ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ: ಮೋಟಮ್ಮಗೆ ಡಿಕೆಶಿ ಅವಮಾನ!

ಮೂಡಿಗೆರೆಯಲ್ಲೂ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲಿಯೇ ಮೋಟಮ್ಮ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ.

Written by - Zee Kannada News Desk | Last Updated : Mar 18, 2022, 12:03 PM IST
  • ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಡಿ.ಕೆ.ಶಿವಕುಮಾರ್ ಅವಮಾನ
  • ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಭಾರೀ ಹಿನ್ನಡೆ ಡಿಕೆಶಿ ಗರಂ
  • ಚಿಕ್ಕಮಗಳೂರು ಕಾಂಗ್ರೆಸ್ ನಾಯಕರು ಮತ್ತು ಮುಖಂಡರಿಗೆ ಡಿಕೆಶಿ ತರಾಟೆ
ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ: ಮೋಟಮ್ಮಗೆ ಡಿಕೆಶಿ ಅವಮಾನ! title=
ಮೋಟಮ್ಮಗೆ ಡಿ.ಕೆ.ಶಿವಕುಮಾರ್ ಅವಮಾನ

ಚಿಕ್ಕಮಗಳೂರು: ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ(Congress Digital Membership Campaign)ದಲ್ಲಿ ಹಿನ್ನಡೆಯಾಗಿದ್ದಕ್ಕೆ ಹಿರಿಯ ನಾಯಕಿ ಮೋಟಮ್ಮರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದ ‘ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ’ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಕೆಶಿ ಗರಂ ಆಗಿದ್ದಾರೆ.

ಚಿಕ್ಕಮಗಳೂರಿನ ಕಾಂಗ್ರೆಸ್ ನಾಯಕರು ಮತ್ತು ಮುಖಂಡರಿಗೆ ಡಿಕೆಶಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಡಿಗೆರೆಯಲ್ಲೂ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲಿಯೇ ಮೋಟಮ್ಮ ವಿರುದ್ಧ ಡಿಕೆಶಿ(DK Shivakumar) ಗರಂ ಆಗಿದ್ದಾರೆ. ಮೋಟಮ್ಮ ವಿರುದ್ಧ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಕುಕ್ಕುಟೋದ್ಯಮದ ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದಾಗಿ ಹೇಳಿದ ಹೆಚ್.ಡಿ.ಕುಮಾರಸ್ವಾಮಿ

ಅಭಿಯಾನದ ಬಗ್ಗೆ ಸಮಾಜಾಯಿಷಿ ನೀಡಲು ಕಾರಿನ ಬಳಿ ಬಂದು ಕ್ಷಮೆ ಕೇಳಿದ ಮೋಟಮ್ಮ(Motamma)ರಿಗೆ ಡಿಕೆಶಿ ನೋ… ನೋ.. ಸಾರಿ… ಮಾತನಾಡಬೇಡಿ. ಮೊದಲು ಮೆಂಬರ್ ಶಿಪ್ ಅಂತಾ ಹೇಳಿ ಡಿಕೆಶೀ ಕಾರು ಹತ್ತಿ ಹೊರಟುಹೋಗಿದ್ದಾರೆ. ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿ ಮೋಟಮ್ಮಗೆ ಪ್ರತಿಕ್ರಿಯೆ ನೀಡದೆ ಡಿಕೆಶಿ ಹೊರಟು ಹೋಗಿದ್ದು ಅವಮಾನ ಮಾಡಿದಂತಾಗಿದೆ.

ಮೋಟಮ್ಮ ಪುತ್ರಿಗೆ ಡಿಕೆಶಿ ಫುಲ್ ಕ್ಲಾಸ್!

ಸಭೆ ವೇಳೆ ಮಾತನಾಡಿದ ಮೋಟಮ್ಮ ಪುತ್ರಿ ನಯನಾ ಮೋಟಮ್ಮ, ‘ನನಗೆ ಜವಾಬ್ದಾರಿ ವಹಿಸಿದ್ದರೆ ಸದಸ್ಯತ್ವ ನೋಂದಣಿ(Congress Digital Membership) ಮಾಡಿಸುತ್ತಿದ್ದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ‘ನಿಮ್ಮ ತಾಯಿಯನ್ನು ಎಂಎಲ್ ಎ ಮಾಡಿದ್ದೇವೆ, ಎಂಎಲ್ಸಿ ಮಾಡಿದ್ದೇವೆ. ಹೀಗಿದ್ರೂ ಹಂಗೂ ಇಲ್ಲ ಹಿಂಗೂ ಇಲ್ಲ ಅಂದ್ರೆ ಯಾರು ಕೇಳ್ತಾರೆ? ಎಂದು ಮೋಟಮ್ಮ ಪುತ್ರಿಗೆ ಡಿಕೆಶಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಯುವತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪ್ರಿಯಕರ

‘ನಮ್ಮ ಪಕ್ಷಕ್ಕೆ ಸದಸ್ಯತ್ವ ನೋಂದಣಿಯೇ ಆಧಾರಸ್ತಂಭ. ನಿಮ್ಮ ಕಳಪೆ ಸಾಧನೆಯಿಂದ ನನಗೆ ದುಃಖದ ಜೊತೆಗೆ ನೋವು ಆಗುತ್ತಿದೆ’ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಿಗೂ ಡಿಕೆಶಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನಿಮ್ಮ ಬಗ್ಗೆ ನನಗೆ ನಂಬಿಕೆ ಇತ್ತು, ಆದರೆ ನೀವು ನಂಬಿಕೆ ಕಳೆದುಕೊಂಡು ಬಿಟ್ರಿ. ಚಿಕ್ಕಮಗಳೂರಿನ(Chikkamagaluru District) ಜನರು ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಆದರೆ ನಿಮಗೆ ಏಕೆ ಸದಸ್ಯತ್ವ ನೋಂದಣಿ ಮಾಡಿಸೋಕೆ ಆಗುತ್ತಿಲ್ಲ’ವೆಂದು ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧವೂ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News