CM Siddaramaiah: ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಕೆರೆಹಾಡಿ ಬುಡಕಟ್ಟು ಪ್ರದೇಶಕ್ಕೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಕೆರೆಹಾಡಿ ಬುಡಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ರಾಜ್ಯದ ಮೊದಲ ಮುಖ್ಯಮಂತ್ರಿ ಎಂಬ ಹೆಚ್ಚುಗಾರಿಕೆಗೂ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಈಗ ಉಳಿದಿರುವ ಪ್ರಶ್ನೆ ಏನೆಂದರೆ ಈ ಬುಡಕಟ್ಟು ಜನ ಬಹಳ ವರ್ಷಗಳಿಂದ ಅನುಭವಿಸುತ್ತಿರುವ ಬವಣೆಗಳಿಗೆ ಮುಕ್ತಿ ಸಿಗುತ್ತವೆಯೇ ಎಂದು. 


COMMERCIAL BREAK
SCROLL TO CONTINUE READING

ರಾಜಕಾರಣಿಗಳು ಗ್ರಾಮ ವಾಸ್ತವ್ಯ ಮಾಡುವುದು, ದಲಿತರು, ಆದಿವಾಸಿಗಳ ಮನೆಗಳಿಗೆ ಭೇಟಿ ನೀಡುವುದು, ಅಲ್ಲೇ ಉಣ್ಣುವುದು, ತಂಗುವುದು, ಅಥಾವ ಬಡವರ ಬಳಿ ಹೋಗಿ ಬಣ್ಣ ಬಣ್ಣದ ಮಾತನಾಡುವುದೆಲ್ಲಾ ಈಗ ಕುತೂಹಲ ಕಳೆದುಕೊಂಡಿರುವ ಸಂಗತಿಗಳು. ಅಲ್ಲಿಗೆ ಹೋದಾಗ ಅಲ್ಲಿನ ಜನರ ನೋವಿಗೆ ದಣಿಯಾಗುತ್ತಾರಾ? ಅವರ ಕಷ್ಟಗಳನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದಷ್ಟೇ ಮುಖ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲೂ ಅವರು ಕೆರೆಹಾಡಿ ಬುಡಕಟ್ಟುಪ್ರದೇಶಕ್ಕೆ ಭೇಟಿ ನೀಡಿದ್ದ ಬಗ್ಗೆ ಇಂಥಹುದೇ ನಿರೀಕ್ಷೆ ಹುಟ್ಟಿಕೊಂಡಿವೆ. 


ಮುಖ್ಯಮಂತ್ರಿ ಸಿದ್ದರಾಮಯ್ಯ ಕೆರೆಹಾಡಿ ಬುಡಕಟ್ಟು ಪ್ರದೇಶಕ್ಕೆ ಹೋಗಿದ್ದು ನಿಜಕ್ಕೂ ಸ್ವಾಗತಾರ್ಹ ನಡೆ. ಅದರಲ್ಲೂ ಬಡವರ ಬಗ್ಗೆ ಅಪಾರವಾದ ಕಾಳಜಿಯುಳ್ಳ, ತಮ್ಮ ಭಾಷಣ ಮತ್ತು ಬಜೆಟ್ ಗಳಲ್ಲಿ ಬಡವರ ಬಗ್ಗೆ ಕಾಳಜಿ ತೋರಿರುವ ಸಿದ್ದರಾಮಯ್ಯ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡಿರುವುದು ತುಂಬಾನೇ ವಿಶೇಷ. ಅದರಲ್ಲೂ ಅವರು ಕೆರೆಹಾಡಿ ಗ್ರಾಮದಲ್ಲಿ ಎರಡು ಗಂಟೆ ಇದ್ದು ಬುಡಕಟ್ಟು ಸಮುದಾಯದ ಬದುಕು-ಬವಣೆಗಳ ಬಗ್ಗೆ ಸಮಾಲೋಚನೆ ನಡೆಸಿರುವುದಂತೂ ಇನ್ನೂ ಮಹತ್ವದ ವಿಷಯ.


