ಮೈಸೂರು : ಕರ್ನಾಟಕದಲ್ಲಿ ಭಯದಿಂದ ಬಿಜೆಪಿ-ಜೆಡಿಎಸ್ ಒಂದಾಗಿದೆ. ಇವರನ್ನು ಜನತೆ ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.


COMMERCIAL BREAK
SCROLL TO CONTINUE READING

ಅನ್ಯ ಪಕ್ಷಗಳ ವಿವಿಧ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಸಿದ್ದಾಂತವನ್ನು ಒಪ್ಪಿ ಯಾವುದೇ ಷರತ್ತು ವಿಧಿಸದೇ ಸೇರಿದವರನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಸ್ಥಾನಮಾನಕ್ಕಾಗಿ ಅಲ್ಲ, ಬಿಜೆಪಿ ಬಿಡಲು ಅಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ ಹಾಗೂ ಪಕ್ಷ ಬಡವರ ಪರವಾಗಿದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ.


ಇದನ್ನೂ ಓದಿ:ಕ್ಷೇತ್ರದ ಜನರಿಂದ ಉತ್ತಮ ಸ್ಪಂದನೆ, ನಾಳೆ ನಾಮಪತ್ರ ಸಲ್ಲಿಕೆ : ಡಿ.ಕೆ. ಸುರೇಶ್


ರಾಜಕೀಯ, ಸಾಮಾಜಿಕ ಕೇತ್ರದಲ್ಲಿ ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ರಾಜೀವ್ ಅವರು ಕಾಂಗ್ರೆಸ್ಸಿನ ಕಾರ್ಯಕ್ರಮಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಪಕ್ಷದ ಸಿದ್ಧಾಂತ ಒಪ್ಪಿ ಬರುವುದನ್ನು ಸೇರ್ಪಡೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಎಂದರು.  


ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಬೇಕು : ಕಾಂಗ್ರೆಸ್ ಪಕ್ಷಕ್ಕೆ ರಾಜೀವ್ ಮತ್ತು ಸೇರ್ಪಡೆಯಿಂದಾಗಿ ಶಕ್ತಿ ಬಂದಂತಾಗಿದೆ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಅವರು ಸೇರಿರುವುದರಿಂದ ಕೃಷ್ಣರಾಜ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಲಕ್ಷ್ಮಣ್ ಗೆಲ್ಲುವ ವಿಶ್ವಾಸವಿದೆ ಎಂದರು. 


ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಬೇಕು. ಈ ಕ್ಷೇತ್ರದಲ್ಲಿ ಬಡವರಿದ್ದಾರೆ. ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ  ಆಧಾರದ ಮೇಲೆ ಕಾಂಗ್ರೆಸ್ ಬಡವರನ್ನು ಕಡೆಗಣಿಸಿಲ್ಲ ಎಂದರು.


ಇದನ್ನೂ ಓದಿ:ಸೋನಿಯಾ, ರಾಹುಲ್ ಬೇಲ್ ಮೇಲೆ ಹೊರಗಿದ್ದಾರೆ ನೆನಪಿಡಿ: ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ


ಬಾಯಿಯಲ್ಲಿ ಮಾತ್ರ ಸಬ್ ಕಾ ಸಾಥ್ : ಬಿಜೆಪಿಯವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಬುರ್ಖಾ, ಗಡ್ಡ, ಶಿಲುಬೆ ಹಾಕಿದವರು ಬರಬಾರದು ಎನ್ನುತ್ತಾರೆ. ಇದು ಯಾವ ಸಬ್ ಕಾ ಸಾಥ್ ಎಂದು ಪ್ರಶ್ನಿಸಿದರು. ಈ ದೇಶದಲ್ಲಿ ಹೆಚ್ಚು ಸುಳ್ಳು ಹೆಳುವ ಪ್ರಧಾನಿ ನರೇಂದ್ರ ಮೋದಿ ಎಂದರು. 


