ಬೆಂಗಳೂರು: ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಹಲವಾರು ಕೊಲೆ ಪ್ರಕರಣಗಳು ದಾಖಲಾಗಿದ್ದವು. ಆ ಸಂದರ್ಭದಲ್ಲಿ ಕೊಲೆ ಮಾಡಿದವರ ವಿರುದ್ಧದ ಕೇಸ್‌ಗಳನ್ನು ವಾಪಾಸ್‌ ಪಡೆದಿದ್ದಾರೆ. ಅವರಿಗೆ ಪ್ರತಿಭಟನೆ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. 


COMMERCIAL BREAK
SCROLL TO CONTINUE READING

ಇದನ್ನು ಓದಿ: KGF 2: ತೆರೆಯಲ್ಲಿ ಅಬ್ಬರಿಸಿದ ʼಜ್ಯೂನಿಯರ್‌ ರಾಕಿಭಾಯ್‌ʼ: ಕೆಜಿಎಫ್‌ ಬಗ್ಗೆ ಅನ್ಮೋಲ್‌ ಹೀಗೆ...


ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್‌ ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆಗೆ ಮುಂದಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, "ಕಾಂಗ್ರೆಸ್‌ನವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಇನ್ನು ಸಂತೋಷ್ ಆತ್ಮಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಯುತ್ತದೆ.  ಸತ್ಯಾಂಶ ಹೊರಬರಲಿದೆ" ಎಂದರು. 


"ಸಿದ್ದರಾಮಯ್ಯನವರು ನನ್ನ ಮೇಲೂ ಮೇಲೂ ಆಧಾರರಹಿತ ಆರೋಪ ಮಾಡಿದ್ದಾರೆ. ಅವರ ಬಳಿ ಏನೇ ಆಧಾರಗಳಿದ್ದರೂ ನೀಡಲಿ. ಆ ಸಂಬಂಧ ತನಿಖೆ ನಡೆಸುತ್ತೇವೆ. ಸಂತೋಷ್‌ ಆತ್ಮಹತ್ಯೆಯ ಕುರಿತಾಗಿ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಅದರ ಆಧಾರದ ಮೇಲೆ ಮುಂದಿನ ತನಿಖೆ ಬಗ್ಗೆ ನಿರ್ಣಯ ಮಾಡುತ್ತೇವೆ" ಎಂದರು. 


ಹೈಕಮಾಂಡ್‌ ಮಧ್ಯಪ್ರವೇಶ ಇಲ್ಲ: 
ಸಂತೋಷ್‌ ಆತ್ಮಹತ್ಯೆ ಪ್ರಕರಣ ಸಂಬಂಧಿಸಿ ಸಚಿವ ಕೆ.ಎಸ್‌ ಈಶ್ವರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹ ಕೇಳಿಬರುತ್ತಿದೆ. ಇನ್ನು ಈ ವಿಚಾರದಲ್ಲಿ ಹೈಕಮಾಂಡ್‌ ಮಧ್ಯಪ್ರವೇಶ ಮಾಡುವುದಿಲ್ಲ. ಅವರು ಕೇವಲ ಮಾಹಿತಿ ಪಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದರು. 


ಇದನ್ನು ಓದಿ: ವೀರೇಶ್ ಥಿಯೇಟರ್​ನಲ್ಲಿ ಮಹಾ ಯಡವಟ್ಟು.. ಕೆಜಿಎಫ್ 2 ಬದಲು ಕೆಜಿಎಫ್ 1 ರಿಲೀಸ್!


"ಸಿದ್ದರಾಮಯ್ಯನವರು ಸಿಎಂ ಆದಾಗ ಹಲವಾರು ಲಂಚ ಆರೋಪ ಪ್ರಕರಣಗಳು ದಾಖಲಾಗಿವೆ. ಬಿಡಿಎದಲ್ಲೇ ದೊಡ್ಡ ಹಗರಣ ಸೇರಿದಂತೆ ಹಲವಾರು ಆರೋಪಗಳು ಅವರ ಮೇಲೆ ಬಂದಿದೆ. ಅದರ ಬಗ್ಗೆ ಅವರು ಮಾತನಾಡಲಿ" ಎಂದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.