ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರ ರಾಜೀನಾಮೆ ಬಗ್ಗೆ ತನಿಖೆಯ ವರದಿ ಬರುವವರೆಗೆ ಯಾವುದೇ ಕ್ರಮ ಇಲ್ಲ. ಇದರಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿಲ್ಲ. ವರಿಷ್ಠರು ಮಾಹಿತಿಯನ್ನು ಪಡೆದಿದ್ದಾರೆ. ಕಳೆದ ರಾತ್ರಿ  ಶವಪರೀಕ್ಷೆಯಾಗಿದ್ದು, ಪ್ರಾಥಮಿಕ ತನಿಖೆಯಾಗಲಿ. ತನಿಖೆಯ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಗ್ರಾಹಕರಿಗೆ ಸನ್ನಿ ಲಿಯೋನ್ ಆಫರ್ ನೀಡಿದ ಅಭಿಮಾನಿ...!


ಸಿಎಂ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡಿರುವ ಬಗ್ಗೆ ಸುದ್ದಿದಾರರಿಗೆ ಪ್ರತಿಕ್ರಿಯೆ ನೀಡಿದ ಅವರು, "ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿದ್ದಾಗ ಲಂಚದ ಆರೋಪಗಳು ಬಂದಿವೆ. ಬಿಡಿಎನಲ್ಲಿ ದೊಡ್ಡ ಹಗರಣವಾಗಿತ್ತು. ಆರೋಪಗಳು ಬಂದಿವೆ. ಅವರಿಗೆ ಯಾವ ಹಕ್ಕಿದೆ. ಪ್ರಕರಣದ ಬಗ್ಗೆ ತಿಳಿಸಿದರೆ ತನಿಖೆ ಮಾಡುತ್ತೇವೆ" ಎಂದರು. 


ಗೋವಿಂದ ಕಾರಜೋಳ ಹಾಗೂ ಸುಧಾಕರ್ ಅವರ ವಿರುದ್ಧವೂ ಆರೋಪಗಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರೇ ಇರಲಿ. ಯಾವುದೇ ಕಚೇರಿ ಇರಲಿ. ನಿರ್ದಿಷ್ಟ ಆರೋಪಗಳಿದ್ದರೆ ಅದಕ್ಕೆ ಉತ್ತರ, ಪ್ರತಿಕ್ರಿಯೆ ನೀಡಬಹುದು" ಎಂದರು. ಇನ್ನು ಇದೇ ವೇಳೆ ಗುತ್ತಿಗೆದಾರರ ಸಂಘ ಪ್ರತಿಭಟನೆ ಮಾಡುವ ಬಗ್ಗೆ ಮಾತನಾಡಿ, "ಹಲವಾರು ಗುತ್ತಿಗೆದಾರರ ಸಂಘಗಳಿವೆ. ಅವರ ತೀರ್ಮಾನಗಳೇನು ಎಂದು ಗೊತ್ತಿಲ್ಲ. ಏನಾದರೂ ನಿರ್ದಿಷ್ಟ ಪ್ರಕರಣಗಳಿದ್ದರೆ ಕೊಡಲಿ. ತನಿಖೆ ಮಾಡಿಸುತ್ತೇವೆ" ಎಂದರು.


ಇದನ್ನು ಓದಿ: "ಆರೋಗ್ಯ ಸಚಿವ ಸುಧಾಕರ್‌ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ"


ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ: ಕಾಂಗ್ರೆಸ್‌ನ ಆಡಳಿತವಿದ್ದ ಕಾಲದಲ್ಲಿ ಹಲವಾರು ಕೊಲೆಗಳಾಗಿ, ಆ ಕೊಲೆ ಮಾಡಿದ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ಹಿಂಪಡೆದು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿದ್ದರು. ಇದರಿಂದ ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಅವರಿಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.


"ಆಧಾರ ರಹಿತ ಆರೋಪಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆಧಾರಗಳಿದ್ದರೆ ಕೊಡಲಿ ತನಿಖೆ ಮಾಡಿಸುತ್ತೇವೆ. ಸದ್ಯಕ್ಕೆ ಪ್ರಾಥಮಿಕ ತನಿಖೆಯಾಗಲಿದೆ. ಅದರ ಆಧಾರದ ಮೇಲೆ ಏನಾಗಲಿದೆ ಎಂದು ನೋಡೋಣ" ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.