DK Shivakumar : 'ಬಿಜೆಪಿಯದ್ದು ಯುದ್ಧಕಾಂಡ ಜನ ಸಾಮಾನ್ಯರದ್ದು ಕರ್ಮಕಾಂಡ'

ದುರಾಡಳಿತ, ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟದಲ್ಲೇ ಬಿಜೆಪಿ ನಾಯಕರು ಕಾಲಹರಣ

Last Updated : Jun 19, 2021, 02:20 PM IST
  • ರಾಜ್ಯದಲ್ಲಿ ಇಂದು ಜನರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ
  • ದುರಾಡಳಿತ, ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟದಲ್ಲೇ ಬಿಜೆಪಿ ನಾಯಕರು ಕಾಲಹರಣ
  • ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡದೇ ಸುಳ್ಳು ಲೆಕ್ಕ ನೀಡುತ್ತಿದೆ
DK Shivakumar : 'ಬಿಜೆಪಿಯದ್ದು ಯುದ್ಧಕಾಂಡ ಜನ ಸಾಮಾನ್ಯರದ್ದು ಕರ್ಮಕಾಂಡ' title=

ಬೆಂಗಳೂರು : ರಾಜ್ಯದಲ್ಲಿ ಇಂದು ಜನರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ನರಕಯಾತನೆಗೆ ಕೊನೆಯಿಲ್ಲದಾಗಿದೆ. ಬಿಜೆಪಿ ಯುದ್ಧಕಾಂಡ ಜನರ ಕರ್ಮಕಾಂಡ ಎಂಬಂತಾಗಿದೆ ಪರಿಸ್ಥಿತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್(DK Shivakumar), ದುರಾಡಳಿತ, ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟದಲ್ಲೇ ಬಿಜೆಪಿ ನಾಯಕರು ಕಾಲಹರಣ ಮಾಡುತ್ತಿದ್ದಾರೆ. ಮೊದಲು ವಿಧಾನಮಂಡಲ ಅಧಿವೇಶನ ಕರೆಯಲಿ ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಬಗ್ಗೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!

ರಾಜ್ಯದಲ್ಲಿ ಕೊರೋನಾ(Corona) ಸೋಂಕಿಗೆ ಸಾವನ್ನಪ್ಪಿದವರ ಲೆಕ್ಕವನ್ನೂ ಸರ್ಕಾರಕ್ಕೆ ಸರಿಯಾಗಿ ಕೊಡಲಾಗುತ್ತಿಲ್ಲ. ಸುಳ್ಳು ಲೆಕ್ಕಗಳನ್ನು ಕೊಟ್ಟು ಸಾವಿನ ಸಂಖ್ಯೆಯನ್ನೂ ಮುಚ್ಚಿಡಲಾಗುತ್ತಿದೆ. ಜನರು ಬದುಕಿಗಾಗಿ ಹೋರಾಟ ನಡೆಸಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ : KS Eshwarappa : 'ತಾಲೂಕು-ಜಿಲ್ಲಾ ಪಂಚಾಯತ್' ಚುನಾವಣೆ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಸಚಿವ ಈಶ್ವರಪ್ಪ 

ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡದೇ ಸುಳ್ಳು ಲೆಕ್ಕ ನೀಡುತ್ತಿದೆ. ಕೋವಿಡ್ ಸಾವಿನ ಲೆಕ್ಕವೇ ಸರಿಯಾಗಿ ಆಡಿಟ್ ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರೇ(Congress Workers) ಆಡಿಟ್ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಕರ್ತರೇ ಆಡೀಟ್ ಮಾಡಿ, ಸಾವಿನ ಪ್ರಮಾಣಪತ್ರ ಸೇರಿ ಎಲ್ಲಾ ಮಾಹಿತಿ ಕಲೆ ಹಾಕಿ ಎಂದು ಕರೆ ನೀಡಿದರು. ಮೃತ ಕುಟುಂಬಗಳಿಗೆ ಕಾಂಗ್ರೆಸ್ ನಿಂದಲೇ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : Heavy Rainfall : ಜೂ. 21 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News