KGF 2: ತೆರೆಯಲ್ಲಿ ಅಬ್ಬರಿಸಿದ ʼಜ್ಯೂನಿಯರ್‌ ರಾಕಿಭಾಯ್‌ʼ: ಕೆಜಿಎಫ್‌ ಬಗ್ಗೆ ಅನ್ಮೋಲ್‌ ಹೀಗೆ...

ಕೆಜಿಎಫ್‌ ಚಿತ್ರದಲ್ಲಿ ಯಶ್‌ ಬಾಲ್ಯದ ಪಾತ್ರದಲ್ಲಿ ಅಭಿನಯಿಸಿದ ಬಾಲಕನ ಹೆಸರು ಅನ್ಮೋಲ್ ವಿಜಯ್ ಭಟ್ಕಳ್.  ಕುಂದಾಪುರದಲ್ಲಿ ಹುಟ್ಟಿ, ಬೆಳೆದ ಅನ್ಮೋಲ್‌, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

Written by - Bhavishya Shetty | Last Updated : Apr 14, 2022, 10:44 AM IST
  • ಇಂದು ಜಗತ್ತಿನಾದ್ಯಂತ ಕೆಜಿಎಫ್‌-2 ಸಿನಿಮಾ ಬಿಡುಗಡೆ
  • ಸಿನಿಮಾದ ಬಗ್ಗೆ ʼಜ್ಯೂನಿಯರ್‌ ರಾಕಿಭಾಯ್‌ʼ ಹೇಳಿದ್ದು ಹೀಗೆ;
  • ಅನ್ಮೋಲ್ ವಿಜಯ್ ಭಟ್ಕಳ್ ಬಗ್ಗೆ ಇಲ್ಲಿದೆ ಮಾಹಿತಿ
KGF 2: ತೆರೆಯಲ್ಲಿ ಅಬ್ಬರಿಸಿದ ʼಜ್ಯೂನಿಯರ್‌ ರಾಕಿಭಾಯ್‌ʼ: ಕೆಜಿಎಫ್‌ ಬಗ್ಗೆ ಅನ್ಮೋಲ್‌ ಹೀಗೆ... title=
KGF 2

ಬೆಂಗಳೂರು: ಕೊನೆಗೂ ಕೆಜಿಎಫ್‌-2 ತೆರೆಮೇಲೆ ಅಪ್ಪಳಿಸಿದೆ. ಸಿನಿಮಾ ನೋಡಿದ ಅಭಿಮಾನಿಗಳಿಗೆ ಹಬ್ಬದೂಟದ ಅನುಭವ ನೀಡಿದ್ದಂತು ಸುಳ್ಳಲ್ಲ. ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಯಶ್‌ ಅವರ ಬಾಲ್ಯದ ಪಾತ್ರದಲ್ಲಿ ಅಭಿನಯಿಸಿದ ಬಾಲಕ ಸಹ ತನ್ನ ಆಕ್ಟಿಂಗ್‌ನಲ್ಲಿ ಮಿಂಚಿದ್ದು, ಕ್ರೇಜ್‌ ಕ್ರಿಯೇಟ್‌ ಮಾಡಿದ್ದಾರೆ ಎಂದರೆ ತಪ್ಪಾಗಲ್ಲ. 

ಇದನ್ನು ಓದಿ: KGF 2 Twitter Review: 'ಕೆಜಿಎಫ್ 2' ಸಿನಿಮಾ ಬಗ್ಗೆ ಏನನ್ನುತ್ತೆ ಟ್ವಿಟರ್‌ ರಿವೀವ್‌?

ಕೆಜಿಎಫ್‌ ಚಿತ್ರದಲ್ಲಿ ಯಶ್‌ ಬಾಲ್ಯದ ಪಾತ್ರದಲ್ಲಿ ಅಭಿನಯಿಸಿದ ಬಾಲಕನ ಹೆಸರು ಅನ್ಮೋಲ್ ವಿಜಯ್ ಭಟ್ಕಳ್.  ಕುಂದಾಪುರದಲ್ಲಿ ಹುಟ್ಟಿ, ಬೆಳೆದ ಅನ್ಮೋಲ್‌, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಜನರಿಗೆ ಚಿರಪರಿಚಿತರಾಗಿದ್ದು, ಕೆಜಿಎಫ್‌ ಸಿನಿಮಾದಿಂದಲೇ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ಅನ್ಮೋಲ್‌ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

14 ವರ್ಷದ ಬಾಲ ಕಲಾವಿದ ಅನ್ಮೋಲ್‌, ಸ್ಯಾಂಡಲ್‌ವುಡ್‌ನಲ್ಲಿ ಸಾಧನೆ ಮಾಡುವ ಹುಮ್ಮಸ್ಸು ಬೆಳೆಸಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ನೃತ್ಯ ಅಭ್ಯಾಸ ಮಾಡುತ್ತಿರುವ ಅನ್ಮೋಲ್‌, ಕೆಜಿಎಫ್‌ ಸಿನಿಮಾಕ್ಕಾಗಿ ಸಖತ್‌ ಕೆಲಸ ಮಾಡಿದ್ದಾರಂತೆ. 

ಸದ್ಯ ಸಿನಿಮಾ ರಿಲೀಸ್‌ ಆಗಿದ್ದು, ಈ ಬಗ್ಗೆ ಅನ್ಮೋಲ್‌ ಹೇಳಿದ್ದು ಹೀಗೆ:  "ಸಿನಿಮಾದಲ್ಲಿ ನನ್ನ ನಟನೆ ನನಗೆ ಇಷ್ಟವಾಯಿತು. ನಟನೆಯ ಬಗ್ಗೆ ನಾನು ಕಳೆದ ಐದು ವರ್ಷಗಳಿಂದ ಯೋಚಿಸುತ್ತಿದ್ದೆ. ಈ ಪಾತ್ರಕ್ಕೆ ನನ್ನನ್ನು ಶಿಫಾರಸು ಮಾಡಿದ್ದು ನನ್ನ ನೃತ್ಯ ಗುರುಗಳಾದ ಚಾಮರಾಜ್ ಮೇಷ್ಟ್ರು" ಎಂದರು.

ಇದನ್ನು ಓದಿ: KGF 2 Box Office:ಬಾಕ್ಸ್ ಆಫೀಸಿನಲ್ಲಿ ಇದು ವರೆಗೆ ಕೆಜಿಎಫ್2 ಕಲೆ ಹಾಕಿದ್ದೆಷ್ಟು?

"ಜನರಿಗೆ ನನ್ನ ಪಾತ್ರ ಇಷ್ಟವಾಗಿದೆ. ಅಭಿಮಾನಿಗಳ ಪ್ರತಿಕ್ರಿಯೆ ನನಗೆ ಖುಷಿ ನೀಡಿದೆ. ಅಷ್ಟೇ ಅಲ್ಲದೆ, ಯಶ್‌ ಅವರ ಜ್ಯೂನಿಯರ್‌ ಆಗಿ ನಾನು ಪಾತ್ರ ಮಾಡಿರೋದು ನನಗೆ ತುಂಬಾ ಖುಷಿ ನೀಡಿದೆ" ಎಂದರು. 

ಹೊಂಬಾಳೆ  ಫಿಲಂಸ್ ಅಡಿಯಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ  ಕೆಜಿಎಫ್‌ ಚಾಪ್ಟರ್‌ 2 ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2018 ರಲ್ಲಿ ರಿಲೀಸ್ ಆಗಿದ್ದ  ಕೆಜಿಎಫ್-1 ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News