ಪಾಂಡವಪುರ: ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ಆಗಸ್ಟ್ 11 ರಂದು ರೈತರೊಂದಿಗೆ ಭತ್ತ ನಾಟಿ ಮಾಡಿ ರೈತರಿಗೆ ಸ್ಫೂರ್ತಿ ತುಂಬಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಗದ್ದೆಯಲ್ಲಿ ರೈತರೊಂದಿಗೆ ಭತ್ತ ಕಟಾವು ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಮಂಡ್ಯ ಜಿಲ್ಲೆಯ ಸೀತಾಪುರದ ಗದ್ದೆಯಲ್ಲಿ ಆಗಸ್ಟ್ 11 ರಂದು ರೈತರೊಂದಿಗೆ ಭತ್ತ ನಾಟಿ ಮಾಡಿದ್ದ ಸಿಎಂ ಇಂದು ಅದೇ ಗದ್ದೆಯಲ್ಲಿ ರೈತರೊಂದಿಗೆ ಕೊಯಿಲು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಟಾವಿನ ನಂತರ ಜಮೀನಿನ ಪಕ್ಕದಲ್ಲೇ ನಿರ್ಮಾಣ ಮಾಡಿರುವ ಕಣದಲ್ಲಿ ಭತ್ತ ಬಡಿದು ರಾಶಿ ಮಾಡಿ ಪೂಜೆ ನೆರವೇರಿಸಲಿದ್ದಾರೆ.


ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಚ್. ಪುಟ್ಟರಾಜು, ಜಿಲ್ಲೆಯ ಸಂಸದರು, ಶಾಸಕರು ಸಿಎಂ ಗೆ ಸಾಥ್ ನೀಡಲಿದ್ದಾರೆ.