Conditions for use of children for filming:  ಚಿತ್ರೀಕರಣಕ್ಕೆ ಬಳಸುವ ಮುನ್ನ ಕೆಲವೊಂದು ಷರತ್ತುಗಳನ್ನು ಅನುಸರಿಸುವಂತೆ ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ಸುತ್ತೋಲೆಯನ್ನು ರವಾನಿಸಿದೆ. 


COMMERCIAL BREAK
SCROLL TO CONTINUE READING

ಷರತ್ತುಗಳು : 


  • 5 ಗಂಟೆಗೂ ಹೆಚ್ಚು ಕಾಲ ಶೂಟಿಂಗ್ ಮಕ್ಕಳನ್ನು ಶೂಟಿಂಗ್ ಮಾಡುವಂತಿಲ್ಲ 

  • ಚಿತ್ರೀಕರಣ ವೇಳೆ ಬಾಲನಟರು ಇರುವಾಗ ವಿಶ್ರಾಂತಿ ಇಲ್ಲದೇ ಮೂರು ಗಂಟೆಗೂ ಅಧಿಕ ಕಾಲ ನಿರಂತರವಾಗಿ ಶೂಟಿಂಗ್ ಮಾಡುವಂತಿಲ್ಲ.

  • ಶೂಟಿಂಗ್ ಸ್ಪಾಟ್ ನಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಅರೋಗ್ಯಕ್ಕೆ ಪೂರಕವಾದ ಸೌಲಭ್ಯ ಇರಬೇಕು.

  • ಶೂಟಿಂಗ್ ಸಮಯದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು 


ಇದನ್ನು ಓದಿ : Poisonous plant: ವಿಶ್ವದ ಅತ್ಯಂತ ಅಪಾಯಕಾರಿ ಸಸ್ಯ, ಮುಟ್ಟಿದ ತಕ್ಷಣ ಸಾವು ಖಚಿತ.!


  • ನಟನೆ ಮಾಡುವ ಮಗು ನಿರಂತರವಾಗಿ 27 ದಿನ ಶೂಟಿಂಗ್ ಕೆಲಸಕ್ಕೆ ಬಳಸಬಾರದು.

  • ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರೋ ಎಲ್ಲಾ ಕಾನೂನುಗಳ ಪಾಲನೆ ಮಾಡುವುದು.

  • ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದವರಿಯಲು ಅಗತ್ಯವಿರೋ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು.

  • ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 5 ಮಕ್ಕಳಿಗೆ ಒಬ್ಬರಂತೆ ಜವಾಬ್ದಾರಿ ವ್ಯಕ್ತಿಯನ್ನು ನೇಮಿಸುವುದು..

  • ಶೂಟಿಂಗ್ ಸ್ಥಳದಲ್ಲಿ ಎಚ್ಚರಿಕೆ ವಹಿಸುವಂತೆ ಕ್ರಮ ಕೈಗೊಳ್ಳಬೇಕು


ಇದನ್ನು ಓದಿ : ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್: ಸೋನಿಯಾ ಗಾಂಧಿ ಸೇರಿ 4 ಮಂದಿ ಹೆಸರು ಘೋಷಣೆ


  • ಯಾವುದೇ ಮಗುವಿನ ಒಪ್ಪಿಗೆ ಮತಯ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಮತ್ತು ಕ್ರೀಡಾ ಚಟುವಟಿಕೆ ಅನೌಪಾಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಅವುಗಳಲ್ಲಿ ಭಾಗವಹಿಸುವಂತೆ ಮಾಡಬಾರದು.

  • ಯಾವುದೇ ವಾಣಿಜ್ಯ ಪರ ಕಾರ್ಯಕ್ರಮದಲ್ಲಿ ಮಗು ಭಾಗವಹಿಸುವುದಿದ್ದರೆ ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾ ದಂಡಾಧಿಕಾರಿಗಳ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು 

  • ಈ ವೇಳೆ ಮಕ್ಕಳ ಪಟ್ಟಿ ಮತ್ತು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

  • ಚಿತ್ರೀಕರಣ ಸಮಯದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿರಬೇಕು.

  • ಕಾರ್ಯಕ್ರಮದಿಂದ ಬರುವ ಒಟ್ಟು ಆದಾಯದ ಕನಿಷ್ಠ ಶೇ.20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತವ ಠೇವಣಿಯ ಖಾತೆ ತೆರೆದು ಇಡಬೇಕು. ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.


ಹೀಗೆ ಹಲವಾರು ಷರತ್ತುಗಳನ್ನು ಈ ಸುತ್ತೋಲೆಯು ಒಳಗೊಂಡಿದ್ದು,  ಚಿತ್ರೀಕರಣಕ್ಕೆ ಮಕ್ಕಳನ್ನು ಬಳಸುವ ಕುರಿತಂತೆ  ಕಾರ್ಮಿಕ ಇಲಾಖೆ ಫಿಲಂ ಚೇಂಬರ್​ಗೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.