ಬೆಳಗಾವಿ : 'ಮಾತು ಆಡಿದ್ರೆ ಹೋಯ್ತು.. ಮುತ್ತು ಒಡೆದರೆ ಹೋಯ್ತು' ಎಂದು ಸಿಎಂ ಬಸವರಾಜ ಬೊಮ್ಮಾಯಿ, ತಮಗೆ ಪತ್ರ ಬರೆದು ಸತೀಶ್ ಜಾರಕಿಹೊಳಿ ಹೇಳಿಕೆ ಹಿಂಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಮಾತನಾಡುವುದು ಅಷ್ಟೇ ಅಲ್ಲ ಸಮರ್ಥನೆ ಮಾಡುವ ಸಾಹಸ ಮಾಡಿದ್ದಾರೆ. ಈಗ ವಿಷಾದ ವ್ಯಕ್ತಪಡಿಸಿದ್ದೀನಿ ಅನ್ನೋದು ಎಷ್ಟರ ಮಟ್ಟಿಗೆ ಸರಿ ತಪ್ಪು ಅನ್ನೋದನ್ನ ಅವರ ಆತ್ಮಸಾಕ್ಷಿಗೆ ಬಿಡ್ತೇನೆ. ನನಗೆ ಆಶ್ಚರ್ಯ ಆಗಿರುವಂತದ್ದು ಮಾನ್ಯ ಸತೀಶ್ ಜಾರಕಿಹೊಳಿ ದುಡುಕುವವರಲ್ಲ. ಕಾಂಗ್ರೆಸ್ ಸಹವಾಸದಿಂದ ಕಾಂಗ್ರೆಸ್ ಸಂಸ್ಕೃತಿ ಪ್ರಭಾವದಿಂದ ಹೀಗಾಗಿದೆ. ಕಾಂಗ್ರೆಸ್ ಸಂಸ್ಕೃತಿಯೇ ಯಾವಾಗಲೂ ವಿಭಜಿಸುವ ಶಕ್ತಿಗಳ ಜೊತೆ ಕೈ ಜೋಡಿಸುವುದು. ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ದೇವಸ್ಥಾನಕ್ಕೆ ಹೋಗುವಂತದ್ದು, ಟೆಂಪಲ್ ರನ್ ಮಾಡುವಂತದ್ದು. ಸಹಜವಾಗಿ ಅವರು ಎಲ್ಲ ವೋಟ್‌ಬ್ಯಾಂಕ್ ಸಲುವಾಗಿ ಮಾಡ್ತಾರೆ. ಅಲ್ಪಸಂಖ್ಯಾತರ ತುಷ್ಠಿಕರಣ ಜೊತೆಗೆ ವಕ್ಫ್ ಪ್ರಾಪಾರ್ಟಿಯನ್ನ ಮುಚ್ಚಿರುವಂತಹದ್ದು. ಅಧಿಕಾರಕ್ಕಾಗಿ ಹಿಂದುಗಳನ್ನ ದ್ವೇಷಿಸುವುದು, ದೋಷಿಸುವುದು ಮಾಡ್ತಿದ್ದಾರೆದೇಶದ ಅಭಿಮಾನ‌ ಆಗಲಿ, ಪ್ರೀತಿ ಆಗಲಿ ಎಳ್ಳಕಾಳಷ್ಟು ಇಲ್ಲ. ಇದಕ್ಕೆ ಹತ್ತು ಹಲವಾರು ಉದಾಹರಣೆ ನೀಡಬಹುದು. ಹೀಗಾಗಿ ರಾಜಕಾರಣಕ್ಕಾಗಿ, ಮತಕ್ಕಾಗಿ ಮಾಡುವ ಕೆಟ್ಟ ರಾಜಕಾರಣ ನಿಲ್ಲಬೇಕು ಎಂದರು. 


ಇದನ್ನೂ ಓದಿ : ವಿಧಾನಸಭೆಯಲ್ಲಿ ಹೊಡೆದಾಟ ಆಗತ್ತೆ, ಮಂತ್ರಿಗಳು, ಮುಖ್ಯಮಂತ್ರಿಗೂ ಹೊಡಿತಾರೆ: ವಾಟಾಳ್ ನಾಗರಾಜ್


ಇನ್ನೂ ಮುಂದುವರೆದು ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಪತ್ರ ಏನಿದೆ ನೋಡ್ತಿನಿ. ತನಿಖೆ ಮಾಡುವುದಕ್ಕೆ ಏನಿದೆ? ಅವರು ಯಾವ ಆಧಾರದ ಮೇಲೆ ಇದನ್ನ ಮಾತಾಡಿದ್ದಾರೆ ಅದನ್ನ ಬಹಿರಂಗ ಪಡಿಸಿದ್ರೆ, ಅದರ ದೃಢೀಕರಣ ಆಧರಿಸಿ ಅದರ ಸತ್ಯಾಸತ್ಯತೆಯನ್ನ, ಈಗ ಹತ್ತು ಹಲವಾರು ಸಾಹಿತ್ಯ, ವಿಕೃತ ಸಾಹಿತ್ಯ ಬರುತ್ತವೆ. ನಂಬಲಾರದ ಸಾಹಿತ್ಯಗಳು, ವಿಡಿಯೋಗಳು ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣ ಮತ್ತು ಪುಸ್ತಕ ರೂಪದಲ್ಲಿ ಇವೆ. ಡಿಕ್ಷನರಿ ನೋಡಿ ಮಾತನಾಡಿದೆ ಅಂತಾರೆ. ಡಿಕ್ಷನರಿ ಯಾವುದು, ಅದರ ಅರ್ಹತೆ ಏನು? ವಿಕಿಪೀಡಿಯಾ ಈಗಾಗಲೇ ಹತ್ತು ಹಲವು ಸಲ ತನಿಖೆಗೆ ಒಳಗಾಗಿದೆ. ವಿಕಿಪೀಡಿಯಾ ಮುಖ್ಯಸ್ಥನ ಮೇಲೆ ಹತ್ತು ಹಲವು ಕೇಸ್‌ಗಳಿವೆ. ಪ್ರಕರಣವನ್ನ ಸತೀಶ್ ಜಾರಕಿಹೊಳಿ ಅವರ ಆತ್ಮ ಸಾಕ್ಷಿಗೆ ಬಿಡಲಾಗಿದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Pramod Muthalik : 'ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ'


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.