Santosh Patil Death : 'ಅಧಿವೇಶನದಲ್ಲಿ ಚರ್ಚೆ ಆಗಿದಿದ್ರೆ ಈ ಘಟನೆ ನಡಿಯುತ್ತಿರಲಿಲ್ಲ'

ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ 40% ಭ್ರಷ್ಟಾಚಾರ ಆರೋಪದ ಬಗ್ಗೆ ನಿಲುವಳಿ ಸೂಚನೆ ಕೊಟ್ಟರೆ ಸ್ಪೀಕರ್ ಅದನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಚರ್ಚೆ ಇಲ್ಲದೆ ತಿರಸ್ಕಾರ ಮಾಡಿದ್ದರು. ಬಹುಷಃ ಅಂದು ಚರ್ಚೆಗೆ ಅವಕಾಶ ಕೊಟ್ಟರೆ ಇಂತಹ ಘಟನೆ ಆಗಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

Written by - Prashobh Devanahalli | Last Updated : Apr 13, 2022, 01:11 PM IST
  • ಬಹುಷಃ ಅಂದು ಚರ್ಚೆಗೆ ಅವಕಾಶ ಕೊಟ್ಟರೆ ಇಂತಹ ಘಟನೆ ಆಗಿರಲಿ
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
  • ನಮಗಾದ ಅನ್ಯಾಯದ ಬಗ್ಗೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ್
Santosh Patil Death : 'ಅಧಿವೇಶನದಲ್ಲಿ ಚರ್ಚೆ ಆಗಿದಿದ್ರೆ ಈ ಘಟನೆ ನಡಿಯುತ್ತಿರಲಿಲ್ಲ' title=

ಬೆಂಗಳೂರು : ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ 40% ಭ್ರಷ್ಟಾಚಾರ ಆರೋಪದ ಬಗ್ಗೆ ನಿಲುವಳಿ ಸೂಚನೆ ಕೊಟ್ಟರೆ ಸ್ಪೀಕರ್ ಅದನ್ನು ಸ್ವಯಂ ಪ್ರೇರಿತವಾಗಿ ಯಾವುದೇ ಚರ್ಚೆ ಇಲ್ಲದೆ ತಿರಸ್ಕಾರ ಮಾಡಿದ್ದರು. ಬಹುಷಃ ಅಂದು ಚರ್ಚೆಗೆ ಅವಕಾಶ ಕೊಟ್ಟರೆ ಇಂತಹ ಘಟನೆ ಆಗಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.

ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಇವರು, ಸಂತೋಷ್ ಆತ್ಮಹತ್ಯೆ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಕಪ್ಪುಚುಕ್ಕೆ .ಕರ್ನಾಟಕದಲ್ಲಿ ಹತ್ತಾರು ವರ್ಷಗಳಿಂದ ಉತ್ತಮ ಆಡಳಿತ ನೀಡುತ್ತಾ ಬಂದಿದ್ದೆವು. ಮೊದಲಿಗೆ ಗುತ್ತಿಗೆದಾರರ ಸಂಘದವರು 40% ಕಮಿಷನ್ ಬಗ್ಗೆ ತಮ್ಮ ನೋವನ್ನು ಹೊರಹಾಕಿದ್ದರು, ಅದಕ್ಕೆ ಸಾಕ್ಷಿಯಾಗಿ ಓರ್ವ ಸಚಿವರ ಮೇಲೆ ನೇರವಾಗಿ ಹಿಂದೂ ವಾಹಿನಿ ಕಾರ್ಯಕರ್ತ ಕೇಂದ್ರ ಸಚಿವರಿಗೆ ಪತ್ರ ಬರೆದು, ಸಿಎಂಗೂ ತಿಳಿಸಿ ಕೊನೆಗೆ ಪ್ರಾಣವನ್ನು ರಾಜ್ಯದ ಭ್ರಷ್ಟಾಚಾರದ ವಿರುದ್ಧ ನೀಡಿದ್ದಾರೆ ಎಂದರು. 

ಇದನ್ನೂ ಓದಿ : ಯಾರು ಏನೇ ಮಾತಾಡಿದ್ರೂ ಸರ್ಕಾರ ಜೀವ ತೆಗೆಯುತ್ತೆ- ಗುತ್ತಿಗೆದಾರರಿಗೆ ಉಳಿವಿಲ್ಲ!

ನಮಗಾದ ಅನ್ಯಾಯದ ಬಗ್ಗೆ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡುವ ಉದ್ದೇಶದಿಂದ ಉಡುಪಿಗೆ ಹೋಗಿದ್ದರು ಎಂಬ ಸುದ್ದಿ ಇದೆ. ಆದರೆ ಭೇಟಿ ಸಾಧ್ಯವಾಗಿಲ್ಲ.ಆದರೆ ಕೊನೆಗೆ ಅವರಿಗಾದ ನಷ್ಟ

ತಡೆದುಕೊಳ್ಳಲಾಗದೆ ಸಚಿವರ ಹೆಸರು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಎಫ್ ಐ ಆರ್ ಆಗಿದೆ,ಈ ಹಿನ್ನೆಲೆಯಲ್ಲಿ ಕೂಡಲೇ ಬಂಧನ ಮಾಡಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

ಇದನ್ನೂ ಓದಿ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಸಚಿವ ಕೆ.ಎಸ್.ಈಶ್ವರಪ್ಪ ತಲೆದಂಡ ಬಹುತೇಕ ಖಚಿತ!?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News