ಬೆಂಗಳೂರು: ಬಿಎಂಟಿಸಿಯಲ್ಲಿ ಹೇಳುವವರು ಇಲ್ಲ ಕೇಳುವವರು ಇಲ್ಲ ಸಾರಿಗೆ ಸಚಿವ ಶ್ರೀ ರಾಮುಲು ಅವರ ಮಾತನ್ನೇ ಕೇಳೋದಿಲ್ಲ ಸಚಿವರ ಮಾತಿಗೂ ಡೊಂಟ್ ಕೇರ್ ಇಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಹೇಳಿದ್ದೆ ರೂಲ್ಸ್.. ರಜೆ ಬೇಕು ಅಂದ್ರು ದುಡ್ಡು ಡ್ಯೂಟಿ ಬೇಕು ಅಂದ್ರು ದುಡ್ಡು.. ಇಲ್ಲಿ ಭ್ರಷ್ಟಾಚಾರದ ಅಡ್ಡೆಯಾಗೋಗಿದೆ ಇದರಿಂದ ನೊಂದ ಕಾರ್ಮಿಕರು ಇಲ್ಲಿ ನಮಗೆ ನ್ಯಾಯ ಸಿಗೋದಿಲ್ಲ ಎಂದು 94 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸಮಿತಿ ರಚನೆ


ಈ ಬಿಎಂಟಿಸಿ ಒಂಥರ ಭ್ರಷ್ಟರ ಸಂತೆ ಈ ಸಂಸ್ಥೆ ಆರಂಭವಾದಾಗಿನಿಂದ ಒಂದು ರುಪಾಯಿ ಕೂಡ ಲಾಭ ತೋರಿಸಿಲ್ಲ ಪ್ರತಿವರ್ಷ ಕೋಟ್ಯಾಂತರ ರುಪಾಯಿ ನಷ್ಟ ನಷ್ಟ ಆಸ್ತಿ ಅಡವಿಟ್ಟು ಸಾಲ ಮಾಡಿದಾಯ್ತು, ಸರ್ಕಾರದಿಂದ ಅನುದಾನ ಪಡೆದಿದ್ದು ಆಯ್ತು ಆದ್ರು ಪ್ರತಿ ವರ್ಷ ಸಂಸ್ಥೆ ಲಾಸ್ ಕಾರಣ ಇಲ್ಲಿರುವ ಭ್ರಷ್ಟ ಅಧಿಕಾರಿಗಳು ಇಲ್ಲಿ ಏನೇ ಮಾಡಿದ್ರು ಹೇಳೋರು ಇಲ್ಲ ಕೇಳೋರು ಇಲ್ಲ ಇಲ್ಲಿ ಅಧಿಕಾರಿಗಳು ಆಡಿದ್ದೆ ಆಟ ಹೂಡಿದ್ದೆ ಲಗ್ಗೆ..ಬಿಎಂಟಿಸಿಯಲ್ಲಿ ಸುಮಾರು 6600 ಬಸ್ಸುಗಳಿವೆ. 27000 ಸಾವಿರ ಕಂಡಕ್ಟರ್ ಡ್ರೈವರ್ ಗಳಿದ್ದಾರೆ..ಕೊರೊನಾ ಎರಡು ಅಲೆಗಳ ನಂತರ ಪೂರ್ಣ ಪ್ರಮಾಣದಲ್ಲಿ ಬಸ್ಸುಗಳು ಕಾರ್ಯಾಚರಣೆ ಆಗ್ತಿಲ್ಲ ವೋಲ್ವೋ ಬಸ್ಸುಗಳು ನಿಂತಲ್ಲೇ ನಿಂತಿವೆ.. ಸರಿಯಾಗಿ ಬಿಎಂಟಿಸಿ ನೌಕರರಿಗೆ ಡ್ಯೂಟಿ ಸಿಗ್ತಿಲ್ಲ..ಈಗ ಬಿಎಂಟಿಸಿಯಲ್ಲಿ ಹೊಸ ರೂಲ್ಸ್ ತಂದಿದ್ದಾರೆ ಡ್ಯೂಟಿ ಎಷ್ಟು ದಿನಗಳು ‌ಮಾಡಿದ್ರೋ ಅಷ್ಟು ದಿನಗಳದ್ದು ಮಾತ್ರ ಸಂಬಳ ಕೊಡ್ತಾರೆ ಡ್ಯೂಟಿ ಮಾಡಿಲ್ಲ ಅಂದರೆ ಸಂಬಳ ಕೊಡಲ್ಲ.. ಡ್ಯೂಟಿ ಮಾಡಲು ಕಂಡಕ್ಟರ್ ಡ್ರೈವರ್ ಗಳು ಡಿಪೋಗಳಿಗೆ ಪ್ರತಿದಿನ ಬಂದ್ರು ಡಿಪೋ ಮ್ಯಾನೇಜರ್ ಮತ್ತು ಟ್ರಾಫಿಕ್ ಕಂಟ್ರೋಲರ್ ಗಳು ಡ್ಯೂಟಿ ಕೊಡಲ್ಲ ಇದಕ್ಕೆ ಕಾರಣ ಕುರುಡು ಕಾಂಚಾಣ ಹಣ ಕೊಟ್ಟವರಿಗೆ ಮಾತ್ರ ಡ್ಯೂಟಿ ಕೊಡ್ತಾರೆ ಇಲ್ಲಾಂದ್ರೆ ಡ್ಯೂಟಿ ಇಲ್ಲ ಬೆಳಿಗ್ಗೆ ಯಿಂದ ಡಿಪೋಗಳಲ್ಲಿ ಕಾದು ಕಾದು ಮನಗೆ ಹೋಗಬೇಕು.. ಸೋ ಹಾಗಾಗಿ ತಿಂಗಳು ಎರಡರಿಂದ ಮೂರು ಸಾವಿರ ರುಪಾಯಿ ಹಣವನ್ನು ನೀಡಿದ್ರೆ ಡ್ಯೂಟಿ ನೀಡಲಾಗುತ್ತದೆ ಈಗಾಗಲೇ ಹಣ ನೀಡಲು ಒಪ್ಪದೆ ಇದ್ದವರಿಗೆ ಡ್ಯೂಟಿ ನೀಡದೆ ಮಾನಸಿಕವಾಗಿ ತೊಂದರೆ ನಾಲ್ಕರಿಂದ ಐದು ನೌಕರರು ಪ್ರಾಣ ಬಿಟ್ಟಿದ್ದಾರೆ ನಿನ್ನೆ ಆರ್ ಆರ್ ಡಿಪೋ ಕಂಡಕ್ಟರ್ ರಂಗನಾಥ್ ಡಿಪೋದಲ್ಲಿ ವಿಷ ಸೇವಿಸಿ ಈಗ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದಾನೆ.[[{"fid":"281846","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


