ಕೃಷ್ಣ ನಗರಿ ಉಡುಪಿಯಲ್ಲಿ ಯಡಿಯೂರಪ್ಪ ದಿಡೀರ್ ದೇಗುಲಯಾತ್ರೆ ! ಈ ಹೊತ್ತಲ್ಲಿ ಯಾಕೆ ಟೆಂಪಲ್ ರನ್..!

ಸಂಕ್ರಾಂತಿಯ ಹೊತ್ತಿನಲ್ಲಿ ಯಡಿಯೂರಪ್ಪನವರ ಹಲವು ಟೆನ್ಶನ್ ದೂರವಾಗಿದೆ.  ಸಂಪುಟ ವಿಸ್ತರಣೆ ನಡೆದಿದೆ. ಕೇಂದ್ರ ಸರ್ಕಾರ ಯಾವತ್ತಿಗೂ ಯಡಿಯೂರಪ್ಪ ಸರ್ಕಾರ ಜೊತೆ ಇದೆ ಎಂದು ಅಮಿತ್ ಶಾ ಹೇಳಿ ಬಿಟ್ಟಿದ್ದಾರೆ. ಹಾಗೆ ನೋಡಿದರೆ ಯಡಿಯೂರಪ್ಪ ಮುಖದಲ್ಲಿ ಈಗ ವಿಜಯದ ನಗೆ ಇದೆ. 

Written by - Ranjitha R K | Last Updated : Jan 19, 2021, 01:24 PM IST
  • ಕರಾವಳಿಯ ಮುಖ್ಯ ದೇಗುಲಗಳ ದರ್ಶನಕ್ಕೆ ದಿಢೀರ್ ಬಂದ ಯಡಿಯೂರಪ್ಪ
  • ಉಡುಪಿ ಅಷ್ಟ ಮಠಗಳಿಗೆ ಭೇಟಿ, ಸ್ಥಳೀಯ ದೇವಾಲಯಗಳಲ್ಲಿ ಪೂಜೆ, ಅರ್ಚನೆ
  • ಆನೆಗುಡ್ಡೆ ಕ್ಷೇತ್ರದಲ್ಲಿ ಗಣಪತಿಗೆ ಮಂಗಳವಾರ ಸಹಸ್ರ ನಾರೀಕೇಳ ಗಣಯಾಗ
ಕೃಷ್ಣ ನಗರಿ ಉಡುಪಿಯಲ್ಲಿ ಯಡಿಯೂರಪ್ಪ ದಿಡೀರ್ ದೇಗುಲಯಾತ್ರೆ ! ಈ ಹೊತ್ತಲ್ಲಿ ಯಾಕೆ ಟೆಂಪಲ್ ರನ್..! title=
ಕರಾವಳಿಯ ಮುಖ್ಯ ದೇಗುಲಗಳ ದರ್ಶನಕ್ಕೆ ದಿಢೀರ್ ಬಂದ ಯಡಿಯೂರಪ್ಪ(photo BSY twitter)

ಉಡುಪಿ : ಸಂಪುಟ ವಿಸ್ತರಣೆ (Cabinet Expansion) ಸರಾಗವಾಗಿ ನೆರವೇರಿದ್ದು, ಅಮಿತ್ ಶಾ ರಾಜ್ಯ ಸರ್ಕಾರವನ್ನು ಹೊಗಳಿದ್ದು, ಸಿಡಿದೆದ್ದ ಭಿನ್ನಮತೀಯರು ನಿಧಾನಕ್ಕೆ  ಶಾಂತರಾಗುತ್ತಿವುದು – ಈ ಎಲ್ಲಾ ವಿದ್ಯಮಾನಗಳ ನಡುವೆಯೇ ಯಡಿಯೂರಪ್ಪ (Yadiyurappa) ಮತ್ತೊಮ್ಮೆ ದೈವಬಲಕ್ಕಾಗಿ ಹಾತೊರೆಯುತ್ತಿದ್ದಾರೆ. ಸಂಕ್ರಾಂತಿಯ ಹೊತ್ತಿನಲ್ಲಿ ಯಡಿಯೂರಪ್ಪನವರ ಹಲವು ಟೆನ್ಶನ್ ದೂರವಾಗಿದೆ.  ಸಂಪುಟ ವಿಸ್ತರಣೆ ನಡೆದಿದೆ. ಕೇಂದ್ರ ಸರ್ಕಾರ ಯಾವತ್ತಿಗೂ ಯಡಿಯೂರಪ್ಪ ಸರ್ಕಾರ ಜೊತೆ ಇದೆ ಎಂದು ಅಮಿತ್ ಶಾ ಹೇಳಿ ಬಿಟ್ಟಿದ್ದಾರೆ. ಹಾಗೆ ನೋಡಿದರೆ ಯಡಿಯೂರಪ್ಪ ಮುಖದಲ್ಲಿ ಈಗ ವಿಜಯದ ನಗೆ ಇದೆ. ಮೇಲ್ನೋಟಕ್ಕೆ ಎಲ್ಲವೂ ಯಡಿಯೂರಪ್ಪ ಅಂದು ಕೊಂಡಂತೆ ಇದೀಗ ಸಾಗುತ್ತಿದೆ.

