯರನ್ನ ಸೆಳೆಯಲು ಕಾಂಗ್ರೆಸ್‌ನಿಂದ 'ಭರ್ಜರಿ ಪ್ಲಾನ್'..!


ಉಮೇಶ್ ಕತ್ತಿ - ಅಬಕಾರಿ ಇಲಾಖೆ


ಎಂಟಿಬಿ ನಾಗರಾಜ್​ - ಇಂಧನ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ


ಅರವಿಂದ ಲಿಂಬಾವಳಿ - ಉನ್ನತ ಶಿಕ್ಷಣ ಅಥವಾ ಬೆಂಗಳೂರು ಅಭಿವೃದ್ಧಿ


B.C.Patil: ರೈತರ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಬಿ.ಸಿ.ಪಾಟೀಲ್..!


ಮರುಗೇಶ ನಿರಾಣಿ - ಸಣ್ಣ ಕೈಗಾರಿಕೆ ಇಲಾಖೆ


ಆರ್. ಶಂಕರ್ - ಪ್ರವಾಸೋದ್ಯಮ ಇಲಾಖೆ


ಎಸ್. ಅಂಗಾರ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ಬಂದರು ಮತ್ತು ಒಳನಾಡು


ಸಿ.ಪಿ.ಯೋಗೇಶ್ವರ್ - ಯುವಜನಾ ಸೇವೆ ಮತ್ತು ಕ್ರೀಡೆ, ರೇಷ್ಮೆ ಇಲಾಖೆ


ಕೃಷ್ಣ ನಗರಿ ಉಡುಪಿಯಲ್ಲಿ ಯಡಿಯೂರಪ್ಪ ದಿಡೀರ್ ದೇಗುಲಯಾತ್ರೆ ! ಈ ಹೊತ್ತಲ್ಲಿ ಯಾಕೆ ಟೆಂಪಲ್ ರನ್..!


ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಗಾಗಿ ಅರವಿಂದ ಲಿಂಬಾವಳಿ ಪಟ್ಟು ಹಿಡಿದಿದ್ದಾರೆ. ಆದರೆ ಮೂಲಗಳ ಪ್ರಕಾರ ಬೆಂಗಳೂರು ಅಭಿವೃದ್ಧಿ ಯಾರಿಗೂ ನೀಡದೆ ಸಿಎಂ ಬಳಿ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಎಂಟಿಬಿ ನಾಗರಾಜ್ ಅವರು ವಸತಿ ಖಾತೆ ಬೇಕೆಂದು ಕೇಳುತ್ತಿದ್ದಾರೆ. ಇಂಧನ ಖಾತೆಗೆ ಉಮೇಶ್ ಕತ್ತಿ ಬೇಡಿಕೆಯಿಟ್ಟಿದ್ದಾರೆ.


JDS : ಇನ್ನು ತಳಮಟ್ಟದಲ್ಲೇ ಬಲಶಾಲಿಯಾಗಲಿದೆ ಜೆಡಿಎಸ್, ಇಲ್ಲಿದೆ ದಳಪತಿಗಳ ಪಕ್ಕಾ ಪ್ಲಾನ್..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.