ರೋಹಿಣಿ ಸಿಂಧೂರಿ, ಡಿ.ರೂಪಾ ಬೀದಿ ರಂಪಾಟ ವಿಚಾರ - ಇಬ್ಬರಿಗೂ ಸರ್ಕಾರದಿಂದ ನೋಟಿಸ್

Kannada Govt Issued Notice Against Officers: ಇಬ್ಬರೂ ಅಧಿಕಾರಿಗಳ ಈ ವರ್ತನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.  ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ. 

Written by - Ranjitha R K | Last Updated : Feb 21, 2023, 12:34 PM IST
  • ರೋಹಿಣಿ ಸಿಂಧೂರಿ, ಡಿ.ರೂಪಾ ವಿರುದ್ದ ನೋಟಿಸ್ ಜಾರಿ
  • ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್
  • ಇನ್ನು ಮುಂದೆ ಮಾಧ್ಯಮದ ಮುಂದೆ ಹೋಗದಂತೆ ಸೂಚನೆ
ರೋಹಿಣಿ ಸಿಂಧೂರಿ, ಡಿ.ರೂಪಾ ಬೀದಿ ರಂಪಾಟ ವಿಚಾರ - ಇಬ್ಬರಿಗೂ ಸರ್ಕಾರದಿಂದ ನೋಟಿಸ್  title=

ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ  ಡಿ. ರೂಪಾ ರಾಜ್ಯ ಸರ್ಕಾರದ ಸೇವಾ ನಿಯಮಗಳನಿಯಮವನ್ನು   ಮೀರಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಆರೋಪ  ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇಬ್ಬರೂ ಅಧಿಕಾರಿಗಳ ಈ ವರ್ತನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.  ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ. 

ಇನ್ನೊಬ್ಬ ಸರ್ಕಾರ ಅಧಿಕಾರಿಯ ವಿರುದ್ಧ ಆರೋಪ ಮಾಡಲು ಮಾಧ್ಯಮವನ್ನು ಬಳಕೆ ಮಾಡಿದ್ದೀರಿ, ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಆದರೆ ಅದನ್ನು ಬಿಟ್ಟು ನೀವು ಮಾಧ್ಯಮ ಮುಂದೆ ಹೋಗಿದ್ದೀ ರಿ. ನಿಮ್ಮ ಈ ಕ್ರಮ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಅಲ್ಲದೆ  ನಿಮ್ಮ ವರ್ತನೆ ಭಾರತೀಯ ಸರ್ವೀಸ್ ನಿಯಮಗಳ ಉಲ್ಲಂಘನೆಯಾಗಿದೆ ಎಂದ ನೋಟೀಸ್ ನಲ್ಲಿ ಹೇಳಲಾಗಿದೆ. 

ಇದನ್ನೂ ಓದಿ : Surya Mukundaraj : 'ಡಿಕೆ ರವಿ ಲವ್ ಕೇಸ್ ಬೆಳಕಿಗೆ ಬರಲಿಲ್ಲ, ರೋಹಿಣಿ ವಿರುದ್ಧ ದೂರು ದಾಖಲಾಗಲಿಲ್ಲ'

ಇನ್ನು ಮುಂದೆ ಯಾವುದೇ ರೀತಿಯ ಆರೋಪಗಳಿದ್ದರೂ ಸಕ್ಷಮ‌ ಪ್ರಾಧಿಕಾರದ ಮುಂದೆ ಮಾಡಬಹುದು. ಅದು ಬಿಟ್ಟು  ಮಾಧ್ಯಮಗಳ ಮುಂದೆ  ಹೋಗಿದ್ದೀರಿ. ಹೀಗಾಗಿ ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೋಗಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ಈ ನೋಟಿಸ್ ಜಾರಿ ಮಾಡಲಾಗಿದೆ. 

ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ರಾಜ್ಯ ಸರಕಾರ ಈ ನೋಟಿಸ್ ಜಾರಿ ಮಾಡಿದೆ. ಇಬ್ಬರೂ ಅಧಿಕಾರಿಗಳ ವರ್ತನೆ ಬಗ್ಗೆ ಸೂಕ್ತ ಕಾರಣ ನೀಡುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ : ಗಂಡನ ಜೊತೆ ಅಕ್ರಮವಾಗಿ ನೆಲೆಸಿದ್ದ ಪಾಕ್ ಯುವತಿ ಗಡಿಪಾರು : ಪಾಕ್'ಗೆ ಹೋಗಲ್ಲ ಎಂದು ಹೈಡ್ರಾಮ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News