ಸಿಎಂ ಸಿದ್ದು `ಬಲ`ದಿಂದ ಡಿನ್ನರ್ ಹೆಸರಿನಲ್ಲಿ ಸಚಿವರ ಪ್ರತ್ಯೇಕ ಸಭೆ?!
Dinner Meeting: ಡಿಸಿಎಂ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗ, ಆಪ್ತ ಸಚಿವರ ಜೊತೆ ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ನಡೆದ ಚರ್ಚೆ ಕುತೂಹಲ ಹೆಚ್ಚಿಸಿದೆ.
ಬೆಂಗಳೂರು : ಹೊಸ ವರ್ಷದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಲಾಗಿದ್ದು ಸಚಿವರ ಬೋಜನ ಸಭೆಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಾಗಿದ್ದು ರಾಜಕೀಯ ಚರ್ಚೆ ಮತ್ತಷ್ಟು ಜೋರಾಗಿದೆ.
ಪ್ರತ್ಯೇಕ ಸಭೆ ನಡೆಸದಂತೆ ಸಚಿವರಿಗೆ ಹೈಕಮಾಂಡ್ ಸೂಚನೆ ನೀಡಲಾಗಿತ್ತು ಆದರೆ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ಮೂಲಕ ಹೈಕಮಾಂಡ್ ಗೆ ಸಂದೇಶ ರವಾನೆ ಮಾಡಿದಂತಿದೆ. ಹಾಗೂ ಡಿಸಿಎಂ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗ, ಆಪ್ತ ಸಚಿವರ ಜೊತೆ ಡಿನ್ನರ್ ಮೀಟಿಂಗ್‌ನಲ್ಲಿ ನಡೆದ ಚರ್ಚೆ ಕುತೂಹಲ ಹೆಚ್ಚಿಸಿದೆ.
ಮೂಲಗಳ ಪ್ರಕಾರ ನಿನ್ನೆ ರಾತ್ರಿ ನಡೆದ ಡಿನ್ನರ್ ಪಾರ್ಟಿಯಲ್ಲಿ ಕೆಲ ವಿಷಯಗಳು ಚರ್ಚೆ ಆಗಿವೆ, ಈ ಪೈಕಿ,
1. ಸಂಪುಟ ಪುನರ್ ರಚನೆ:
ಸಂಕ್ರಾಂತಿ ವೇಳೆಗೆ ಸಂಪುಟ ಪುನಾರಚನೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಹೈಕಮಾಂಡ್ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೇ ಎನ್ನಲಾಗಿದೆ. ಈ ಕಾರಣ ಕೆಲ ಸಚಿವರ ಬಗ್ಗೆ ಮಾತುಕತೆ ನಡೆಸಲಾಗಿದೆ.
ಇದನ್ನೂ ಓದಿ- ಸರ್ಕಾರಿ ಬಸ್ ಪ್ರಯಾಣ ದರ ಇನ್ಮುಂದೆ ಕಾಸ್ಟ್ಲಿ: ಶೇ 15ರಷ್ಟು ದರ ಹೆಚ್ಚಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ
2. ಮುಖ್ಯಮಂತ್ರಿಯ ದೆಹಲಿ ಪ್ರವಾಸ:
ಮುಂದಿನ ವಾರ ಸಿಎಂ ದೆಹಲಿಗೆ ತೆರಳುವ ಸಾಧ್ಯತೆ; ಈ ಹಿನ್ನೆಲೆ ಸಚಿವರೊಂದಿಗೆ ಮಹತ್ವದ ಚರ್ಚೆ ಮಾಡಲಾಗಿದೆ.
3. ಕೆಪಿಸಿಸಿ ಅಧ್ಯಕ್ಷರ ಸ್ಥಾನ:
ಇನ್ನು CWC ನಿರ್ಣಯ ಪ್ರಕಾರ ಒಂದು ನಾಯಕನಿಗೆ ಒಂದು ಜವಾಬ್ದಾರಿ ಎಂದು ನಿರ್ಣಯ ಮಾಡಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವ ಸಾಧ್ಯತೆ ಬಗ್ಗೆ ಸಿಎಂ ತಮ್ಮ ಆಪ್ತ ಸಚಿವರನ್ನು ನೇಮಕ ಮಾಡುವ ಸಾಧ್ಯತೆ ಕುರಿತು ಚರ್ಚೆ ಮಾಡಲಾಗಿದೆ, ಎನ್ನಲಾಗುತ್ತಿದೆ.
4. ಡಿಕೆ ಶಿವಕುಮಾರ್ ಒಪ್ಪಂದದ ವಿಚಾರ:
ಡಿಸಿಎಂ ಜೊತೆಗೆ ಸಂಪುಟ ಪುನಾರಚನೆ ಸಂಬಂಧಿತ ವಿಷಯಗಳನ್ನು ಚರ್ಚಿಸಲು ಸಿಎಂ ಆಪ್ತ ಸಚಿವರ ಜೊತೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ. .
ಇದನ್ನೂ ಓದಿ- ಇದುವರೆಗೆ ಕರ್ನಾಟಕದಲ್ಲಿ 25 ಸಿಎಂಗಳು ಅಧಿಕಾರಕ್ಕೆ ಬಂದ್ರೂ... 5 ವರ್ಷ ಪೂರ್ಣಗೊಳಿಸಿದ್ದು ಈ ಮೂವರು ಮಾತ್ರ;
5. ಸಿದ್ದರಾಮಯ್ಯಗೆ ಆಪ್ತರ ಬೆಂಬಲ:
ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಗೆ ಸಚಿವರ ಮತ್ತು ಶಾಸಕರ ಅಭಿಪ್ರಾಯ ಸಂಗ್ರಹಿಸುವ ತಯಾರಿ ನಡೆಸಲಾಗಿದೆ.
6. ವಿಧಾನ ಪರಿಷತ್ ಸದಸ್ಯರ ನೇಮಕ:
ಇನ್ನು ನಾಲ್ಕು ಪರಿಷತ್ ಸ್ಥಾನಕ್ಕೆ ಸದಸ್ಯರ ನೇಮಕದ ಬಗ್ಗೆ ಕೂಡ ದಿನ್ನರ್ ಪಾರ್ಟಿಯಲ್ಲಿ ಮಹತ್ವದ ಸಮಾಲೋಚನೆ ನಡೆಸಲಾಗಿದೆ.
ಒಟ್ಟಾರೆ ಮುಂಬರುವ ರಾಜಕೀಯ ಆಟಕ್ಕೆ ಈ ಡಿನ್ನರ್ ಪಾರ್ಟಿ ಮುನ್ನುಡಿ ಆಗಲಿದ್ಯಾ? ಕಾದುನೋಡಬೇಕಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.