ಕರ್ನಾಟಕದ 40% ನಲ್ಲಿ ಪ್ರಧಾನಿ ಮೋದಿಯವರೂ ಪಾಲು ಪಡೆಯುತ್ತಿದ್ದಾರಾ?: ಕಾಂಗ್ರೆಸ್
ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರ ಬರೆದಾಗ ಪ್ರಧಾನಿ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ತೋರಿಸದಿದ್ದಿದ್ದು ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗಳೂರು: ಕರ್ನಾಟಕದ 40% ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲು ಪಡೆಯುತ್ತಿದ್ದಾರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ಬುಧವಾರ ಸರಣಿ ಟ್ವೀಟ್ ಮಾಡಿದ್ದು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘ಕ್ರಿಕೆಟಿಗರ ಕೈಬೆರಳಿಗೆ ಗಾಯವಾದ ಬಗ್ಗೆ, ನಟಿಯರ ಕಿಚನ್ ಗಾರ್ಡನ್ ಬಗ್ಗೆ ವಿಚಾರಿಸಿ ಕಾಳಜಿ ತೋರುವ ಪ್ರಧಾನಿ ಮೋದಿಯವರಿಗೆ ಗುತ್ತಿಗೆದಾರರ ಪತ್ರ, ಸಂತೋಷ್ ಪಾಟೀಲರ ಪತ್ರವನ್ನು ನೋಡುವಷ್ಟು ಸಮಯವಿರಲಿಲ್ಲವೇ? ಪತ್ರ ಬರೆದಾಗ ಪ್ರಧಾನಿ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ತೋರಿಸದಿದ್ದಿದ್ದು ಏಕೆ? ಕರ್ನಾಟಕದ 40% ನಲ್ಲಿ ಪಾಲು ಪಡೆಯುತ್ತಿದ್ದಾರಾ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
40% ಕಮಿಷನ್ ನಲ್ಲಿ ಸಿಎಂ ಬೊಮ್ಮಾಯಿ ಪಾಲುದಾರರಾ?- ಬಿ ಕೆ ಹರಿಪ್ರಸಾದ್ ವಾಗ್ದಾಳಿ
‘ಬಿಜೆಪಿಯವರ 40% ಕಮಿಷನ್ ಭ್ರಷ್ಟಾಚಾರದ ದಾಹ ಎಷ್ಟಿದೆ ಎಂದರೆ ಹಿಂದುವಾದರೂ ಬಿಡುವುದಿಲ್ಲ, ತಮ್ಮದೇ ಪಕ್ಷದ ಕಾರ್ಯಕರ್ತನದರೂ ಬಿಡುವುದಿಲ್ಲ, ತಮ್ಮದೇ ಆಪ್ತ ವಲಯದವರಾಗಿದ್ದರೂ ಬಿಡುವುದಿಲ್ಲ. ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರನ್ನೇ ಕಿತ್ತು ತಿಂದು ಜೀವ ತೆಗೆಯುವ ಬಿಜೆಪಿಯವರು ರಾಜ್ಯವನ್ನು ಉಳಿಸುವರೇ? ಜನ ಸಾಮಾನ್ಯರನ್ನು ಬಿಡುವರೇ?’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಸಚಿವ ಈಶ್ವರಪ್ಪನವರು ಕೀಳು ಅಭಿರುಚಿಯ ಮಾತುಗಳಿಗೆ ಹೆಸರುವಾಸಿಯಾದವರು, ಆ ಕೊಳಕು ಸಂಸ್ಕೃತಿಯನ್ನು RSS ಶಾಖೆಯಲ್ಲಿ ಕಲಿತು ಬಂದಿದ್ದನ್ನು ತಮ್ಮ ಎಲುಬಿಲ್ಲದ ನಾಲಿಗೆಯಲ್ಲಿ ತೋರ್ಪಡಿಸುತ್ತಿದ್ದರು. ರಾಷ್ಟ್ರಧ್ವಜಕ್ಕೆ ಅವಮಾನಿಸಿದ್ದ, ರಾಜ್ಯಕ್ಕೆ ಕಳಂಕದಂತಹ ರಾಜಕಾರಿಣಿ ಒಂದು ಕ್ಷಣವೂ ಅಧಿಕಾರದಲ್ಲಿರಲು ಯೋಗ್ಯತೆ ಇಲ್ಲ. ಅರ್ಹತೆಯೂ ಇಲ್ಲ’ವೆಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
KS Eshwarappa: ಸಚಿವ ಈಶ್ವರಪ್ಪರನ್ನು ವಜಾಗೊಳಿಸಿ, ಬಂಧಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.