ಬೆಂಗಳೂರು: ತರಕಾರಿ, ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಈಗಾಗಲೇ ಕತ್ತರಿ ಬಿದ್ದಾಗಿದೆ. ಈ ದುಬಾರಿ ದುನಿಯಾದಲ್ಲಿ ರಾಜ್ಯದ ಜನರಿಗೆ ಮತ್ತೊಂದು ಶಾಕ್‌ ಕಾದಿದೆ. ರಾಜ್ಯದಲ್ಲಿ ಇದೀಗ ಬಸ್ ಟಿಕೆಟ್ ದರ ಏರಿಕೆ ಸರದಿ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಹೊತ್ತಿನಲ್ಲಿ ಬಸ್ ದರ ಏರಿಕೆ ಬರೆ ಸಾರ್ವಜನಿಕರ ಮೇಲೆ ಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: PSI Recruitment Scam: ಅಮೃತ್ ಪೌಲ್ ಬಂಧಿಸಿದ ಸಿಐಡಿ ತಂಡಕ್ಕೆ ಎಚ್‌ಡಿಕೆ ಅಭಿನಂದನೆ


ಬರೋಬ್ಬರಿ 38% ರಷ್ಟು ಟಿಕೆಟ್ ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡಲಾಗಿದೆ. ಬಸ್ ಟಿಕೆಟ್‌ ದರ ಪರಿಷ್ಕರಣೆಗೆ ಕೆಎಸ್ಆರ್‌ಟಿಸಿ ಪಟ್ಟು ಹಿಡಿದಿದೆ. ಸದ್ಯ ಟಿಕೆಟ್ ದರ ಪರಿಷ್ಕರಣೆ ಚೆಂಡು ಸಿಎಂ ಬಸವರಾಜ್ ಬೊಮ್ಮಾಯಿ ಅಂಗಳದಲ್ಲಿದೆ. ಒಂದೆರಡು ದಿನಗಳಲ್ಲಿ ಕೆಎಸ್ಆರ್‌ಟಿಸಿ ಟಿಕೆಟ್ ರೇಟ್ ಹೆಚ್ಚಳ ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. 


ಮತ್ತೆ ಸರ್ಕಾರಕ್ಕೆ ದರ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಈಗಾಗಲೇ ಹಲವು ಬಾರಿ ನಿಗಮ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೊದಲು ಶೇ.18 ರಷ್ಟು ಟಿಕೆಟ್‌ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 


ಆದರೆ ಇದೀಗ ಮತ್ತೆ ಹೊಸ ಪ್ರಸ್ತಾವನೆ ಇಟ್ಟು ಶೇ.38% ರಷ್ಟು ದರ ಏರಿಕೆಗೆ ಬೇಡಿಕೆ ಇಟ್ಟಿದೆ. ನಷ್ಟದಲ್ಲಿರುವ ನಿಗಮವನ್ನ ಮೇಲೆತ್ತಲು ಪ್ರಯಾಣ ದರ ಏರಿಕೆ ಅಗತ್ಯ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. 


ಈಬಾರಿ ದರ ಏರಿಸದಿದ್ರೆ ಬಸ್ ಓಡಿಸೋದು ಕಷ್ಟ ಎಂದು ಸಿಎಂಗೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಒಂದೆರೆಡು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಶೇ.38 ರಷ್ಟು ದರ ಏರಿಕೆಯಾದ್ರೆ ಪ್ರತಿ ಸ್ಟೇಜ್ ನಲ್ಲಿ 3 ರಿಂದ 4 ರೂ ಏರಿಕೆ ಸಾಧ್ಯತೆಯಿದೆ.  


ಇದನ್ನೂ ಓದಿ: PSI Recruitment Scam: ‘ಕಪಾಟಿನೊಳಗಿಂದ ಒಂದೊಂದೇ ಅಸ್ತಿಪಂಜರಗಳು ಹೊರಗೆ ಬೀಳುತ್ತಿವೆ’


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.