Poisonous plant species: ಭೂಮಿಯ ಮೇಲೆ ಹಲವು ವಿಶಿಷ್ಟ ಸಸ್ಯಗಳಿವೆ. ಕೆಲವು ಕೀಟಗಳನ್ನು ತಿಂದು ಬದುಕಿದೆ, ಮತ್ತೆ ಕೆಲವು ರಾತ್ರಿ ಹೊತ್ತು ಬೆಳಕು ಚೆಲ್ಲುತ್ತವೆ. ಆದರೆ ಜಗತ್ತಿನಲ್ಲಿ ಆತ್ಮಹತ್ಯಾ ಸಸ್ಯವಿದೆ ಎಂದು ನಿಮಗೆ ತಿಳಿದಿದೆಯೇ? ಇದು ಜನರ ಸಾವಿಗೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಈ ಸಸ್ಯವನ್ನು ಆತ್ಮಹತ್ಯಾ ಸಸ್ಯ ಎಂದು ಕರೆಯುತ್ತಾರೆ. ಇದರ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಪಂಚದ ಅತ್ಯಂತ ಅಪಾಯಕಾರಿ ಸಸ್ಯ. ಈ ಸಸ್ಯವು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಈ ಸಸ್ಯದ ವೈಜ್ಞಾನಿಕ ಹೆಸರು ಡೆಂಡ್ರೊಕ್ನೈಡ್ ಮೊರಾಯ್ಡ್ಸ್. ಈ ಸಸ್ಯವು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ. ಇದರ ಎಲೆಗಳು ಹೃದಯದ ಆಕಾರದಲ್ಲಿರುತ್ತವೆ. ಆದರೆ ಯಾರಾದರೂ ಈ ಸಸ್ಯವನ್ನು ತಪ್ಪಾಗಿ ಮುಟ್ಟಿದರೂ ಆ ವ್ಯಕ್ತಿಯು ಸಹಿಸಲಾಗದ ನೋವು ಅನುಭವಿಸಬೇಕಾಗುತ್ತದೆ ಮತ್ತು ಕೆಲವೊಮ್ಮೆ ಜನರು ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ.
ಇದನ್ನೂ ಓದಿ: ಶ್ರೀಮಂತರ ಖಾದ್ಯ ಎಂದೇ ಫೇಮಸ್ ಈ ಮೀನಿನ ಮೊಟ್ಟೆ, ವಿಶ್ವದ ಅತ್ಯಂತ ದುಬಾರಿ ಆಹಾರ ಪದಾರ್ಥ ಇದು!
ಈ ಸಸ್ಯದ ಎಲೆಗಳ ಮೇಲ್ಮೈಯಲ್ಲಿ ಸಣ್ಣ ಮುಳ್ಳುಗಳಿವೆ. ಅವು ಗೋಚರಿಸುವುದಿಲ್ಲ. ಆದರೆ ಯಾರಾದರೂ ಅವುಗಳನ್ನು ಸ್ಪರ್ಶಿಸಿದ ತಕ್ಷಣ, ಈ ಮುಳ್ಳುಗಳು ಚರ್ಮವನ್ನು ಪ್ರವೇಶಿಸುತವೆ. ಮತ್ತೆ ಹೊರಬರುವವರೆಗೂ ನೋವು ನೀಡುತ್ತಲೇ ಇರುತವೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ಸಸ್ಯದ ಎಲೆಗಳ ಮೇಲಿನ ಮುಳ್ಳುಗಳು ತುಂಬಾ ಚಿಕ್ಕದಾಗಿದೆ ಮತ್ತು ಅತ್ಯಂತ ವಿಷಕಾರಿಯಾಗಿದೆ. ಒಮ್ಮೆ ಇವು ತ್ವಚೆಯೊಳಗೆ ಸೇರಿದರೆ ಹೆಚ್ಚು ಹೊತ್ತು ಹೊರಬರುವುದಿಲ್ಲ. ಚರ್ಮದೊಳಗೆ ತೂರಿಕೊಳ್ಳುತ್ತವೆ ಮತ್ತು ಬಹಳಷ್ಟು ನೋವನ್ನು ಉಂಟುಮಾಡುತ್ತವೆ. ಇಲ್ಲಿಯವರೆಗೆ ಅದರ ನೋವಿಗೆ ಯಾವುದೇ ಔಷಧಿಯನ್ನು ತಯಾರಿಸಲಾಗಿಲ್ಲ. ಇದು ಭಾರತದಲ್ಲಿ ಇನ್ನೂ ಕಂಡುಬಂದಿಲ್ಲ. ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ.
ಇದನ್ನೂ ಓದಿ: ಬ್ರಿಟಿಷರ ದೇಶದ ಈ ದ್ವೀಪದಲ್ಲಿ ಕಾರುಗಳು, ಫೋನ್ ಮತ್ತು ಗಡಿಯಾರವಿಲ್ಲವಂತೆ: ಇದ್ಯಾವುದು ಗೊತ್ತೇ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.