(ಯಾವ ಯಾವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡಿದ್ದಾರೆ ಅಂತ ನೋಡೋದಾದರೆ)


1- ಉತ್ತರ ವಿಭಾಗ, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಮತ್ತು ವಾಹನ ಚಾಲಕರು


2- ಡಿ.ಟಿ.ಓ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ಮೆಜೆಸ್ಟಿಕ್ ಬಸ್‌ ನಿಲ್ದಾಣ


3- ದಕ್ಷಿಣ ವಿಭಾಗ, ವೀಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್


(4) ಡಿಪೋ-4, ಸೋಮನಕಟ್ಟಿ, ಅಟೆಂಡೆನ್ಸ್ ಕ್ಲರ್ಕ್ ಲೋಹಿತ್


(5) ಡಿ.ಎಸ್.ಎಸ್. ವಿಭಾಗೀಯ ಭದ್ರತಾ ಅಧೀಕ್ಷಕರು ಕೇಂದ್ರ ಕಛೇರಿ, ಶ್ರೀ. ಶ್ರವಣ ಕುಮಾರ್,


(6) ಪಶ್ಚಿಮ ವಿಭಾಗ, ಡಿ.ಎಸ್.ಐ. ಮುನಿಕೃಷ್ಣ ಪ್ರತಿ ಘಟಕದಲ್ಲಿ ನಡೆಯುವ ಭ್ರಷ್ಟಾಚಾರದಲ್ಲಿ ಪಾಲುದಾರರು, ಎಲ್ಲಾ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಡುತ್ತೇನೆಂದು 10 ರಿಂದ 15 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಕೆಲಸದ ಸಮಯದಲ್ಲಿಯೇ ಮಧ್ಯಪಾನ ಮಾಡಿಕೊಂಡು ಇರುವ ರೂಡಿ ಮತ್ತು ತುಂಬಾ ವರ್ಷಗಳಿಂದ ಒಂದೇ ಕೆಲಸವನ್ನು ಮಾಡಿಕೊಂಡು ಮಂಥ್ಲಿ ಕಲೆಕ್ಷನ್ ಕೆಲಸವನ್ನು ಮಾಡಿಕೊಂಡು ಅಧಿಕಾರಿಗಳಿಗೆ ತಲುಪಿಸುವ ಕಾರ್ಯ, ಪ್ರತಿ ಘಟಕದ ವಾಷಿಂಗ್ ಅವರಿಂದ ಮಂಥ್ಲಿ ವಸೂಲಿ ಮಾಡುವ ಕಾರ್ಯ.