ಇದನ್ನೂ ಓದಿ- ಕೋವಿಡ್ ಪಿಪಿಇ ಕಿಟ್ ಅಕ್ರಮ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಎಫ್‌ಐಆರ್


ತಮ್ಮ ಭೇಟಿ ವೇಳೆ ಬುಡಕಟ್ಟು ಜನರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗಾಗಿ ಆದಿವಾಸಿ/ಅರಣ್ಯವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಬುಡಕಟ್ಟು ಸಮುದಾಯಗಳು ದೀರ್ಘ ಕಾಲದಿಂದ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬುದಾಗಿಯೂ ತಿಳಿಸಿದ್ದಾರೆ. 


ನೀರು-ನೆರಳೇ ಇಲ್ಲ… 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ ಬುಡಕಟ್ಟು ಸಮುದಾಯದ ಮುಖಂಡರಾದ ಗಣೇಶ್ ಮತ್ತು ರಮೇಶ್ ಎಂಬುವವರು ‘ನಮಗೆ ನೀರು-ನೆರಳೇ ಇಲ್ಲ…’ ಎಂದು ಅಲವತ್ತುಕೊಂಡರು. ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರೆ ಬಹಳ ಉಪಯೋಗ ಆಗುತ್ತದೆ ಎಂಬ ಸಂಗತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿದ್ದರಾಮಯ್ಯ ಅವರು ‘ಕೂಡಲೇ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ‘ಒಂದು ತಿಂಗಳೊಳಗೆ ಕೆರೆಹಾಡಿ ಮತ್ತು ಇತರೆ ಎಂಟು ಬುಡಕಟ್ಟು ಗ್ರಾಮಗಳಿಗೆ ಕುಡಿಯುವ ನೀರು ಮತ್ತು ವಿದ್ಯುತ್ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.


ಬುಡಕಟ್ಟು ಜನರ ಭೂ ಸಮಸ್ಯೆ… 
ಭೂಮಿಯೇ ದೇವರು ಎಂದುಕೊಂಡು ಬದುಕುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಭೂಮಿಯೇ ಸಮಸ್ಯೆ ಎಂಬ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟ ಆದಿವಾಸಿ ಜನಗಳು, ‘ನಾವು ನಮ್ಮ ತಾತನ ಕಾಲದಿಂದಲೂ ಸಾಗುವಳಿ ಮಾಡುತ್ತಾ ಕೃಷಿ ಭೂಮಿಗೆ ಕಾನೂನುಬದ್ಧ ಹಕ್ಕುಗಳನ್ನು ಹೊಂದಿದ್ದರೂ ಅರಣ್ಯ ಇಲಾಖೆ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲ್ಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಕೃಷಿ ಭೂಮಿಗಳು ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ನಾವು ಟ್ರ್ಯಾಕ್ಟರ್-ಟಿಲ್ಲರ್ ಬಳಸಿ ಬೇಸಾಯ ಮಾಡುವುದಕ್ಕೆ ಅಡ್ಡಿಪಡಿಸುತ್ತಾರೆ’ ಎಂದು ಅಲವತ್ತುಕೊಂಡರು. 


ಇದನ್ನೂ ಓದಿ- KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್…!


ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ಅವರು, ‘ಆದಿವಾಸಿಗಳು ಕಾಡಿನ ಭಾಗ, ಅವರಿಗೆ ಅನಗತ್ಯ ಕಿರುಕುಳ ನೀಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಸ್ವತಃ ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಗಳು ಮುಂದಿನ ಮಂಡಳಿ ಸಭೆಯಲ್ಲಿ ಈ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗುವುದು. ಬುಡಕಟ್ಟು ಹಕ್ಕುಗಳು ಮತ್ತು ಅರಣ್ಯ ಸಂರಕ್ಷಣೆ ನಡುವೆ ಸಮತೋಲಿತ ವಿಧಾನ ಸಾಧಿಸುವ ಬಗ್ಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಾಲಾಗುವುದು, ಪರಿಸರಕ್ಕೆ ಧಕ್ಕೆಯಾಗದಂತೆ ಬುಡಕಟ್ಟು ಜನರ ಅಭಿವೃದ್ಧಿಗೆ ಬೇಕಾದ ನೀತಿಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು. 


