ಬೆಂಗಳೂರು: ಮೃತ ಸಂತೋಷ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಪ್ರಪಾಗಂಡಾ ಸೃಷ್ಟಿಸಿರುವ ಬಿಜೆಪಿ ಲಿಂಗಾಯತ ಸಮುದಾಯದ ಹಿಂದೂ ಕಾರ್ಯಕರ್ತನ ಸಾವಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೈತಿಕತೆ ಎಂಬ ಪದಕ್ಕೆ ಬಿಜೆಪಿಯಲ್ಲಿ ಅರ್ಥವಿದ್ದಿದ್ದರೆ ಇಂತಹ ಸದಾರಮೆ ನಾಟಕ ಬಿಟ್ಟು ಭ್ರಷ್ಟ, ದೇಶದ್ರೋಹಿ ಕೆ.ಎಸ್.ಈಶ್ವರಪ್ಪನನ್ನು ವಜಾಗೊಳಿಸಿ, ಜೈಲಿಗಟ್ಟಬೇಕಿತ್ತು’ ಅಂತಾ ಟೀಕಿಸಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್- ಸುರ್ಜೇವಾಲ ಪೊಲೀಸರ ವಶಕ್ಕೆ!
ಮೃತ ಸಂತೋಷ್ ಕಾಂಗ್ರೆಸ್ ಕಾರ್ಯಕರ್ತ ಎಂಬ ಪ್ರಪಾಗಂಡಾ ಸೃಷ್ಟಿಸಿರುವ @BJP4Karnataka
ಲಿಂಗಾಯತ ಸಮುದಾಯದ ಹಿಂದೂ ಕಾರ್ಯಕರ್ತನ ಸಾವಿನಲ್ಲಿ ರಾಜಕೀಯ ಮಾಡುತ್ತಿದೆ.ನೈತಿಕತೆ ಎಂಬ ಪದಕ್ಕೆ ಬಿಜೆಪಿಯಲ್ಲಿ ಅರ್ಥವಿದ್ದಿದ್ದರೆ ಇಂತಹಾ ಸದಾರಮೆ ನಾಟಕ ಬಿಟ್ಟು ಭ್ರಷ್ಟ, ದೇಶದ್ರೋಹಿ ಈಶ್ವರಪ್ಪನನ್ನು ವಜಾಗೊಳಿಸಿ, ಜೈಲಿಗಟ್ಟಬೇಕಿತ್ತು. pic.twitter.com/wqQJAf2pR7
— Karnataka Congress (@INCKarnataka) April 14, 2022
‘ಬಿಜೆಪಿ ಎಂಬ ಮೂರು ಬಿಟ್ಟ ಪಕ್ಷ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಜ್ಜೆಗೆಟ್ಟು ಯಾವ ಕೀಳು ಹಂತಕ್ಕೂ ಇಳಿದು ಪ್ರಪಾಗಂಡಾ ಸೃಷ್ಟಿಸಬಲ್ಲದು. ರಾಜಕಾರಿಣಿಗಳಿಗೆ, ರಾಜಕೀಯ ಪಕ್ಷಕ್ಕೆ ಇರಬೇಕಾದ ಕನಿಷ್ಠ ಸಾರ್ವಜನಿಕ ಲಜ್ಜೆಯೂ ಬಿಜೆಪಿಗೆ ಇಲ್ಲ. ಆಧಾರ, ಪುರಾವೆಗಳೇ ಇಲ್ಲದೆ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವನ್ನು ಅವಮಾನಿಸುತ್ತಿದೆ’ ಎಂದು ಕುಟುಕಿದೆ.
ಬಿಜೆಪಿ ಎಂಬ ಮೂರೂ ಬಿಟ್ಟ ಪಕ್ಷ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಜ್ಜೆಗೆಟ್ಟು ಯಾವ ಕೀಳು ಹಂತಕ್ಕೂ ಇಳಿದು ಪ್ರಪಾಗಂಡಾ ಸೃಷ್ಟಿಸಬಲ್ಲದು.
ರಾಜಕಾರಿಣಿಗಳಿಗೆ, ರಾಜಕೀಯ ಪಕ್ಷಕ್ಕೆ ಇರಬೇಕಾದ ಕನಿಷ್ಠ ಸಾರ್ವಜನಿಕ ಲಜ್ಜೆಯೂ ಬಿಜೆಪಿಗೆ ಇಲ್ಲ.
ಆಧಾರ, ಪುರಾವೆಗಳೇ ಇಲ್ಲದೆ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವನ್ನು ಅವಮಾನಿಸುತ್ತಿದೆ. pic.twitter.com/L0aKZfSM1r
— Karnataka Congress (@INCKarnataka) April 14, 2022
ಇದನ್ನೂ ಓದಿ: "ಬಸವಣ್ಣನ ಅನುಯಾಯಿಯ ಹತ್ಯೆಯಾಗಿದೆ"
‘ಡಿಯರ್ ಬಿಜೆಪಿ, ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದ ಕಾರ್ಯಕರ್ತರು. ಕೆ.ಸುಧಾಕರ್, ಮುನಿರತ್ನ ಸೇರಿದಂತೆ ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು. ಅವರ ಮೇಲೆ ಕಣ್ಣಿಟ್ಟಿರಿ, ಸ್ವಲ್ಪ ಹುಷಾರಾಗಿರಿ! ಅವರೆಲ್ಲರೂ ಬಿಜೆಪಿಯನ್ನು ಮುಗಿಸುವ ಟೂಲ್ ಕಿಟ್ ಭಾಗವೇ!’ ಎಂದು ಬಿಜೆಪಿಗೆ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
Dear @BJP4Karnataka,
ಸಿಎಂ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದ ಕಾರ್ಯಕರ್ತರು.ಸುಧಾಕರ್, ಮುನಿರತ್ನ ಸೇರಿದಂತೆ ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು.
ಅವರ ಮೇಲೆ ಕಣ್ಣಿಟ್ಟಿರಿ, ಸ್ವಲ್ಪ ಹುಷಾರಾಗಿರಿ!
ಅವರೆಲ್ಲರೂ ಬಿಜೆಪಿಯನ್ನು ಮುಗಿಸುವ ಟೂಲ್ ಕಿಟ್ ಭಾಗವೇ! pic.twitter.com/uk5UnBpXrS— Karnataka Congress (@INCKarnataka) April 14, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.