ಪಿಎಸ್‌ಐ ನೇಮಕಾತಿ ಅಕ್ರಮ ಆಡಿಯೋ... ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ
ಕಳೆದ 15 ದಿನಗಳ ಹಿಂದೆ ಶಾಲೆಗಳಿಗೆ ಬೆದರಿಕೆ ಇ- ಮೇಲ್‌ಗಳು ಬಂದಿದ್ದು, ಅವುಗಳು ಸಿರಿಯಾ ಹಾಗೂ ಪಾಕಿಸ್ತಾನದಿಂದ ಬಂದಿದೆ ಎನ್ನಲಾಗುತ್ತಿದೆ.
ಬೆಂಗಳೂರು : ಪಿಎಸ್‌ಐ ನೇಮಕಾತಿಯ ಯಾವುದೇ ಬ್ಯಾಚ್‌ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನು ಓದಿ: ಅಣ್ಣಾವ್ರ ಹುಟ್ಟುಹಬ್ಬ ಹಿನ್ನೆಲೆ : ಮಹಾತ್ಕಾರ್ಯಕ್ಕೆ ಮುಂದಾದ ಅಶ್ವಿನಿ
ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನು ಕೇಳಿಲ್ಲ.ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು, ಅವರ ಅರ್ಹತೆ ಏನು ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನು ಸಹ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ, ಯಾವುದೇ ಬ್ಯಾಚ್ ಆಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನು ಓದಿ: ಶ್ರಿಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ: ಎಚ್‌ಡಿಕೆ ಭವಿಷ್ಯ
ಶಾಲೆಗಳಿಗೆ ಬೆದರಿಕೆ ಇ-ಮೇಲ್ : ಮೂಲ ಪತ್ತೆ ಹಚ್ಚಲಾಗುವುದು
ಕಳೆದ 15 ದಿನಗಳ ಹಿಂದೆ ಶಾಲೆಗಳಿಗೆ ಬೆದರಿಕೆ ಇ- ಮೇಲ್‌ಗಳು ಬಂದಿದ್ದು, ಅವುಗಳು ಸಿರಿಯಾ ಹಾಗೂ ಪಾಕಿಸ್ತಾನದಿಂದ ಬಂದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ಕುರಿತು ನಿಮ್ಮ ಮಾತೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, "ಈ ಬಗ್ಗೆ ಗೊತ್ತಿಲ್ಲ. ಪೊಲೀಸ್ ಆಯುಕ್ತರೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಆಗಾಗ್ಗ ಶಾಂತಿ ಕದಡಲು ಈ ರೀತಿಯ ಪ್ರಯತ್ನಗಳು ನಡೆಯುತ್ತಿರುತ್ತದೆ. ಕಳೆದ ವರ್ಷವೂ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇ- ಮೇಲ್ ಮೂಲವನ್ನು ಪತ್ತೆ ಹಚ್ಚಲಾಗುವುದು. ಯಾವ ದೇಶದಿಂದ ಬಂದಿದೆ ಎಂದು ಗೊತ್ತಾಗುತ್ತದೆ. ಕೆಲವು ಸಂದರ್ಭದಲ್ಲಿ ಆ ದೇಶದ ಅಧಿಕಾರಿಗಳಿಗೆ ತಿಳಿಸಿ, ಕೆಲವರನ್ನು ಬಂಧಿಸಲಾಗಿದೆ. ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.