(7) ಡಿಪೋ-8, ಹಿರಿಯ ಘಟಕ ವ್ಯವಸ್ಥಾಪಕರು, ಗೋಪಾಲ ಕೃಷ್ಣ, ಮೊಹಮ್ಮದ್ ರಫೀ ಸಿಬ್ಬಂದಿ ಮೇಲ್ವಿಚಾರಕ, ಕೆ. ಶರವಣ ಅಂಕಿ ಅಂಶ ಸಹಾಯಕ, ಚಂದನ್ ಕೆ.ಎಸ್.


ಕಿರಿಯ ಸಹಾಯಕ ಮತ್ತು ಜಯರಾಂ ಚಾಲಕ ಇವರನ್ನು ಹಣವನ್ನು ಹಣವನ್ನು ವಸೂಲಿ ಮಾಡಿಕೊಡಲು ನೇಮಿಸಿರುವುದು.


(8) ಡಿಪೋ–45, ಗಂಗಮ್ಮ ಎ.ಟಿ.ಎಸ್., ಮುತ್ತಮ್ಮ ಮಾಳಗಿ ಟಿ.ಎ.


(9) ಘಟಕ-40, ಶ್ರೀನಿವಾಸ್ ಮೂರ್ತಿ (ಪ್ರಸ್ತುತ ಘಟಕ-26) ಘಟಕ ವ್ಯವಸ್ಥಾಪಕರು, ಕೋಮಲ್ ಟಿ.ಐ.


(10) ಘಟಕ-43, ಮಂಜಮ್ಮ, ಡಿಪೋ ಮ್ಯಾನೇಜರ್, ಶೈಲಮ್ಮ ಎ.ಟಿ.ಐ., ನಿಧಿ ಜ್ಯೂನಿಯರ್ ಅಸಿಸ್ಟೆಂಟ್, ಆಂಜಿ ಚಾಲಕ ಕಂ ನಿರ್ವಾಹಕ, ನವೀನ್ ನಿರ್ವಾಹಕ, ಶಟ್ಟರ್ ಚಾಲಕ ಕಂ ನಿರ್ವಾಹಕ


(11) ಘಟಕ-26, ರೆಡ್ಡಿ ಎ.ಟಿ.ಐ., ಹಿರೇಮಟ್ ಚಾಲಕರ ಬುಕ್ಕಿಂಗ್,


(12) ಪಶ್ಚಿಮ ವಿಭಾಗ ಡಿಪೋ ಮ್ಯಾನೇಜರ್ ಕೃಷ್ಣ, ಡಿಪೋ-12 ಚಂದ್ರಕಲಾ ಎ.ಟಿ.ಐ., ಕುಮಾರ್ ಪಾಟೀಲ್‌' ಪ್ರಸ್ತುತ ಲೈನ್ ಚೆಕ್ಕಿಂಗ್‌ನಲ್ಲಿ ಕರ್ತವ್ಯ ನಿರ್ವಹಣೆ.


(13) ಡಿಪೋ-16 ಉಮೇಶ್ ಅಟೆಂಡೆನ್ಸ್ ಕ್ಲರ್ಕ್ ಮತ್ತು ಸೋಮಣ್ಣ ಟಿ.ಐ.