ಸುಳ್ಳು ಬಿಜೆಪಿಯ ಮನೆದೇವರು. 15 ಲಕ್ಷ ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದಿದ್ದರು. ಅಚ್ಚೇ ದಿನ್ ಬರುತ್ತದೆ ಎಂದರು- ಬಂತೇ ಎಂದು ಪ್ರಶ್ನಿಸಿದರು. ಗ್ಯಾಸ್, ಗೊಬ್ಬರ, ಬೆಲೆ ಏರಿದರು, ರೂಪಾಯಿ ಬೆಲೆ ಕುಸಿಯಿತು. ಇಂದಿನವರೆಗೆ ಏನೂ ಮಾಡಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ, ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗೆ ಕೊಂಡೊಯ್ಯುತ್ತೇನೆ ಎಂದರು. ಆಗಿದೆಯೇ ? ಯುವಕರಿಗೆ ಪ್ರತಿ ವರ್ಷ 20 ಕೋಟಿ  ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರಿಗೆ ಇಂದಿನವರೆಗೆ ಮಾಡಲಾಗಿಲ್ಲ. ನರೇಂದ್ರ ಮೋದಿಯವರು ನುಡಿದಂತೆ ನಡೆದಿಲ್ಲ. ಬಿಜೆಪಿಗೆ ಮತ ಹಾಕಬೇಕೆ ಎಂದು ಜನರನ್ನು ಪ್ರಶ್ನಿಸಿದಾಗ ಅವರು ಇಲ್ಲ ಎಂದು  ಕೂಗಿದರು.


ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಿ : ನಮ್ಮ ಕಾರ್ಯಕರ್ತರು ನಾವು ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದೇನೆ. ಸುಳ್ಳು ಹೇಳಬೇಡಿ ಎಂದು ಹೇಳಿದ್ದೇನೆ ಎಂದರು. ಹಿಂದಿನ ಬಾರಿ ನಮ್ಮ ಸರ್ಕಾರ 168 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು. ನಾವು ಹಣ ಕೇಳುತ್ತಿರುವುದು ಗ್ಯಾರಂಟಿಗಳಿಗೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೆ ನಾವು ಆಹ್ವಾನ ನೀಡಿದ್ದೇವೆ ಎಂದರು. ಗ್ಯಾರಂಟಿಗಳಿಗೆ ಒಂದು ಪೈಸೆಯನ್ನೂ ಕೊಡಬೇಡಿ. ಮುಂದಿನ ವರ್ಷದಲ್ಲಿ  ಗ್ಯಾರಂಟಿ ಯೋಜನೆಗಳಿಗೆ 52009 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ ಎಂದರು.


ಇದನ್ನೂ ಓದಿ: ಮಂಡ್ಯ ಪ್ರವಾಸ ಬಳಿಕ ಸುಮಲತಾ ಭೇಟಿ ಮಾಡ್ತೇನೆ: ಬಿ‌ವೈ ವಿಜಯೇಂದ್ರ


ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದಾರೆ : 2023-24 ರ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆÉ ಯೋಜನೆಗೆ 5300 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದಿದ್ದರು. ಈ ವರ್ಷ ಒಂದೇ ಒಂದು ಪೈಸೆ ಬಂದಿಲ್ಲ ಎಂದರು. ಈ ಬಗ್ಗೆ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಸತ್ಯ ಅಲ್ಲ ಎಂದು  ನೋಡೋಣ ಎಂದರು. 18171 ಕೋಟಿ ರೂ.ಗಳ ಪರಿಹಾರವನ್ನು ಕೊಡಲು ಮನವಿ ಮಾಡಿ 5 ತಿಂಗಳಾಗಿದ್ದರೂ ಒಂದು ರೂಪಾಯಿ ನೀಡಿಲ್ಲ. ರೈತರು ಕಷ್ಟದಲ್ಲಿದ್ದರೂ ಈವರೆಗೆ ಒಮದು ರೂಪಾಯಿ ಬಿಡಿಗಡೆ ಮಾಡಿಲ್ಲ. ಇದು ಸತ್ಯ ಎಂದರು.  ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದು, ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದರು.


