ಕೆಪಿಸಿಸಿ ಅಧ್ಯಕ್ಷ ಸ್ಥಾನ: ಸಿಎಂ ಮತ್ತು ಡಿಸಿಎಂ `ಬಿನ್ನಾ`ಅಭಿಪ್ರಾಯ
KPCC President: ಸಿಎಂ ಸಿದ್ದರಾಮಯ್ಯನವರ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಹಿಂದ (ಅಲ್ಫಸ, ಹಿಂದುಳಿದ ವರ್ಗ, ದಲಿತ) ಸಮುದಾಯಕ್ಕೆ ನೀಡಬೇಕು.
ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯದಲ್ಲಿ ಭಿನ್ನತೆ ಹೊಂದಿದ್ದು, ಹೈ ಕಮಾಂಡ್ ಕಡೆ ರಾಜ್ಯ ನಾಯಕರು ಮುಖ ಮಾಡಿದ್ದಾರೆ. ಹಾಗಾದರೆ ಇಬ್ಬರ ನಿಲುವು ಏನು?
ಸಿಎಂ ಸಿದ್ದರಾಮಯ್ಯನವರ ನಿಲುವು:
ಸಿಎಂ ಸಿದ್ದರಾಮಯ್ಯನವರ ಪ್ರಕಾರ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಹಿಂದ (ಅಲ್ಫಸ, ಹಿಂದುಳಿದ ವರ್ಗ, ದಲಿತ) ಸಮುದಾಯಕ್ಕೆ ನೀಡಬೇಕು.ಸತೀಶ್ ಜಾರಕಿಹೊಳಿ ಅಥವಾ ಮಹಾದೇವಪ್ಪ ಈ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯವನ್ನ ಸಿದ್ದರಾಮಯ್ಯ ಆತ್ಮೀಯ ಮೂಲಗಳು ತಿಳಿಸಿವೆ.
ಡಿಸಿಎಂ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡಲಾಗಿದೆ, ಆದ್ದರಿಂದ ಅಧ್ಯಕ್ಷ ಸ್ಥಾನ ಅಹಿಂದ ಸಮುದಾಯಕ್ಕೆ ದೊರೆತರೆ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಸಮುದಾಯವನ್ನು ಗಟ್ಟಿಯಾಗಿ ಹಿಡಿಯಲು ಸಹಕಾರಿಯಾಗುತ್ತದೆ.
ಸಿಎಂ ಸಿದ್ದರಾಮಯ್ಯನವರ ಪ್ರಕಾರ, ಒಕ್ಕಲಿಗರು ಕುಮಾರಸ್ವಾಮಿ ಹಾಗೂ ಲಿಂಗಾಯತರು ವಿಜಯೇಂದ್ರ ಪರವಾಗಿದ್ದಾರೆ, ಹೀಗಾಗಿ ಉಳಿದೆಲ್ಲಾ ಸಮುದಾಯವನ್ನ ಕಾಂಗ್ರೆಸ್ ನತ್ತ ಸೆಳೆಯಬೇಕಿರುವುದು ಅವಶ್ಯ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಇದನ್ನೂ ಓದಿ: ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಲ್ಲಿ ಕೋಟಿ ಕೋಟಿ ಲೂಟಿ: ಎಚ್‌ಡಿಕೆ ಆಕ್ರೋಶ!
ಡಿಸಿಎಂ ಡಿ.ಕೆ. ಶಿವಕುಮಾರ್ ನಿಲುವು:
ಡಿಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಮೀಸಲಾಗಬೇಕು ಎಂಬ ನಿಲುವು ತಾಳಿದ್ದಾರೆ.ಜಿಸಿ ಚಂದ್ರಶೇಖರ್ ಅಥವಾ ಡಿಕೆ ಸುರೇಶ್, ಈ ಸ್ಥಾನಕ್ಕೆ ಸೂಕ್ತ ಎಂಬ ಅಭಿಪ್ರಾಯವನ್ನ ಹೊಂದಿದ್ದಾರೆ.
ಡಿಸಿಎಂನ ಪ್ರಕಾರ, ಒಕ್ಕಲಿಗ ಸಮುದಾಯವು ಕಾಂಗ್ರೆಸ್‌ನ್ನು ಬೆಂಬಲಿಸಿದ್ದರಿಂದ ಪಕ್ಷಕ್ಕೆ ಆಡಳಿತದ ಅಧಿಕಾರ ದೊರೆಯಿತು. ಹೀಗಾಗಿ ಅಧ್ಯಕ್ಷ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ನೀಡದಿದ್ದರೆ, ಪ್ರಬಲ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗಬಹುದು ಎಂಬ ಲೆಕ್ಕಾಚಾರ ಮುಂದಿಟ್ಟಿದ್ದಾರೆ.
ಹೈಕಮಾಂಡ್ ನಿಲುವು ಕುತೂಹಲ:
ಸಿಎಂ ಮತ್ತು ಡಿಸಿಎಂ ಅವರ ಈ ವಿಭಿನ್ನ ಅಭಿಪ್ರಾಯಗಳು ಹೈಕಮಾಂಡ್ ಗಮನಕ್ಕೆ ಬಂದಿದ್ದು, ಈ ಕುರಿತು ಶೀಘ್ರದಲ್ಲೇ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.ಹೈಕಮಾಂಡ್ ನಿಂದ ಪಕ್ಷದ ಭವಿಷ್ಯಕ್ಕೆ ಪ್ರಾಧಾನ್ಯತೆ ನೀಡಿ, ಸಮುದಾಯಗಳ ಸಮತೋಲನ ಕಾಯುವ ನಿರ್ಧಾರ ಮಾಡಲಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ ಹೈ ಕಮಾಂಡ್ ನ ನಿರ್ಧಾರ 2028ರ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರಲಿದೆ. ಹೀಗಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕೈ ಮುಖಂಡರು ನಿರ್ಧಾರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ಚೀನಾ ವೈರಸ್..! ಎಚ್ಎಂಪಿವಿ ವೈರಸ್ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ...!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.