ʼಅರ್ಜುನʼನ ಸಾವಿನ ಸುತ್ತ ಹಲವು ಪ್ರಶ್ನೆಗಳು..! ರಾಜರು, ಸಿಎಂ, ಡಿಸಿಎಂ ಎಲ್ಲಿ ಎಂದ ನೆಟ್ಟಿಗರು
Dasara elephant Arjuna : ಗಾಂಭೀರ್ಯಕ್ಕೆ ಹೆಸರಾಗಿ, ನಾಡದೇವತೆಯನ್ನು ಬೆನ್ನ ಮೇಲೆ ಕುರಿಸಿಕೊಂಡು ಅರಮನೆ ಸುತ್ತುತ್ತಿದ್ದ ಕನ್ನಡದ ಕಂದ ಅರ್ಜುನ ಆನೆ ಇನ್ನಿಲ್ಲ. ಬಹುಷಃ ಪ್ರಾಣಿ ಎನ್ನುವುದಕ್ಕಿಂತ ಎಲ್ಲರಿಗೂ ಅರ್ಜುನ ನೆಚ್ಚಿನ ಹೀರೋ ಆಗಿದ್ದ ಅಂದ್ರೆ ತಪ್ಪಾಗಲಾರದು. ಇದೀಗ ಮಾಡದ ತಪ್ಪಿಗೆ ಬಲಿಯಾಗಿದ್ದು, ಅನೇಕ ಅನುಮಾನಗಳಿಗೆ ಕಾರಣವಾಗಿದೆ.
Arjuna Elephant death : ʼಅರ್ಜುನʼ ದೈತ್ಯ, ಸುರಸುಂದರ, ನಾಡದೇವತೆಯನ್ನು ಹೊತ್ತು ಗಾಂಭೀರ್ಯ ನಡುಗೆ ಹಾಕುತ್ತ ರಾಜಬೀದಿಗೆ ಬಂದರೆ, ತಾಯಿ ಚಾಮುಂಡೇಶ್ವರಿ ಅವನ ಮೇಲೆ ವಿರಾಜಮಾನವಾಗಿ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಳು. ಇದೀಗ ಅವನು ಶಾಶ್ವತವಾಗಿ ತಾಯಿ ಭುವನೇಶ್ವರಿ ಮಡಿಲ್ಲಲಿ ಚಿರನಿದ್ರೆಗೆ ಜಾರಿದ್ದಾರೆ. ಆದ್ರೆ ಇಷ್ಟು ದಿನ ನಾಡಸೇವೆ ಮಾಡಿದ ಅರ್ಜುನನ್ನು ಕೊನೆಯ ಬಾರಿಗಾದರೂ ನೋಡಲು ಸಿಎಂ, ಡಿಸಿಎಂ, ಮೈಸೂರು ರಾಜರು, ಅರಣ್ಯ ಸಚಿವರು ಬಾರದಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು.. ನಾಡದೇವತೆ ಹೊತ್ತು ಸಾಗುವ ವೀರ ಅರ್ಜುನ ದಸರಾ ಮತ್ತು ಕೆಲವು ಕಾರ್ಯಾಚರಣೆಗಷ್ಟೇ ಸೀಮಿತವಾದನೇ ಎನ್ನುವ ವಿಚಾರವೊಂದು ನೆಟ್ಟಿಗರ ತಲೆ ಹೊಕ್ಕಿದೆ. ಸೋಷಿಯಲ್ ಮೀಡಿಯಾದಲ್ಲಿ ಕೊನೆಗಳಿಗೆದಾದರೂ ಅರ್ಜುನನ್ನು ನೋಡಲು ಬಾರದ ಮುಖ್ಯಮಂತ್ರಿ ಸಿದ್ದರಾಮ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮೈಸೂರು ಅರಸರು, ಅರಣ್ಯ ಸಚಿವರ ಮೇಲೆ ನೆಟಿಜನ್ಸ್ ಕೆಂಡಕಾರುತ್ತಿದ್ದಾರೆ.
ಇದನ್ನೂ ಓದಿ: ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ: ಸಿಎಂ ಸಿದ್ದರಾಮಯ್ಯ
ಇನ್ನು ಅರ್ಜುನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಚರ್ಚೆ ಜೋರಾಗಿದೆ. ಮಾವುತ ವಿನು ಹೇಳುವಂತೆ ಅವನ ಕಾಲಿಗೆ ಗುಂಡೇಟು ಬಿತ್ತಂತೆ. ವೀರಾವೇಷದಿಂದ ಮದವೇರಿದ ಸಲಗವನ್ನು ಮಣಿಸುತ್ತಿದ್ದ ಅರ್ಜುನನ ಸೋಲು ಮತ್ತು ಸಾವಿಗೆ ನಮ್ಮವರೇ ಕಾರಣವಾದ್ದು ನಿಜಕ್ಕೂ ಘೋರ ಅಪರಾಧ, ಈ ಕುರಿತು ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳು ಚಕಾರವೆತ್ತದಿರುವುದು ವಿಪರ್ಯಾಸ.
ಸಧ್ಯ ಸೋಷಿಯಲ್ ಮೀಡಿಯಾದಲ್ಲಿ ಅರ್ಜುನ ಸಾವಿನ ಕುರಿತು ಬಹಳ ಚರ್ಚೆ ನಡೆಯುತ್ತಿದೆ. ಅಲ್ಲದೆ, ನೆಟ್ಟಿಗರು ಹಲವಾರು ಪ್ರಶ್ನೆಗಳನ್ನು ಸರ್ಕಾರದ ಮುಂದಿಡುತ್ತಿದ್ದಾರೆ. ಈ ಕುರಿತು ನಿರ್ದೇಶಕ ರವಿ ಶ್ರೀವಾಸ್ತ ಸಹ ಕೆಲವು ಪ್ರಶ್ನೆ ಕೇಳಿದ್ದಾರೆ. ಅರ್ಜುನನ್ನು ನೋಡಲು ಮೈಸೂರು ರಾಜರು ಏಕೆ ಬರಲಿಲ್ಲ. ಸಿಎಂ ಡಿಸಿಎಂ ಎಲ್ಲಿ ಹೋದರು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಜೀ ಕನ್ನಡ ನ್ಯೂಸ್ ಜೊತೆ ಮಿಮಿಕ್ರಿ ದಯಾನಂದ್ ಮಾತುಕಥೆ
ಅಲ್ಲದೆ, ಮೈಸೂರಿನಲ್ಲಿ ಅಂತ್ಯಕ್ರಿಯೆ ಏಕೆ ಮಾಡಲಿಲ್ಲ. ಅವಸರವಾಗಿ ಮಣ್ಣು ಮಾಡುವುದು ಏನಿತ್ತು..? ದಂತ ಕತ್ತರಿಸುವ ಅವಶ್ಯಕತೆ ಏನಿತ್ತು..? 64 ವರ್ಷದ ಅರ್ಜುನನಿಗೆ ವಿಶ್ರಾಂತಿ ನೀಡುವ ಬದಲು ಬೇಟೆಗೆ ಕೆರೆದುಕೊಂಡು ಹೋಗಿದ್ದು ಏಕೆ..? ಅಂತ ಹಲವಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಅಲ್ಲದೆ, ಜನರು ಸಹ ಈ ಕುರಿತು ಪ್ರಶ್ನೆ ಮಾಡುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.