ನ್ಯಾಯಕ್ಕಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ : 15 ನೇ ಹಣಕಾಸಿನ ಆಯೋಗದಲ್ಲಿ ನಮಗೆ 5495 ಕೋಟಿ ನೀಡಿದ್ದರೂ, ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೆ ಬಿಡುಗಡೆಯಾದ ಮೊತ್ತ ಸೇರಿ ಒಟ್ಟು 11495 ಕೋಟಿ ರೂ.ಗಳ ಪೈಕಿ ಒಂದು ರೂ ನೀಡದೆ ಸುಳ್ಳು ಹೇಳುತ್ತಿದ್ದಾರೆ. ಅವರ ತಾಳಕ್ಕೆ ಕುಣಿಯುವ ಬಿಜೆಪಿ ಅವರು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದರು. ಅದಕ್ಕಾಗಿಯೇ ನಾವು ಸರ್ವೊಚ್ಛ ನ್ಯಾಯಾಲಯಕ್ಕೆ ಹೋಗಿದ್ದೇವೆ.  ಕಾನೂನಿನಲ್ಲಿ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕೆಂದಿದ್ದರೂ ನಮಗೆ ಪರಿಹಾರ ನೀಡಿಲ್ಲ ಎಂದರು.


ಇದನ್ನೂ ಓದಿ:ಟಿಕೆಟ್ ಘೋಷಣೆಗೂ ಮುನ್ನ ಸುನೀಲ್ ಬೋಸ್ ನಾಮಿನೇಷನ್ ಡೇಟ್ ಪ್ರಕಟ


ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಬಿಜೆಪಿಗೆ ಮತ ಹಾಕಬೇಕೆ : ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಬಿಜೆಪಿಗೆ ಮತ ಹಾಕಬೇಕೆ ಎಂದು ಕೇಳಿದರು. ಬಿಜೆಪಿ ತುಟಿ ಬಿಚ್ಚದ ಸಂಸದರದ್ದು ಬರೀ ಪ್ರಲಾಪ. ಮಕ್ಕಳ ಆಸ್ಪತ್ರೆ, ಮೈಸೂರು ಜಿಲ್ಲಾ ಆಸ್ಪತ್ರೆ, ಮೈಸೂರು- ಬೆಂಗಳೂರು ಕಾರಿಡಾರ್, ಕಾಲೇಜು, ಹಾಸ್ಟೆಲ್‍ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಿಸಿದ್ದು ನಾವು. ಬಿಜೆಪಿಯವರು ಏನೂ ಮಾಡಿಲ್ಲ ಎಂದರು.


ದೇವೇಗೌಡರ ಅನುಕೂಲಸಿಂಧು ರಾಜಕಾರಣ : ಜಿಡಿಎಸ್ ಅಂದರೆ ಜಾತ್ಯಾತೀತ ಜನತಾದಳ ಇಂದು ಜಾತ್ಯಾತೀತವಾಗಿ ಉಳಿದಿದೆಯೇ?  ನರೇಂದ್ರ ಮೋದಿ ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ,  ನಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರ ಅನುಕೂಲಸಿಂಧು ರಾಜಕಾರಣ ಎಲ್ಲಿಯವರೆಗೆ ನಡೆಯುತ್ತದೆ ಎಂದರು. ಮೇಕೆದಾಟು ಯೋಜನೆಯನ್ನು  ಎನ್‍ಡಿಎ ಮೂಲಕ ಮಾಡಿಸುವುದಾಗಿ ಹೇಳುತ್ತಾರೆ. ಬಿಜೆಪಿ ಕಡೆಯಿಂದ ಯಾಕೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.  


1.17 ಕೋಟಿ ಮಹಿಳೆಯರಿಗೆ ತಿಂಗಳಿಗೆ 2000 ರೂ.ಗಳನ್ನು ಒದಗಿಸಲಾಗುತ್ತಿದೆ. 1.20 ಲಕ್ಷ ಕುಟುಂಬಗಳಿಗೆ ಎಲ್ಲಾ ಗ್ಯಾರಂಟಿ ಗಳು ತಲುಪುತ್ತಿದೆ. ಮೈಸೂರಿನ ಕಾಮರ್ಸ್ ಮತ್ತು ಕಲಾ ಕಾಜೇಜು ದುರಸ್ತಿ ಮಾಡಲು ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.