Corona Vaccine:ಮಕ್ಕಳ ಲಸಿಕಾ ಅಭಿಯಾನಕ್ಕೆ ಸಿಎಂ ಚಾಲನೆ, ಟಫ್ ರೂಲ್ಸ್ ಜಾರಿ ಬಗ್ಗೆ ಸುಳಿವು ನೀಡಿದ ಬೊಮ್ಮಾಯಿ
Vaccine program: ಇಂದಿನಿಂದ ರಾಜ್ಯದಾದ್ಯಂತ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬೆಂಗಳೂರು: ಇಂದಿನಿಂದ ರಾಜ್ಯದಾದ್ಯಂತ 15-18 ವರ್ಷದೊಳಗಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕಾಕರಣ (vaccine program for children aged 15-18) ಕಾರ್ಯಕ್ರಮ ಆರಂಭವಾಗಿದೆ.
ಇದರ ಅಂಗವಾಗಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನಗರದ ಭೈರವೇಶ್ವರ ನಗರದಲ್ಲಿರುವ ಪಾಲಿಕೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ 16 ವರ್ಷದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯಾದ ಕೀರ್ತಿ ಕೊಕಾಟಿ ಅವರಿಗೆ ಮೊದಲ ಡೋಸ್ ಲಸಿಕೆ (Corona Vaccine) ಪಡೆದ ಬಳಿಕ ಹೂ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೀರ್ತಿ ಕೊಕಾಟಿ(16 ವರ್ಷ), ಅನ್ವರ್ ಲಾಲ್ಮಿಯ(16 ವರ್ಷ), ಲಾವಣ್ಯ(16 ವರ್ಷ), ಮೊಹ್ಮದ್ ಅಫ್ ನಾನ್(16 ವರ್ಷ), ಪ್ರಶಾಂತ್.ಜಿ.ಎಲ್( 16 ವರ್ಷ), ರಾಹುಲ್ ಆನಂದ್ ಬಡಿಗೇರ್( 16 ವರ್ಷ ), ಪ್ರತುಶಾ(16 ವರ್ಷ), ವಿಶ್ವಾರಾಧ್ಯ(16 ವರ್ಷ) ಸಾಂಕೇತಿಕವಾಗಿ ಮೊದಲ ಡೋಸ್ ಪಡೆದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 15-18 ವರ್ಷದೊಳಗಿನವರಿಗೆ ಇಂದಿನ ಲಸಿಕಾಕರಣದ ವಿವರ:
ಶಾಲಾ-ಕಾಲೇಜುಗಳ ಸಂಖ್ಯೆ: 255
ಲಸಿಕಾಕರಣ ಗುರಿ: 62,706
ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಡಾ. ಕೆ.ಸುಧಾಕರ್, ಶ್ರೀ ಭೈರತಿ ಬಸವರಾಜು, ಆಡಳಿತಗಾರರಾದ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
[[{"fid":"226170","view_mode":"default","fields":{"format":"default","field_file_image_alt_text[und][0][value]":"vaccine program ","field_file_image_title_text[und][0][value]":"ಲಸಿಕಾಕರಣ ಕಾರ್ಯಕ್ರಮ "},"type":"media","field_deltas":{"1":{"format":"default","field_file_image_alt_text[und][0][value]":"vaccine program ","field_file_image_title_text[und][0][value]":"ಲಸಿಕಾಕರಣ ಕಾರ್ಯಕ್ರಮ "}},"link_text":false,"attributes":{"alt":"vaccine program ","title":"ಲಸಿಕಾಕರಣ ಕಾರ್ಯಕ್ರಮ ","class":"media-element file-default","data-delta":"1"}}]]
ಟಫ್ ರೂಲ್ಸ್ ಜಾರಿ ಬಗ್ಗೆ ಸಿಎಂ ಸುಳಿವು:
ಕಾರ್ಯಕ್ರಮದಲ್ಲಿ ಕೊರೊನಾ 3 ನೇ ಅಲೆ (Corona 3rd wave) ಬಗ್ಗೆ ಎಚ್ಚರಿಕೆ ನೀಡಲಾಯಿತು. ಈಗ ನಮ್ಮ ಮುಂದೆ ಸವಾಲಿದೆ. 3ನೇ ಅಲೆ ಬಿಂಬಿತವಾಗಿದೆ. ಸಾಕಷ್ಟು ಕ್ರಮ ತೆಗೆದುಕೊಳ್ತಿದ್ದೇವೆ. ಗಡಿ ಭದ್ರತೆ ಮಾಡ್ತಿದ್ದೇವೆ. ಆರ್ಥಿಕ ಹೊಡೆತ ಆಗದಂತೆ ಕ್ರಮಗಳನ್ನ ಜಾರಿ ಮಾಡಬೇಕಿದೆ. ಜನ ಸಹಕರಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಸ್ಕ್, ಸಾಮಾಜಿಕ ಅಂತರಕ್ಕೆ ಸಿಎಂ ಮನವಿ ಮಾಡಿದರು. ಕೋವಿಡ್ ವಿರುದ್ಧ ಸುರಕ್ಷಾ ಚಕ್ರವನ್ನ ಪ್ರತಿಯೊಬ್ಬರಿಗೂ ಕೊಡಬೇಕಿದೆ. ಕೋವಿಡ್ ಮುಕ್ತ ವರ್ಷವನ್ನ ಮಾಡಲು ಸಂಕಲ್ಪ ಮಾಡೋಣ. ಈ ಅಭಿಯಾನ ಯಶಸ್ಸಿ ಮಾಡೋಣ. ಲಸಿಕೆ ಕೋವಿಡ್ ನಿಂದ ದೂರ ಮಾಡಲು ಸಾಧ್ಯ ಎಂದರು.
ರಾಮನಗರಕ್ಕೆ ತೆರಳಿದ ಸಿಎಂ ಬೊಮ್ಮಾಯಿ:
ಕಾರ್ಯಕ್ರಮ ಮುಗಿಸಿದ ಬಳಿಕ ಸಿಎಂ ಬೊಮ್ಮಾಯಿ ರಾಮನಗರಕ್ಕೆ ತೆರಳಿದರು. ರಾಮನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಜೊತೆಯಲ್ಲಿ ಮುಖ್ಯಮಂತ್ರಿಗಳು ತೆರಳಿದರು.
ಇದನ್ನೂ ಓದಿ: Sharp spike in Covid:ಕಳೆದ 24 ಗಂಟೆಗಳಲ್ಲಿ 33,750 ಹೊಸ ಪ್ರಕರಣಗಳು ವರದಿ, ಒಮಿಕ್ರಾನ್ ಸಂಖ್ಯೆ 1,700 ಕ್ಕೆ ಏರಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.