ಬೆಂಗಳೂರು:  ರಾಜ್ಯ ಸರ್ಕಾರ ಬೆಂಗಳೂರನ್ನು ರಕ್ಷಿಸಲು  ವಿಫಲವಾಗಿದೆ ಎಂದು ಆರೋಪಿಸಿ ಇಂದು ಕೇಂದ್ರ ಸಚಿವ ಜಾವಡೆಕರ್ ನೇತೃತ್ವದಲ್ಲಿ ಬಿಜೆಪಿ ಸದಸ್ಯರು  'ಬೆಂಗಳೂರು ರಕ್ಷಾ ಪಾದಯಾತ್ರೆ' ನಡೆಸಿದರು. ನಗರದ ಗವಿಪುರಂನ ಗಂಗಾದೇಶ್ವರ ದೇವಸ್ತಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಜಾವಡೇಕರರವರಿಗೆ ಆರ್.ಅಶೋಕ, ಕೇಂದ್ರ ಸಚಿವ ಅನಂತಕುಮಾರ್ ಹಾಗೂ ಬಿಬಿಎಂಪಿ ಸದಸ್ಯರು ಸಾತ್ ನೀಡಿದ್ದಾರೆ .


COMMERCIAL BREAK
SCROLL TO CONTINUE READING

 ಇನ್ನೊಂದೆಡೆ ಬಿಜೆಪಿಯ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ , ಮುಖ್ಯಮಂತ್ರಿ ಸಿದ್ದರಾಮಯ್ಯನವರ  ಸೂಚನೆಯ ಮೇರೆಗೆ ಆಯಾ ಇಲಾಖೆಗಳಿಗೆ ಸಂಬಂಧಪಟ್ಟ ಸಚಿವರಿಗೆ ಪ್ರತಿದಿನ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ಆಡಳಿತದ ಹಗರಣಗಳನ್ನು ಬಯಲಿಗೆಳೆಯಲು ಆದೇಶ ನೀಡಿದ್ದಾರೆ. ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೂಡಾ ಬಿಜೆಪಿ ನಡೆ ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.