ಬೆಂಗಳೂರು : ಖಾಸಗಿ ಸ್ಲೀಪರ್ ಬಸ್ಗಳಿಗೆ ಸೆಡ್ಡು ಹೊಡೆಯಲು ಕೆಎಸ್‌ಆರ್‌ಟಿಸಿ ಇಂದು 20 ಹೊಸ ಅಂಬಾರಿ ಉತ್ಸವ ಸ್ಲೀಪರ್(ವೋಲ್ವೋ ಮಲ್ಟಿ ಆಕ್ಸೆಲ್) ಬಸ್ ಸೇವೆಯನ್ನು ಲೋಕಾರ್ಪಣೆ ಮಾಡಿದೆ. 


COMMERCIAL BREAK
SCROLL TO CONTINUE READING

ಇಂದು ವಿಧಾನಸೌಧದ ಮುಂದೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು 20 ಮಲ್ಟಿ-ಆಕ್ಸಲ್ ವೋಲ್ವೋ 9600 ಸ್ಲೀಪರ್ ಬಸ್‌ಗಳಿಗೆ ಇಂದು ಚಾಲನೆ ನೀಡಿದರು. ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ ಎಂಬ ಘೋಷಣೆಯೊಂದಿದೆ ಮಹತ್ವಾಕಾಂಕ್ಷೆಯ ಹೊಸ ವೋಲ್ವೋ ಅಂಬಾರಿ ಬಸ್ ಸೇವೆ ಆರಂಭಿಸಿದೆ. 


ಇದನ್ನೂ ಓದಿ : ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರಾ ಹೆಚ್ ಡಿಕೆ? ಏನಿದೆ ಜೆಡಿಎಸ್ ಲೆಕ್ಕಾಚಾರ ?


ಕೆಎಸ್‌ಆರ್‌ಟಿಸಿ ನಿರ್ವಹಿಸುವ ಎಲ್ಲಾ ಸ್ಲೀಪರ್ ಕೋಚ್ ಗಳಿಗಿಂತ ಈ ಬಸ್'ಗಳು ಅತ್ಯುತ್ತಮ ಸೌಕರ್ಯ ಹೊಂದಿದ್ದು, ಇವುಗಳಲ್ಲಿ ಪ್ರಯಾಣ ಮಾಡುವುದು ವಿಮಾನದಂತಹ ಪ್ರಯಾಣದ ಅನುಭವ ನೀಡುತ್ತದೆ. ಈ ಬಸ್'ಗಳು 15 ಮೀಟರ್ ಉದ್ದವಾಗಿವೆ. ಆದರೆ, ಅಂಬಾರಿ ಉತ್ಸವ್ ಬಸ್ ನಿಖರವಾದ ಮಾರ್ಗ ಮತ್ತು ಟಿಕೆಟ್ ದರಗಳು ಇನ್ನೂ ನಿಗದಿ ಆಗಿಲ್ಲ.  ಬೆಂಗಳೂರು ಮತ್ತು ಮಂಗಳೂರು ವಿಭಾಗಗಳಿಗೆ ಬಸ್‌ಗಳನ್ನು ಸೇರಿಸಲಾಗುವುದು. ಇನ್ನು 30 ಬಸ್ ಮುಂದಿನ ದಿನಗಳಲ್ಲಿ ಬರಲಿದೆ. ಅಂಬಾರಿ ಉತ್ಸವ್ - ಸೆಲೆಬ್ರೇಷನ್ ಆಫ್ ಜರ್ನಿ ಎಂದು ಎಂಬ ಘೋಷವಾಕ್ಯದಲ್ಲಿ ಬಸ್ ಸೇವೆ ಇಡಲಾಗಿದೆ. 


