ಗ್ರಹಣ ಮುಗಿಯುವವರೆಗೂ ಏನೂ ಕೆಲಸ ಮಾಡದಿರಲು ಸಿಎಂ ಯಡಿಯೂರಪ್ಪ ನಿರ್ಧಾರ
ಎಂಥದೇ ಪರಿಸ್ಥಿತಿಯಲ್ಲೂ ದಿನನಿತ್ಯ ವಾಕ್ ಮಾಡುತ್ತಿದ್ದ ಯಡಿಯೂರಪ್ಪ ಇವತ್ತು ಗ್ರಹಣದ ಹಿನ್ನೆಲೆಯಲ್ಲಿ ವಾಕಿಂಗ್ ಗೆ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಗ್ರಹಣ ಮುಗಿಯುವವರೆಗೂ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ.
ಎಂಥದೇ ಪರಿಸ್ಥಿತಿಯಲ್ಲೂ ದಿನನಿತ್ಯ ವಾಕ್ ಮಾಡುತ್ತಿದ್ದ ಯಡಿಯೂರಪ್ಪ ಇವತ್ತು ಗ್ರಹಣದ ಹಿನ್ನೆಲೆಯಲ್ಲಿ ವಾಕಿಂಗ್ ಗೆ ತೆರಳದೇ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಗ್ರಹಣ ಸಂದರ್ಭದಲ್ಲಿ ಯಾವುದೇ ಕೆಲಸ ಕೈಗೆತ್ತಿಕೊಂಡರು ಶುಭವಾಗುವುದಿಲ್ಲ ಎನ್ನುವ ಕಾರಣಕ್ಕೆ ಯಾವುದೇ ಕೆಲಸವನ್ನು ಮಾಡದೆ ಪೇಪರ್ ಓದುತ್ತಾ, ಟಿವಿ ನೋಡುತ್ತಾ ಕುಳಿತಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಹಣ ಗೋಚರಿಸುವ ಸಂದರ್ಭದಲ್ಲಿ ದೇವಸ್ಥಾನದ ಬಾಗಿಲುಗಳನ್ನು ತೆರೆಯುವುದಾಗಲಿ, ಪೂಜೆ ಸಲ್ಲಿಸುವುದಾಗಲಿ ಮಾಡುವುದಿಲ್ಲ. ದೇವರಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವ ಸಿಎಂ ಯಡಿಯೂರಪ್ಪ, ಗ್ರಹಣ ಮುಗಿಯುವವರೆಗೂ ಡಾಲರ್ಸ್ ಕಾಲೋನಿ ನಿವಾಸ 'ಧವಳಗಿರಿ'ಯಲ್ಲೇ ಇದ್ದು ಬಳಿಕ ಸ್ನಾನ-ಪೂಜೆ ಮಾಡಿ ಆನಂತರ ಉಳಿದ ಕೆಲಸ ಮಾಡಲಿದ್ದಾರೆ.
ಮನೆಯಲ್ಲಿ ಫ್ರೀ ಆಗಿರುವುದರಿಂದ ಅವರನ್ನು ಭೇಟಿ ಮಾಡಲೆಂದು ಆಪ್ತರು, ಬೆಂಬಲಿಗರು ಧಾವಿಸುತ್ತಿದ್ದಾರೆ. ಆದರೆ ಗ್ರಹಣ ಮುಗಿಯುವವರೆಗೂ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಸಿಎಂ ಬಿಎಸ್ವೈ ತಮ್ಮ ಭದ್ರತಾ ಸಿಬ್ಬಂದಿಗೆ ಸೂಚಿಸಿದ್ದಾರೆ. ಹಾಗಾಗಿ ಬಂದವರು ವಾಪಸ್ಸಾಗುತ್ತಿದ್ದಾರೆ. ಯಡಿಯೂರಪ್ಪ ಮುನ್ನೆಯಷ್ಟೇ ಕೇರಳದ ದೇವಸ್ಥಾನಕ್ಕೆ ಹೋಗಿವೈ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದರು.