ಬೆಂಗಳೂರು : ಸಂಕಷ್ಟ ಸನ್ನಿವೇಶದಲ್ಲಿ  ಸರ್ವವ್ಯಾಪಿ, ಸರ್ವಸಪರ್ಶಿ  ಬಜೆಟ್ (Karnataka Budget) ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಸಂಕಷ್ಟದ ಸಮಯದಲ್ಲಿ ಯಾರಿಗೂ ಒಂದು ರೂಪಾಯಿ ತೆರಿಗೆ ಹಾಕಿಲ್ಲ, ಎಲ್ಲೂ ಯಾರಿಗೂ ಹೊರೆಯಾಗದಂತೆ ಬಜೆಟ್ ಮಂಡಿಸಲಾಗಿದೆ. ಇದು ಇತಿಹಾಸದಲ್ಲಿಯೇ ಮೊದಲು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

 ಕಳೆದ ವರ್ಷದ ಬಜೆಟ್ (Karnataka Budget) ಗಿಂತ ಈ ಬಾರಿ  8,314 ಕೋಟಿಗೂ ಅಧಿಕ ಮೊತ್ತದ ಬಜೆಟ್ ಮಂಡಿಸಲಾಗಿದೆ. ಅಭಿವೃದ್ದೀ, ಜನರ ಕಲ್ಯಾಣ ಕಾರ್ಯಗಳಿಗೆ ಎ್ಲೂ ಕೊರತೆಯಾಗದಂತೆ ನೋಡಿಕೊಂಡು ಬಜೆಟ್ (Budget) ಮಂಡಿಸಲಾಗಿದೆ.  ಇದೊಂದು  ಸವಾಲುಗಳಿಗೆ ಪರಿಹಾರ ಒದಗಿಸಬಲ್ಲ ಸಮತೋಲಿತ ಬಜೆಟ್ ಆಗಿದೆ ಎಂದು ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.


ಇದನ್ನೂ ಓದಿ : G Parameshwara: 'ಕರ್ನಾಟಕ ಇತಿಹಾಸದಲ್ಲೇ ಇದು ಕೆಟ್ಟ ಬಜೆಟ್'


ಇನ್ನು ಬಜೆಟ್ ಮಂಡನೆಗೂ ಮುನ್ನ ಸಿಎಂ ಯಡಿಯೂರಪ್ಪಗೆ ಬಜೆಟ್ ಮಂಡಿಸುವ ನೈತಿಕತೆ ಇಲ್ಲ ಎಂದು ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ (Congress) ಪ್ರತಿಭಟಿಸಿರುವ ಬಗ್ಗೆ ಬಿಎಸ್ ವೈ  ಅಸಮಾಧಾನವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನವರ ನೈತಿಕತೆ ಬಗ್ಗೆ ನಾಳೆ ಸದನದಲ್ಲಿ ಮಾತನಾಡುವುದಾಗಿ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ಬಾರಿಯೂ ಸಿದ್ದರಾಮಯ್ಯ ಪ್ರತಿಪಕ್ಷದಲ್ಲೇ ಕೂರುವಂತೆ ಮಾಡುತ್ತೇನೆ ಎಂದು ಗುಡುಗಿದ್ದಾರೆ. ಮುಂದಿನ ಬಾರಿ ಸಿದ್ದರಾಮಯ್ಯನನ್ನ ಪ್ರತಿಪಕ್ಷದಲ್ಲಿ ಕೂರಿಸದಿದ್ದರೆ ನಾನು ಯಡುಯೂರಪ್ಪನೇ ಅಲ್ಲ ಎಂದು ಸವಾಲು ಹಾಕಿದದಾರೆ.


ಇದನ್ನೂ ಓದಿ : Karnataka Budget 2021: ಕೃಷಿ, ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಉತ್ತೇಜನ ನೀಡಿದ ಬಜೆಟ್


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.