ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ, ಇನ್ನೊಂದೆಡೆಗೆ ಹಿಂದಿ ಪ್ರಾಂತ್ಯದ ರಾಜ್ಯಗಳಲ್ಲಿ ಪಂಜಾಬ್ ಮತ್ತು ಬಿಜೆಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿದೆ.


COMMERCIAL BREAK
SCROLL TO CONTINUE READING

ಈಗ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಹಿನ್ನಡೆಯನ್ನು ಅನುಭವಿಸಿರುವ ಈಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ನಿದ್ದೆಗೆಡಿಸುವಂತೆ ಮಾಡಿದೆ, 2023ರ ಚುನಾವಣೆ ಎದುರಿಸಲು ಪಾದಯಾತ್ರೆಗಳನ್ನ ತಯಾರಿ ನಡೆಸುತ್ತಿರುವ ಜೊತೆಗೆ ಕೆಪಿಸಿಸಿ ಒಳಜಗಳಗಳು ಪಕ್ಷಕ್ಕೆ ತೊಡಕು ಉಂಟುಮಾಡುತ್ತಿದೆ.


ಪಂಜಾಬ್ ಸೋಲು; ರಾಜ್ಯದಲ್ಲೂ ಅದೇ ಪರಿಸ್ಥಿತಿ?!


ಪಂಜಾಬ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಹೀನಾಯ ಸೋಲಿಗೆ ಪಕ್ಷದ ಆಂತರಿಕ ಭಿನ್ನಮತ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: ಸಂಪೂರ್ಣ ಡಿಜಟಲೀಕರಣಗೊಂಡ ಕರ್ನಾಟಕ ರಾಜ್ಯ ಮುಕ್ತ ವಿ.ವಿ 


ಪಂಜಾಬ್ ನಲ್ಲಿ ರೈತ ಹೋರಾಟದಲ್ಲಿ ಕಾಂಗ್ರೆಸ್ (Congress) ಪಾತ್ರ ಇದ್ದರೂ ಆಮ್ ಆದ್ಮಿ ಪಕ್ಷದ ಪಾತ್ರ ಇರಲಿಲ್ಲ.ಆಂತರಿಕ ಭಿನ್ನಮತ ಕಾರಣದಿಂದ ಅಲ್ಲಿನ ಜನರು ಆಮ್ ಆದ್ಮಿಗೆ ಅವಕಾಶ ನೀಡಿದ್ದಾರೆ. ಪಂಜಾಬ್ ಸಿಎಂ ಆಗಿದ್ದ ಕ್ಯಾ. ಅಮರಿಂದರ್ ಸಿಂಗ್ ಹಾಗೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದು ನಡುವಿನ ಭಿನ್ನಾಭಿಪ್ರಾಯ ಈಗ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಕೊಟ್ಟಿದೆ.ಅಮರಿಂದರ್ ಸಿಂಗ್ ಪಕ್ಷ ತೊರೆದರೂ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ನಿಂತಿರಲಿಲ್ಲ.


ರಾಜ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ, ಶೀತಲ ಸಮರ ಪರಿಣಾಮ ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಗೆ ಅಥವಾ ಜೆಡಿಎಸ್ ಮದ್ಯೆ ಮಾತ್ರ ಫೈಟ್ ಇರತ್ತೆ ಹೊರತು ಕಾಂಗ್ರೆಸ್ ಅಪ್ರಸ್ತುತ ಆಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರ ಚಿಂತೆಯಾಗಿದೆ.


ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ತರಬೇತಿ


ಒಟ್ಟಾರೆ ರಾಜ್ಯ ಕಾಂಗ್ರೆಸ್ ನಲ್ಲಿರುವ ಒಳಜಗಳ ನಿಲ್ಲಿಸಿ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಜನರಿಗೆ ಮನವರಿಕೆ ಮಾಡುವ ಮೂಲಕ ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ ಸಮರ್ಪಕವಾಗಿ ಚುನಾವಣೆಯನ್ನ ಎದುರಿಸಬಹುದು, ಇಲ್ಲದಿದ್ದರೆ ಪಂಜಾಬ್ ಸ್ಥಿತಿ ಇಲ್ಲೂ ನಿರ್ಮಾಣ ಆಗುವದರಲ್ಲಿ ಸಂಶಯವಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.