ಸಂಪೂರ್ಣ ಡಿಜಟಲೀಕರಣಗೊಂಡ ಕರ್ನಾಟಕ ರಾಜ್ಯ ಮುಕ್ತ ವಿ.ವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಓಯು ಸ್ಟೂಡೆಂಟ್ ಅಪ್ಲಿಕೇಶನ್ ಆವಿಷ್ಕಾರ ಮಾಡಲಾಗಿದೆ. ಇದರಲ್ಲಿ ಹಲವಾರು ಮಾಹಿತಿ ಸಂಗ್ರಹಿಸಲಾಗಿದೆ. ಡಿಜಿಟಲೀಕರಣ ಮೂಲಕ ವಿದ್ಯಾರ್ಥಿಗಳಿಗೆ ನಾವು ಆನ್‍ಲೈನ್ ಸೇವೆಗಳನ್ನು ನೀಡುತ್ತಿದ್ದೇವೆ. ಪಠ್ಯದ ನೋಟ್ಸ್‍ಗಳನ್ನ ಸಹ ಆ್ಯಪ್‍ನಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿ, ವಿಡಿಯೋ ಮೂಲಕ ತರಬೇತಿ, ರೆಡಿಯೋ ಪಾಠಗಳು ಸೇರಿದಂತೆ ಇನ್ನೂ ಅನೇಕ ವಿಶೇಷತೆಯೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಎಸ್. ಹೇಳಿದರು.

Last Updated : Sep 4, 2020, 08:34 PM IST
ಸಂಪೂರ್ಣ ಡಿಜಟಲೀಕರಣಗೊಂಡ ಕರ್ನಾಟಕ ರಾಜ್ಯ ಮುಕ್ತ ವಿ.ವಿ title=
file photo(facebook)

ನವದೆಹಲಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಓಯು ಸ್ಟೂಡೆಂಟ್ ಅಪ್ಲಿಕೇಶನ್ ಆವಿಷ್ಕಾರ ಮಾಡಲಾಗಿದೆ. ಇದರಲ್ಲಿ ಹಲವಾರು ಮಾಹಿತಿ ಸಂಗ್ರಹಿಸಲಾಗಿದೆ. ಡಿಜಿಟಲೀಕರಣ ಮೂಲಕ ವಿದ್ಯಾರ್ಥಿಗಳಿಗೆ ನಾವು ಆನ್‍ಲೈನ್ ಸೇವೆಗಳನ್ನು ನೀಡುತ್ತಿದ್ದೇವೆ. ಪಠ್ಯದ ನೋಟ್ಸ್‍ಗಳನ್ನ ಸಹ ಆ್ಯಪ್‍ನಲ್ಲಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳ ಪ್ರವೇಶಾತಿ, ವಿಡಿಯೋ ಮೂಲಕ ತರಬೇತಿ, ರೆಡಿಯೋ ಪಾಠಗಳು ಸೇರಿದಂತೆ ಇನ್ನೂ ಅನೇಕ ವಿಶೇಷತೆಯೊಂದಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿ ಡಾ. ವಿದ್ಯಾಶಂಕರ್ ಎಸ್. ಹೇಳಿದರು.

ಇಂದು ಬೆಳಿಗ್ಗೆ ನಗರದ ಸಕ್ರ್ಯೂಟ್ ಹೌಸಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018-19ನೇ ಸಾಲಿನಿಂದ 2022-23 ರವರೆಗೆ 5 ವರ್ಷಗಳ ಕಾಲ ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಿರುತ್ತದೆ. 2017 ರ ಓಡಿಎಲ್ ರೆಗ್ಯೂಲೇಷನ್ ಯುಜಿಸಿ ನಿಯಮಾವಳಿಗಳ ಅನ್ವಯ ದೇಶದಲ್ಲಿ 5 ವರ್ಷಗಳ ಕಾಲ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. ಶಿಕ್ಷಣದಿಂದ ಯಾರು ದೂರವಿರುತ್ತಾರೆ ಅಂತವರಿಗೆ ನಮ್ಮ ಮುಕ್ತ ವಿಶ್ವವಿದ್ಯಾಲಯ ಕಲಿಯಲು ಅವಕಾಶ ನೀಡುತ್ತದೆ ಎಂದರು.

ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ವಿಡಿಯೋ ತಂತ್ರಜ್ಞಾನ ಆವಿಷ್ಕಾರ ಮಾಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಆನ್‍ಲೈನ್ ನಲ್ಲಿಯೇ ಅಡ್ಮಿಷನ್ ಮಾಡಲು ಸಹ ಅವಕಾಶ ಮಾಡಿದ್ದೇವೆ. ಆನ್‍ಲೈನ್ ವಿಡಿಯೋ ಆ್ಯಪ್‍ಗಳನ್ನು ಬಳಸಿಕೊಂಡು ಪಾಠ ಮಾಡಿದ್ದೇವೆ. ಎಲ್ಲರಿಗೂ ಈ ಮೇಲ್ ಮೂಲಕ ಅಂಕಪಟ್ಟಿಗಳನ್ನು ಕಳುಹಿಸಲಾಗುತ್ತಿದೆ. ಅವುಗಳ ನೈಜತೆಯನ್ನು ಉದ್ಯೋಗದಾತರು ಆನ್‍ಲೈನ್ ನಲ್ಲಿಯೇ ಪರೀಕ್ಷಿಸಬಹುದಾಗಿದೆ. ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.

ವಿ.ವಿ.ಯ ನೂತನ ಯೋಜನೆಗೆಳು: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಲೀಕರಣ ಜಾರಿಗೆ ತರಲಾಗಿದೆ,ಕೌಶಾಲ್ಯಾಭಿವೃದ್ದಿಗೆ ಪ್ರತ್ಯೇಕ ವಿಭಾಗ ರಚಿಸಿ,ರಾಜ್ಯದ ಎಲ್ಲೆಡೆ ಕೌಶಾಲ್ಯಾಭಿವೃದ್ದಿ ತರಬೇತಿ ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ.ಕೇಂದ್ರ ಪರೀಕ್ಷಾ ವಿಭಾಗದಲ್ಲಿ ಪ್ರತೀ ವಿಭಾಗಕ್ಕೂ ವಿಶೇಷ ಅಧಿಕಾರಿಗಳ ನೇಮಕ ಮಾಡಿ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಪ್ರವೇಶಾತಿ ಕಲ್ಪಿಸಲಾಗುತ್ತಿದೆ. ವಿ.ವಿ.ಯ ಶುಲ್ಕಗಳನ್ನು ವಿದ್ಯಾರ್ಥಿ ಇರುವಲ್ಲಿಯೇ ಪಾವತಿಸಲು ಆನ್‍ಲೈನ್ ಸೌಲಭ್ಯ ಜಾರಿಗೊಳಿಸಲಾಗಿದೆ. ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರತ್ಯೇಕ ಲೈಬ್ರರಿ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರತ್ಯೇಕ ಮಹಿಳಾ ಸಂಪರ್ಕ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ. ತಿಂಗಳಿಗೊಮ್ಮೆ ಪ್ರಾದೇಶಿಕ ಕೇಂದ್ರಗಳಲ್ಲಿ ಕುಲಪತಿಗಳು, ಪ್ರಾದೇಶಿಕ ನಿರ್ದೇಶಕರು ಹಾಗೂ ಸಂಬಂಧಿತ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಮನೆ ಮನೆಗೂ ವಿ.ವಿ. ತಲುಪುವಂತೆ ಯೋಜನೆ ರೂಪಿಸಲಾಗಿದೆ. ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ಮೂಲಕ ಉನ್ನತ ಅಧ್ಯಯನಕ್ಕೆ ಸುತ್ತೋಲೆ ಹೊರಡಿಸುವ ಯೋಜನೆ ಕೈಗೊಳ್ಳಲಾಗಿದೆ. ಆಡಳಿತ ವಿಕೇಂದ್ರಿಕರಣ ಮಾಡಲಾಗಿದೆ.

ವಿಶೇಷ ಯೋಜನೆಗಳು : ದೂರಶಿಕ್ಷಣದ ಇತಿಹಾಸದಲ್ಲೇ ಮೊದಲಬಾರಿಗೆ ಮುಕ್ತ ವಿ.ವಿ.ಯಲ್ಲಿ ಪ್ಲೇಸ್‍ಮೆಂಟ್ ವಿಭಾಗ ರಚಿಸಿ ವಿಶೇಷ ಅಧಿಕಾರಿ ನೇಮಿಸಲಾಗಿದೆ. ಇಲ್ಲಿಯವರೆಗೆ ಉನ್ನತ ಶಿಕ್ಷಣ ನೀಡುತ್ತಿದ್ದ ವಿ.ವಿ.ಯು ತನ್ನಲ್ಲಿ ಕಲಿತ ವಿದ್ಯಾರ್ಥಿಗಳ ನೌಕರಿ ಸಂಬಂಧಿತ ಯೋಜನೆ ರೂಪಿಸಿರುವುದು ವಿನೂತನ ಮತ್ತು ಅಗತ್ಯ ಕ್ರಮವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ವಿ.ವಿ.ಯ ಮೇಲೆ ವಿಶ್ವಾಸ ಹೆಚ್ಚುವ ಜೊತೆಗೆ ವಿಶ್ವವಿದ್ಯಾನಿಲಯ ಪ್ರವೇಶಾತಿ ವೃದ್ಧಿಯಾಗಲಿದೆ. ರಾಜ್ಯದಲ್ಲಿ ಮೊದಲಬಾರಿಗೆ ಉದ್ಯೋಗ ಮೇಳ ನಡೆಸಿ ಮುಕ್ತ ವಿ.ವಿ.ಯ ವಿದ್ಯಾರ್ಥಿಗಳಿಗೆ ಔದೋಗಿಕ ಅವಕಾಶ ದೊರಕಿಸಿ ಕೊಟ್ಟ ಕೀರ್ತಿಗೆ ವಿಶ್ವವಿದ್ಯಾನಿಲಯದ ಪಾತ್ರವಾಗಿದೆ,