(14) ಡಿಪೋ-21, ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳ ಡಿಪೋ-33, ಅಕೌಂಟ್ ಸೂಪರ್‌ವೈಸರ್‌ ಮುನಿರಾಜು ಮತ್ತು ಅದೇ ಡಿಪೋನ ದಾಬೂಜಿ ಎ.ಟಿ.ಐ. ಮತ್ತು ಅದೇ ಘಟಕದ ಚಾಲಕರಾದ ಗಂಗರಾಜು ಮತ್ತು ಶಿವರಾಜು ಚಾಲಕ ಕಂ ನಿರ್ವಾಹಕ ಚಂದ್ರಶೇಖರ್, ಡಿ.ಸಿ. ವಿಜಯ್‌ ಕುಮಾರ್ ಮತ್ತು ಅರುಣ್ ಕುಮಾರ್‌ ಇದೇ ಘಟಕದ ಹೊಳೆ ಬಸಪ್ಪ ರವರ ಸಾವಿಗೆ ಇವರುಗಳ ಹಣದ ದಾಹ ಪ್ರಮುಖ ಕಾರಣ


(15) ಡಿಪೋ-4, ಸೋಮನಕಟ್ಟಿ, ಅಟೆಂಡನ್ಸ್ ಕ್ಲರ್ಕ್, ಲೋಹಿತ್ ಅಟೆಂಡನ್ಸ್ ಕ್ಲರ್ಕ್, ರಮೇಶ್


(16) ಡಿಪೋ-20, ಮಂಜುನಾಥ್ ಎ.ಟಿ.ಎಸ್. ಪ್ರಸ್ತುತ ಕೇಂದ್ರ ಕಛೇರಿ, ಅಪಘಾತ ವಲಯದಲ್ಲಿ ಕರ್ತವ್ಯ, ಮಂಜು ಅಟೆಂಡೆನ್ಸ್ ಕ್ಲರ್ಕ್, ಪವನ್ ಅಟೆಂಡೆನ್ಸ್ ಕ್ಲರ್ಕ್, ರೂಪ ಎ.ಟಿ.ಎಸ್. ಮಹದೇವ ಹೊನ್ನಾಳಿ ಟಿ.ಐ.


(17) ಡಿಪೋ-15, ಎ.ಟಿ.ಎಸ್. ವೆಂಕಟೇಶಪ್ಪ, ರಾಜ್‌ಕುಮಾರ್ ಡೀಸೆಲ್ ಬಂಕ್ ಹುದ್ದೆ.


ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸರ್ಜರಿ: 13 ಐಪಿಎಸ್, 74 ಡಿವೈಎಸ್ಪಿಗಳ ವರ್ಗಾವಣೆ


ಈ ಭ್ರಷ್ಟಾಚಾರದಲ್ಲಿ ನೌಕರರು ದಿನನಿತ್ಯ ರೂಟ್ ಕಲೆಕ್ಷನ್, ರಜೆ, ಇತ್ಯಾದಿ ಹಾಗೂ ಸಣ್ಣ ಪುಟ್ಟ ಪ್ರಕರಣಗಳಿಗೆ ಮೆಮೊ ಜಾರಿ ಮಾಡುವುದು, ಮನಸೋ ಇಚ್ಛೆ ದಂಡ ವಿಧಿಸುವುದು, ಇಂಕ್ರಿಮೆಂಟ್ ಕಟ್ ಮಾಡುವುದು, ಹಾಗೂ ಅಮಾನತ್ತು ಮತ್ತು ಘಟಕ ವರ್ಗಾವಣೆ ಹಾಗೂ ಇಲಾಖಾ ತನಿಖಾ ಹೆಸರಿನಲ್ಲಿ ಇಂತಹ ಶಿಕ್ಷೆಗಳಿಗೆ ಗುರಿಪಡಿಸುವುದು. ಈ ಶಿಕ್ಷಾ ಪ್ರಮಾಧಗಳು ಕಡಿತಗೊಳಿಸಬೇಕಾದರೆ ಈ ಮೇಲೆ ಕಾಣಿಸಿರುವ ಮಧ್ಯವರ್ತಿಗಳನ್ನು ಸಂಪರ್ಕಿಸುವಂತೆ ಅವರುಗಳ ಮೂಲಕ ಹಣ ದಂದೆ ನಡೆಯುತ್ತಿದೆ..ಇದರಲ್ಲಿ ಕೆಲವು ಅಧಿಕಾರಿಗಳು ಸಂಸ್ಥೆಗೆ ಸೇರಿದಾಗಿನಿಂದ ಹಣ ಪಡೆಯದೇ ಇದ್ದವರು ಇದ್ದಾರೆ. ಆದರೆ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ಟಿ.ಓ. ಡಿ.ಎಂ.ಇ. ಇವರ ಒತ್ತಡದ ಮೇಲೆ ಹಣದಂದಗೆ ಇಳಿದಿರುತ್ತಾರೆ.