Siddaramaiah Zero Traffic: ಬೆಂಗಳೂರಿನಲ್ಲಿ ಜೀರೋ ಟ್ರಾಫಿಕ್ ಬೇಡವೆಂದ ಸಿದ್ದರಾಮಯ್ಯ
Siddaramaiah Zero Traffic: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ವಾಹನ ಸಂಚರಿಸುವ ವೇಳೆ ಅವರ ಸುಗಮ ಸಂಚಾರಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ಸಿಗ್ನಲ್ಗಳಲ್ಲಿ ವಾಹನ ಸವಾರರು ಕೆಲವು ನಿಮಿಷ ಕಾಯಬೇಕಾಗುತ್ತದೆ. ಇದು ಸಾರ್ವಜಕರಿಗೆ ತೊಂದರೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ.
ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯನವರು ಇಂದು(ಭಾನುವಾರ) ತಮಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ತ್ಯಜಿಸಿದ್ದಾರೆ. ಸಾರ್ವಜನಿಕರಿಗೆ ತಮ್ಮಿಂದಾಗುವ ಕಿರಿಕಿರಿ ತಪ್ಪಿಸಲು ಜೀರೋ ಟ್ರಾಫಿಕ್ ಬೇಡ ಅಂತಾ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೋ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: DK Shivakumar : ನೊಣವಿನಕೆರೆ ಅಜ್ಜಯ್ಯನ ಮಠದತ್ತ ಡಿಕೆಶಿ ಪ್ರಯಾಣ; ಕೆಟ್ಟು ನಿಂತ ಎಸ್ಕಾಟ್ ವಾಹನ
ಟ್ರಾಫಿಕ್ ವ್ಯವಸ್ಥೆ ಬೇಡವೆಂದು ಹೇಳಿದ್ದಾರೆ.
ಇದನ್ನೂ ಓದಿ: 12 ನೇ ತರಗತಿ ತೇರ್ಗಡೆಯಾದ ಸಿಎಂ ಸಿದ್ದರಾಮಯ್ಯ ಮೊಮ್ಮಗ ಧವನ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.