ಕುಲಪತಿಗಳ ಪರೀಕ್ಷಾ ವಿಭಾಗ ಕಡತ ವಿಲೇವಾರಿ ಸಪ್ತಾಹ : ವಿಶೇಷವಾಗಿ ವಿ.ವಿ.ಯಲ್ಲಿ ಪರೀಕ್ಷಾ ವಿಭಾಗವು ಅತ್ಯಂತ ಪ್ರಮುಖವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಲಪತಿಗಳು ವಾರದಲ್ಲಿ ಒಂದು ದಿವಸ ಖುದ್ದು ಪರೀಕ್ಷಾ ವಿಭಾಗದ ಕಡತಗಳನ್ನು ವಿಲೇವಾರಿ ಮಾಡಿಸುವ ಹಾಗೂ ವಿದ್ಯಾರ್ಥಿಗಳಿಂದ ಸಲ್ಲಿಕೆಯಾಗಿರುವ ಮನವಿಗಳನ್ನು ಪರಾಮರ್ಶಿಸುವ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಕಡ್ಡಾಯ ಸೆಮಿನಾರುಗಳ ಆಯೋಜನೆ : ಪ್ರತಿ ಅಧ್ಯಯನ ವಿಭಾಗದಿಂದಲೂ ಅಗತ್ಯ ವಿಷಯಗಳ ಕುರಿತು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಕಡ್ಡಾಯವಾಗಿ ಒಂದು ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹಾಗೂ ಶೈಕ್ಷಣಿಕ ಸವಲತ್ತುಗಳ ಸದ್ಬಳಕೆಗೆ ಯೋಜನೆ ರೂಪಿಸಲಾಗಿದೆ.

ರೆಗ್ಯೂಲರ್ ಶಿಕ್ಷಣ ಸಮೀಕರಣ ಯೋಜನೆ : 2017 ಓ.ಡಿ.ಎಲ್. ರೇಗ್ಯೂಲೇಷನ್ ಅನ್ವಯ ದೂರಶಿಕ್ಷಣ ಮತ್ತು ರೆಗ್ಯೂಲರ್ ಶಿಕ್ಷಣಕ್ಕೂ ಕಿಂಚಿತ್ತೂ ವ್ಯತ್ಯಾಸ ಇರುವುದಿಲ್ಲ. ಈ ಹಿನ್ನಲೆಯಲ್ಲಿ ವಿ.ವಿ. ಕ್ರಮವಹಿಸಿ ಪ್ರತಿ ವರ್ಷ ಎರಡು ಪ್ರವೇಶಾತಿಗೆ ಕ್ರಮ ಕೈಗೊಂಡಿದೆ. ಮೊದಲ ಪ್ರವೇಶಾತಿ (ಜನವರಿ ಅವೃತ್ತಿ) ಎರಡನೇ ಪ್ರವೇಶಾತಿ (ಜೂನ್ ಅವೃತ್ತಿ) ನಡೆಯಲಿದ್ದು, ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಜೊತೆ ನಿರಂತರ ಸಂಪರ್ಕದಲ್ಲಿರುತ್ತಾರೆ. ವಿ.ವಿ.ಯಲ್ಲಿ ಕೆಲವು ಅಧ್ಯಯನ ಕ್ರಮಕ್ಕೆ ಸೆಮಿಸ್ಟರ್ ಪದ್ದತಿಯು ಜಾರಿಯಲ್ಲಿದ್ದು, ಅಂಕ ನೀಡಿಕೆಯಲ್ಲೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಬಹಳ ಮುಖ್ಯವಾಗಿ ರೆಗ್ಯೂಲರ್‍ನಂತೆ ಇಲ್ಲಿಯೂ ಪ್ರತಿ ಅಧ್ಯಯನ ವಿಭಾಗದಲ್ಲೂ ರ್ಯಾಂಕ್ ನೀಡುವ ಪದ್ದತಿ ಜಾರಿಯಲ್ಲಿದೆ.