ವಸ್ತು ಸ್ಥಿತಿ ಹೀಗಿರುವಾಗಲೇ ಯಡಿಯೂರಪ್ಪ (Yadiyurappa) ಟೆಂಪಲ್ ರನ್ ಮುಂದುವರಿದಿದೆ. ಆದೂ ಈ ಸಲ ಅವರು ಕರಾವಳಿ ಭಾಗದ ದೇವಾಲಯಗಳ ದೇವರ ದರ್ಶನಾರ್ಥಿಯಾಗಿದ್ದಾರೆ. 

‘’ನಿನ್ನೆಯಿಂದ ಕರಾವಳಿ ಕರ್ನಾಟಕದ ಹಲವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಉಡುಪಿಯ (Udupi) ಅಷ್ಟಮಠದ ಶ್ರೀಗಳನ್ನು ಭೇಟಿ ಮಾಡಿದ್ದೇನೆ. ಇಂದು ಕರಂಬಳ್ಳಿ ವೆಂಕಟರಮಣ ದೇಗುಲ, ಉಚ್ಚಿಲದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ’’ ಎಂದು ಟ್ವೀಟ್ ಮಾಡಿದ್ದಾರೆ. ‘ಉಡುಪಿಯ ಶ್ರೀಕೃಷ್ಣಮಠಕ್ಕೆ (Shri Krishna Mutt) ಇಂದು ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು. ಪರ್ಯಾಯ ಅದಮಾರು ಮಠ ಆಯೋಜಿಸಿದ್ದ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕೃಷ್ಣನ ದರ್ಶನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ನೂತನ ಪಾದಚಾರಿ ಮಾರ್ಗವನ್ನು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು’ ಎಂದೂ ಹೇಳಿದ್ದಾರೆ. 

 

ಇದನ್ನೂ ಓದಿ H.D.Kumaraswamy: ನನ್ನ ತಂಟೆಗೆ ಬಂದ್ರೆ ಹುಷಾರ್‌: ಬಿಎಸ್‌ವೈಗೆ ಖಡಕ್ ಎಚ್ಚರಿಕೆ ನೀಡಿದ ಹೆಚ್‌ಡಿಕೆ..!

ಆನೆಗುಡ್ಡೆ ಕ್ಷೇತ್ರದಲ್ಲಿ ಸಹಸ್ರ ನಾರೀಕೇಳ ಗಣಯಾಗ : 
ಕರಾವಳಿಯ ಪ್ರಸಿದ್ದ ಕ್ಷೇತ್ರ ಆನೆಗುಡ್ಡೆ ಗಣಪತಿ ಸನ್ನಿಧಾನದಲ್ಲಿ ಯಡಿಯೂರಪ್ಪ ಸಹಸ್ರ ನಾರೀಕೇಳ ಗಣಯಾಗ ನಡೆಸಲಿದ್ದಾರೆ.  ಹಾಸನದ (Hassan) ಜಿ.ಪಿ ರಾಘವೇಂದ್ರ ರಾವ್ ಪರಿವಾರದಿಂದ ಸಹಸ್ರ ನಾರೀಕೇಳ ಗಣಯಾಗ ನಡೆಯಲಿದೆ.  ಯಡಿಯೂರಪ್ಪಮತ್ತು ಅವರ ಆಪ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  1008 ತೆಂಗಿನ ಕಾಯಿ ಇಟ್ಟು ಈ ಗಣಯಾಗ ನಡೆಯಲಿದೆ. ಗೊತ್ತಿರಲಿ 5 ವರ್ಷಗಳ ಹಿಂದೆ ಇದೇ ರಾಘವೇಂದ್ರ ರಾವ್ ಪರಿವಾರ ಯಡಿಯೂರಪ್ಪನವರಿಗಾಗಿ ಸಹಸ್ರ ನಾರೀಕೇಳ ಯಾಗ ನೆರವೇರಿಸಿತ್ತು. 

ಶಾಂತಿ, ನೆಮ್ಮದಿಗಾಗಿ ‘ಟೆಂಪಲ್ ರನ್..’?
ದೇಗುಲ (Temple) ಯಾತ್ರೆ ಶುರುವಾಗುವ ಮೊದಲು ಹೇಳಿಕೆ ನೀಡಿರುವ ಯಡಿಯೂರಪ್ಪ, ರಾಜಕೀಯ ಜಂಜಾಟದ ನಡುವೆ ದೇವರ ದರ್ಶನಕ್ಕೆ ಬಂದಿದ್ದೇನೆ. ಶಾಂತಿ, ನೆಮ್ಮದಿ, ತೃಪ್ತಿ ಇದ್ದರೆ ಮಾತ್ರಸುಗಮ ಆಡಳಿತ ನಡೆಸಲು ಸಾಧ್ಯ ಎಂದು ಹೇಳಿದ್ದಾರೆ. 

ಇದನ್ನೂ ಓದಿ : JDS : ಇನ್ನು ತಳಮಟ್ಟದಲ್ಲೇ ಬಲಶಾಲಿಯಾಗಲಿದೆ ಜೆಡಿಎಸ್, ಇಲ್ಲಿದೆ ದಳಪತಿಗಳ ಪಕ್ಕಾ ಪ್ಲಾನ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News