BS Yediyurappa : ಅರುಣ್ ಸಿಂಗ್ ಬಂದುಹೋದ ಮೇಲೆ `ಜಾಲಿ ಮೂಡ್` ನಲ್ಲಿ ಸಿಎಂ ಬಿಎಸ್ವೈ
`ಸರ್, ಲಾಯರ್ ನೋಡಬೇಕು, ಮನೆಗೆ ಹೋಗ್ತೀನಿ ಎಂದು ಅಶೋಕ್
ಬೆಂಗಳೂರು : ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದುಹೋದ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಜಾಲಿ ಮೂಡ್ ನಲ್ಲಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿದ ಕಾರಣ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್(Arun Singh) ಅವರು ರಾಜ್ಯಕ್ಕೆ ಆಗಮಿಸಿ ಮೂರು ದಿನ ಚರ್ಚೆ ಮಾಡಿ ಹೋಗಿದ್ದಾರೆ. ಕೆಲವು ಶಾಸಕರ ಜೊತೆ ವೈಯಕ್ತಿಕವಾಗಿ ಮಾತನಾಡಿರುವ ಅರುಣ್ ಸಿಂಗ್ ಸದ್ಯ ದೆಹಲಿಗೆ ತೆರಳಿದ್ದಾರೆ. ಆದರೆ ಇದಾದ ಬಳಿಕ ಸಿಎಂ ಬಿಎಸ್ ಯಡಿಯೂರಪ್ಪ ಜಾಲಿ ಮೂಡ್ ನಲ್ಲಿದ್ದಾರೆ.
ಇದನ್ನೂ ಓದಿ : DK Shivakumar : 'ಬಿಜೆಪಿಯದ್ದು ಯುದ್ಧಕಾಂಡ ಜನ ಸಾಮಾನ್ಯರದ್ದು ಕರ್ಮಕಾಂಡ'
ಸುದ್ದಿಗಾರರ ಜೊತೆ ಮಾತನಾಡಿ ತೆರಳುವಾಗ ಸಚಿವ ಅಶೋಕ್(R Ashok) ಗೆ ಎಲ್ಲಿಗೆ ಹೋಗ್ತಾ ಇದ್ದೀಯಾ ಎಂದರು.
ಇದಕ್ಕೆ 'ಸರ್, ಲಾಯರ್ ನೋಡಬೇಕು, ಮನೆಗೆ ಹೋಗ್ತೀನಿ ಎಂದು ಅಶೋಕ್ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ(BS Yediyurappa) ಏನು.. ನಿನ್ ಮೇಲೆ ಕೇಸ್ ಹಾಕಿದ್ದಾರಾ.!? ಎಂದು ತಮಾಷೆ ಮಾಡಿ ನಕ್ಕರು.
ಇದನ್ನೂ ಓದಿ : Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!
ಲಕ್ಷ್ಮಣ ಸವದಿ(Laxman Savadi) ಮೇಲೆ ಕೇಸ್ ಹಾಕಬೇಕು, ದಾರಿ ತಪ್ಪುತ್ತಿದ್ದಾರೆ ಎಂದ ಅಶೋಕ್ ಹೇಳಿದಾಗ, ನಿನ್ನ ಸ್ನೇಹಿತನ ರಕ್ಷಣೆ ಮಾಡೋದು ನಿನ್ನ ಕೆಲಸ ಅಲ್ವಾ., ಮಾಡು' ಎಂದು ಯಡಿಯೂರಪ್ಪ ನಗೆ ಚಟಾಕಿ ಹಾರಿಸಿದರು. ಯಡಿಯೂರಪ್ಪ ಮಾತಿಗೆ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ಅಶೋಕ್ ನಕ್ಕರು.
ಇದನ್ನೂ ಓದಿ : KS Eshwarappa : 'ತಾಲೂಕು-ಜಿಲ್ಲಾ ಪಂಚಾಯತ್' ಚುನಾವಣೆ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಸಚಿವ ಈಶ್ವರಪ್ಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4GBreaking News
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.