ಹೋಳಿ ಆಡುವ ನೆಪದಲ್ಲಿ ವಸೂಲಿ ಧಂದೆ: ಹಣ ಕೊಡದಿದ್ರೆ ಹಲ್ಲೆ
ಹೋಳಿ (Holi) ಆಡುವ ನೆಪದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ (Highway) ವಾಹನ ಸವಾರರನ್ನು ತಡೆದು ಕೆಲ ಖದೀಮರು ವಸೂಲಿ ದಂಧೆಗೆ ಇಳಿದಿದ್ದಾರೆ.
ಬೆಳಗಾವಿ: ಹೋಳಿ (Holi) ಆಡುವ ನೆಪದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ (Highway) ವಾಹನ ಸವಾರರನ್ನು ತಡೆದು ಕೆಲ ಖದೀಮರು ವಸೂಲಿ ದಂಧೆಗೆ ಇಳಿದಿದ್ದಾರೆ.
ಇದನ್ನೂ ಓದಿ:‘ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕೆ ಈ ಸದಾರಮೆ ನಾಟಕವೇ?’
ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡಿದ್ದಾರೆ ಕಿಡಿಗೇಡಿಗಳು. 20ಕ್ಕೂ ಹೆಚ್ಚು ಜನರು ಸೇರಿ ಹಣ ವಸೂಲಿ ಮಾಡಿರುವ ದೃಶ್ಯವನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ (Viral Video) ಹರಿಬಿಡಲಾಗಿದೆ.
[[{"fid":"233006","view_mode":"default","fields":{"format":"default","field_file_image_alt_text[und][0][value]":"Collecting Money in the name of Holi in Belagavi ","field_file_image_title_text[und][0][value]":"ವಾಹನ ಸವಾರರನ್ನು ತಡೆದು ವಸೂಲಿ ದಂಧೆ "},"type":"media","field_deltas":{"1":{"format":"default","field_file_image_alt_text[und][0][value]":"Collecting Money in the name of Holi in Belagavi ","field_file_image_title_text[und][0][value]":"ವಾಹನ ಸವಾರರನ್ನು ತಡೆದು ವಸೂಲಿ ದಂಧೆ "}},"link_text":false,"attributes":{"alt":"Collecting Money in the name of Holi in Belagavi ","title":"ವಾಹನ ಸವಾರರನ್ನು ತಡೆದು ವಸೂಲಿ ದಂಧೆ ","class":"media-element file-default","data-delta":"1"}}]]
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ್ ರೈಲು ನಿಲ್ದಾಣದ (Railway Station) ಬಳಿ ಈ ಘಟನೆ ನಡೆದಿದೆ. ಹಣ ಕೊಟ್ಟರೆ ಮಾತ್ರ ವಾಹನ ಸವಾರರಿಗೆ ಮುಂದೆ ಸಾಗಲು ಬಿಡಲಾಗುತ್ತಿತ್ತು. ಹಣ ನೀಡದೆ ಹೋದರೆ ಸವಾರರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದರಂತೆ.
ಇನ್ನು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ: ಮೋಟಮ್ಮಗೆ ಡಿಕೆಶಿ ಅವಮಾನ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.