KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್…!

Digital Payment: ಒಂದೆಡೆ ಶಕ್ತಿ ಯೋಜನೆ ಜಂಜಾಟ, ಇನ್ನೊಂದೆಡೆ ಬಸ್ ಟಿಕೆಟ್  ಚಿಲ್ಲರೆಗಾಗಿ ಪ್ರಯಾಣಿಕರ ಪರದಾಟ... ಇನ್ಮುಂದೆ ಇದ್ಯಾವ ಟೆನ್ಷನ್ ಇಲ್ಲದೆಯೇ ಕೆ‌ಎಸ್‌ಆರ್‌ಟಿ‌ಸಿಯಲ್ಲಿ ಸುಲಭವಾಗಿ ಪ್ರಯಾಣಿಸಬಹುದು. 

Written by - Yashaswini V | Last Updated : Nov 12, 2024, 01:25 PM IST
  • ಪ್ರಯಾಣಿಕರ ಟೆನ್ಷನ್ ಫ್ರೀ ಪೇಮೆಂಟ್ ಗೆ ರೆಡಿ..
  • ಕೆ‌ಎಸ್‌ಆರ್‌ಟಿ‌ಸಿ ಬಸ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಗೆ ಅವಕಾಶ
  • ಕಂಡಕ್ಟರ್ ಮತ್ತು ಪ್ರಯಾಣಿಕರ ಮಧ್ಯೆ ಇನ್ನು ಮುಂದೆ ಚಿಲ್ಲರೆಗಾಗಿ ನೋ ಜಗಳ…!
KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್…!

KSRTC: ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಮಹಿಳೆಯರಿಗಾಗಿ ಶಕ್ತಿ ಯೋಜನೆ ಪರಿಚಯಿಸಿರುವುದು ಇತಿಹಾಸ. ಇದೀಗ, ಎಲ್ಲಾ ಪ್ರಯಾಣಿಕರಿಗೂ ಅನುಕೂಲವಾಗುವಂತೆ ಹೊಸ ಪ್ರಯೋಗಕ್ಕೆ ಕೆ‌ಎಸ್‌ಆರ್‌ಟಿ‌ಸಿ ಮುಂದಾಗಿದ್ದು, ಎಲ್ಲಾ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. 

Add Zee News as a Preferred Source

ಹೌದು, ಒಂದೆಡೆ ಶಕ್ತಿ ಯೋಜನೆ ಜಂಜಾಟ, ಇನ್ನೊಂದೆಡೆ ಬಸ್ ಟಿಕೆಟ್  ಚಿಲ್ಲರೆಗಾಗಿ ಪ್ರಯಾಣಿಕರ ಪರದಾಟ... ಇನ್ಮುಂದೆ ಇದ್ಯಾವ ಟೆನ್ಷನ್ ಇಲ್ಲದೆಯೇ ಕೆ‌ಎಸ್‌ಆರ್‌ಟಿ‌ಸಿಯಲ್ಲಿ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿರುವ ಸರ್ಕಾರ ಡಿಜಿಟಲ್ ಪೇಯ್ಮೆಂಟ್ ಗೆ ಅನುಮತಿ ನೀಡಿದೆ. 

ಇದನ್ನೂ ಓದಿ- ಫುಡ್ ಡಿಲೆವರಿ ಮಾತ್ರವಲ್ಲ ಮುಂದೆ ಇನ್ನೂ ವೆರೈಟಿ ಸೇವೆ ನೀಡಲು ಸಿದ್ಧವಾಗುತ್ತಿವೆ Swiggy, Zomato

ಕೆ‌ಎಸ್‌ಆರ್‌ಟಿ‌ಸಿಯಲ್ಲಿ ಡಿಜಿಟಲ್ ಪೇಮೆಂಟ್ ಗೆ ಅನುಮತಿ  ನೀಡಿರುವ ಸರ್ಕಾರ, ಇದಕ್ಕಾಗಿ ಸುಮಾರು 10,000 ಯುಪಿಐ ಮಷೀನ್ ಗಳನ್ನು ಅಳವಡಿಕೆಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಡಿಜಿಟಲ್ ಮಷೀನ್ ನಲ್ಲಿ ಯುಪಿಐ ಪೇಮೆಂಟ್ ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಮುಲಕ ಪೇಮೆಂಟ್ ಮಾಡಬಹುದು. 

8,800 ಕೆ‌ಎಸ್‌ಆರ್‌ಟಿ‌ಸಿ ಬಸ್ ಗಳಲ್ಲಿ ಯುಪಿಐ ಮಷೀನ್ ಗಳ ಅಳವಡಿಕೆಗಾಗಿ ತಯಾರಿ ಭರ್ಜರಿಯಿಂದ ಸಾಗಿದ್ದು,  ಮುಂದಿನ ದಿನಗಳಲ್ಲಿ ಕಂಡಕ್ಟರ್ ಟ್ರೈನಿಂಗ್ ನಂತರ ಇನ್ನು 10,000 ಹೆಚ್ಚು ಮಷೀನ್ ಗಳನ್ನು ಅಳವಿಡಿಕೆಗೆ ತರಲು ಪ್ಲಾನ್ ಸಿದ್ದಪಡಿಸಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ನಯಾ ಪೈಸೆ ಕಟ್ಟುವ ಹಾಗಿಲ್ಲ! ಎಸ್‌ಬಿ‌ಐ ಎಟಿಎಂ ಇದ್ರೆ ಸಾಕು, ಸಿಗುತ್ತೆ ಬರೋಬ್ಬರಿ 20 ಲಕ್ಷವರೆಗಿನ ಫ್ರೀ ಪಾಲಿಸಿ!

ಸರ್ಕಾರದ ಈ ಕ್ರಮದಿಂದ ಪ್ರಯಾಣಿಕರು ಸರ್ಕಾರಿ ಬಸ್ ಗಳಲ್ಲಿ ಇನ್ಮುಂದೆ ಯಾವುದೇ ಚಿಲ್ಲರೆ ಸಮಸ್ಯೆ ಇಲ್ಲದೆಯೇ ಟೆನ್ಷನ್ ಫ್ರೀ ಆಗಿ ಡಿಜಿಟಲ್ ಪೇಮೆಂಟ್ ಮಾಡಿ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News