ಪ್ರತ್ಯೇಕ ಆದಿವಾಸಿ ಅಭಿವೃದ್ಧಿ ನಿಗಮಕ್ಕೆ ಬೇಡಿಕೆ : 
ಸದ್ಯ ಆದಿವಾಸಿಗಳು ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಗೆ ಬರುತ್ತಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂಡ ಬುಡಕಟ್ಟು ಜನರು, ‘ನಾವು ಕಾಡಿನಲ್ಲಿ ಒಂದೇ ಕಡೆ ವಾಸ ಮಾಡುವ ಜನ. ಆದುದರಿಂದ ನಮ್ಮನ್ನು ಅಲೆಮಾರಿ ಅಭಿವೃದ್ಧಿ ನಿಗಮದ ವ್ಯಾಪ್ತಿಯಿಂದ ಹೊರತೆಗೆದು ನಮಗಾಗಿ ಪ್ರತ್ಯೇಕವಾದ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ’ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ನಿಮಗಾಗಿ ಸ್ವತಂತ್ರ ನಿಗಮ ಸ್ಥಾಪಿಸಲಾಗುವುದು’ ಎಂದು ಭರವಸೆ ನೀಡಿದರು.


ಶಿಕ್ಷಣಕ್ಕೆ ಉತ್ತೇಜನ ನೀಡುವಂತೆ ಸಿಎಂ ಸಲಹೆ: 
ಬುಡಕಟ್ಟು ಸಮುದಾಯದ ಮಕ್ಕಳೊಂದಿಗೆ ಸಂವಾದ ನಡೆಸಿದ ಸಿದ್ದರಾಮಯ್ಯ ಅವರು, ಅಲ್ಲಿನ ಮಕ್ಕಳು ಹೇಗೆ ಶಾಲೆಗೆ ಹೋಗುತ್ತಾರೆ? ಅದಕ್ಕಿರುವ ಅಡ್ಡಿ-ಆತಂಕಗಳೇನು ಎಂಬ ಬಗ್ಗೆ ಚರ್ಚಿಸಿದರು. ಮಕ್ಕಳನ್ನು ಕುರಿತು ಮಾತನಾಡಿದ ಅವರು, ತಮ್ಮ ವೈಯಕ್ತಿಕ ಅನುಭವವನ್ನು ಎಲ್ಲರೂ ಶಿಕ್ಷಣ ಪಡೆಯಬೇಕು. ಅದಕ್ಕಾಗಿ ಏನು ಬೇಕೋ ಆ ಎಲ್ಲಾ ಕ್ರಮವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು. ಆದಿವಾಸಿಗಳು ಹೆಚ್ಚು ಸುಶಿಕ್ಷಿತರಾಗಬೇಕು ಎನ್ನುವ ಕಾರಣಕ್ಕೆ ಆದಿವಾಸಿಗಳ ಆಶ್ರಮ ಶಿಕ್ಷಣವನ್ನು ಪ್ರಿ-ಯುನಿವರ್ಸಿಟಿ ಕಾಲೇಜು (PUC) ಹಂತಕ್ಕೆ ವಿಸ್ತರಿಸಬೇಕು ಎಂಬ ಮನವಿಗೂ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಮುಖ್ಯಮಂತ್ರಿ ತಮ್ಮ ಊರಿಗೆ ಬಂದಿದ್ದರಿಂದ ಥ್ರಿಲ್ ಆದ ಆದಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಈ ಐತಿಹಾಸಿಕ ಭೇಟಿಯ ಗೌರವಾರ್ಥ ಕೆರೆಹಾಡಿ ಆದಿವಾಸಿಗಳು ಹಾಡಿ-ಕುಣಿದು ಸಂಭ್ರಮಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.