ಗುಣಮಟ್ಟದ ಶಿಕ್ಷಣ ನೀಡುವುದು, ತಳಮಟ್ಟದವರೆಗೂ ಶೈಕ್ಷಣಿಕ ಚಟುವಟಿಕೆ ವಿಸ್ತರಣೆ, ಮಹಿಳಾ ಶಿಕ್ಷಣಕ್ಕೆ ಆಧ್ಯತೆ, ಆಸಕ್ತ ವಯೋಮನದವರಿಗೂ ಶಿಕ್ಷಣ ಸೌಲಭ್ಯ ನೀಡುವುದು. ಉದ್ಯೋಗ ಆಧಾರಿತ ಶಿಕ್ಷಣ ನೀಡುವುದು, ಸ್ಪರ್ಧಾತ್ಮಕ ತರಬೇತಿ ಆಯೋಜನೆ, ಜಾಗತೀಕರಣ ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ವಿ.ವಿ.ಯ ಉದ್ದೇಶಗಳಾಗಿವೆ ಎಂದರು.

18 ವಿದ್ಯಾರ್ಥಿಗಳು ಕೆಎಎಸ್ ಗೆ ಆಯ್ಕೆ: ಕರಾಮುವಿವಿಯಲ್ಲಿ ಪದವಿ ಪಡೆದ 18 ಅಭ್ಯರ್ಥಿಗಳು ಈ ಬಾರಿ ಕೆಎಎಸ್ ಉತ್ತೀರ್ಣರಾಗಿದ್ದು ಉಪವಿಭಾಗಾಧಿಕಾರಿ ಸೇರಿದಂತೆ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿವಿಯ ಪಠ್ಯಗಳ ಗುಣಮಟ್ಟದ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ ಎಂದು ಕುಲಪತಿಗಳು ಹೇಳಿದರು.

ಪ್ರಸ್ತುತ ಘಟಿಕೋತ್ಸವ ಆಯೋಜನೆ, ಅಂಕಪಟ್ಟಿ ನೀಡಿಕೆ, ಪರೀಕ್ಷಾ ಆಯೋಜನೆ, ಎಲ್ಲವನ್ನೂ ಕೂಡ ವಿಶ್ವವಿದ್ಯಾನಿಲಯವು ಸುಗಮವಾಗಿ ನಿರ್ವಹಿಸಿರುವುದರಿಂದ 2020-21ನೇ ಶೈಕ್ಷಣಿಕ ಸಾಲಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರವೇಶಾತಿ ಹೊಂದುವ ಗುರಿಯನ್ನು ವಿಶ್ವವಿದ್ಯಾನಿಲಯವು ಹೊಂದಿದೆ. ಮಹಿಳೆಯರಿಗೆ ಬಿ.ಪಿ.ಎಲ್. ರಿಯಾಯಿತಿ ಸೌಲಭ್ಯಗಳನ್ನು ಒಳಗೊಂಡಂತೆ, ಅತ್ಯಂತ ಕಡಿಮೆ ದರದ ಶೈಕ್ಷಣಿಕ ಚಟುವಟಿಕೆ ವಿಸ್ತರಣೆಯ ಕಾರ್ಯವನ್ನು ವಿಶ್ವವಿದ್ಯಾನಿಲಯ ಆದ್ಯತೆಯಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಡಾ.ರಘು ಅಕಮಂಚಿ ಮಾತನಾಡಿ, ಉತ್ತರ ಕರ್ನಾಟಕದ ಪ್ರಮುಖ ಶಿಕ್ಷಣ ಕೇಂದ್ರವಾಗಿರುವ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ವಿವಿಯ ಸ್ವಂತ ನಿವೇಶನದಲ್ಲಿ ಸುಸಜ್ಜಿತ ಪ್ರಾದೇಶಿಕ ಕ್ಯಾಂಪಸ್ ಸ್ಥಾಪನೆಗೆ ಉದ್ದೇಶಿಸಲಾಗಿದೆ.ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿಯಾಗಿ ನಿವೇಶನಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಕುಲಪತಿಗಳು ಭೇಟಿಯಾಗಿ ಸೂಕ್ತ ಸಹಕಾರಕ್ಕೆ ಕೋರಲಿದ್ದಾರೆ ಎಂದರು.

ಕರಾಮುವಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಮಂಜುನಾಥ ಎಸ್.ಜೆ. ಮತ್ತಿತರರು ಇದ್ದರು.

Trending News