ಇಡೀ ದೇಶದಲ್ಲೇ ಅತಿ ಹೆಚ್ಚು ಐಷಾರಾಮಿ ಬಸ್ ಹೊಂದಿರುವ ಗರಿಮೆ ಕೆಎಸ್‌ಆರ್‌ಟಿಸಿಗಿದೆ. ಇಡೀ ದೇಶದಲ್ಲೇ ಯಾವುದೇ ಖಾಸಗಿ ಕಂಪನಿಗಳು ಹೊಂದಿರದ ಬಸ್'ಗಳು ಈ ನಮ್ಮ ಕೆಎಸ್‌ಆರ್‌ಟಿಸಿಯಲ್ಲಿವೆ. ಅಂದರೆ. ಕೇವಲ ಒಂದೇ ಒಂದು ಖಾಸಗಿ ಬಸ್ ಟ್ರಾವೆಲ್ಸ್ ಮಾತ್ರ ಈ ಮಾದರಿಯ ಎರಡು ಬಸ್ ಹೊಂದಿದೆ. ಇಂದು 15 ಬಸ್'ಗಳು ವಿಧಾನಸೌಧದಲ್ಲಿ ಚಾಲನೆ ನೀಡಿದ್ದು, ಇನ್ನು 5 ಬಸ್ ಗಳು ಕೆಎಸ್‌ಆರ್‌ಟಿಸಿ ಡಿಪೋದಲ್ಲಿವೆ.


ಕೆಎಸ್‌ಆರ್‌ಟಿಸಿ ಹೊಸ ವೋಲ್ವೋ ಮಲ್ಟಿ ಆಕ್ಸೆಲ್ ಬಸ್ ಲೋಕಾರ್ಪಣೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ರೈಲು ಮಾದರಿಯಲ್ಲಿಯೇ, ಬಸ್ಸಿನ ಒಳಭಾಗದಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ಬಸ್ ಗಳು ದೂರ ಪ್ರಯಾಣಕ್ಕೆ ಬಹಳ ಅನುಕೂಲವಾಗುತ್ತೆ. ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಬಸ್ಸಿನಲ್ಲಿ ಸಿಗಲಿದೆ. ಈ ಬಸ್ಸುಗಳಿಗೆ ಪಡೆ ಅಂತ ನಾನು ಕರೆಯುತ್ತೇನೆ. ನಾನು ಕೂಡ ಕೆಎಸ್‌ಆರ್‌ಟಿಸಿ ಕೆಂಪು ಬಸ್ಸಿನಲ್ಲೇ ಶಾಲಾ ಕಾಲೇಜಿಗೆ ಹೋಗಿ ಓದಿದ್ದು. ಹಳ್ಳಿಗಳಲ್ಲಿ ವಿಶೇಷವಾಗಿ ಕೆಎಸ್‌ಆರ್‌ಟಿಸಿ ಬಸ್ಸುಗಳ ಜೊತೆ ಜನರು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಲಾಭದಲ್ಲಿದ್ದ ಸಾರಿಗೆ ನಿಗಮಗಳಿಗೆ ಕೊರೊನಾ ದೊಡ್ಡ ಹೊಡೆತ ನೀಡಿತು. ಆಗ ನಮ್ಮ ಬಿಜೆಪಿ ಸರ್ಕಾರದಿಂದ 4600 ಕೋಟಿ ಹಣವನ್ನ 4 ನಿಗಮಗಳಿಗೆ ನೀಡಿದೆ. ಸಾರಿಗೆ ನಿಗಮಗಳು ಮೊದಲಿನಂತೆ ಲಾಭದಲ್ಲಿ ನಡೆಯಬೇಕು. ಖಾಸಗಿ ಅವರಿಗೆ ನಾವು ಪೈಪೋಟಿ ನೀಡಬೇಕು ಅಂದ್ರೆ, ನಾವು ಕಮರ್ಶಿಯಲ್ ರೂಟ್ ಗಳನ್ನ ಹೆಚ್ಚಿಸಬೇಕು. ಅದರ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ವಿದ್ಯಾರ್ಥಿನಿಯರಿಗೆ ಹಾಗೂ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡಲಾಗಿದೆ..ಏಪ್ರಿಲ್ 1 ರಿಂದ ಪಾಸ್ ಗಳನ್ನ ವಿತರಣೆ ಮಾಡಬೇಕು ಎಂದು ಪಾಸ್ ಗಳನ್ನ ಸಿದ್ದಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 


ಇದನ್ನೂ ಓದಿ : ರೋಹಿಣಿ ಸಿಂಧೂರಿ, ಡಿ.ರೂಪಾ ಬೀದಿ ರಂಪಾಟ ವಿಚಾರ - ಇಬ್ಬರಿಗೂ ಸರ್ಕಾರದಿಂದ ನೋಟಿಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.