ಬೆಂಗಳೂರು: ನಮಗೆ ಬಿಜೆಪಿ ಶರ್ತುವಲ್ಲ, ಈ ದೇಶಕ್ಕೆ ನಿಜವಾದ ಶತ್ರು ಆರ್ ಎಸ್ಎಸ್. ಈ ದೇಶಕ್ಕೆ ಶತ್ರುವಾದವರು ಕಾಂಗ್ರೆಸ್ ಶತ್ರುವಾಗುವರು.ಇವರ ವಿರುದ್ಧ ನಮ್ಮ ಯುವ ಪೀಳಿಗೆ ಹೋರಾಡಬೇಕಾದರೆ, ಸೈದ್ಧಾಂತಿಕವಾಗಿ ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧಿ ಅವರ ಸರ್ವಧರ್ಮ ಸಮಬಾಳು ತತ್ವದ ಬಗ್ಗೆ ಅರಿವು ಹೊಂದಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ (BK Hariprasad) ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಾನು ಹಿಂದೂ ಅಲ್ಲ- ಯಾರಾದ್ರು ಕೇಸ್‌ ಹಾಕಿದ್ರೆ ನನ್ನ ಪರವಾಗಿ ನ್ಯಾಯಮೂರ್ತಿ ಇದ್ದಾರೆ- ಕುಂ.ವೀರಭದ್ರಪ್ಪ


ಕೆಪಿಸಿಸಿ ಕಚೇರಿಯ ರಾಜೀವ್ ಭವನದಲ್ಲಿ ಮಾತನಾಡಿದ ಇವರು,ರಾಹುಲ್ ಗಾಂಧಿ (Rahul Gandhi) ಅವರು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ.ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕೋಮುವಾದದ ಅಜೆಂಡಾ ಹೊಂದಿದೆ. ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಿದ್ಧಾಂತವನ್ನು ಹೇಳುತ್ತಾ ಹಿಂದೂ ಹಾಗೂ ಹಿಂದುತ್ವದ ನಡುವಣ ವ್ಯತ್ಸಾಸವನ್ನು ಹೇಳಿದ್ದೀರಿ. ಇದನ್ನು ನಾವು ತಳಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು ಎಂದರು.


ಇದನ್ನೂ ಓದಿ: ಡಿಕೆಶಿ-ಸಿದ್ದರಾಮಯ್ಯ ಒಗ್ಗಟಾಗಿ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕು: ರಾಹುಲ್ ಗಾಂಧಿ


ಅವರು ಕೋಮುವಾದದ ಬಗ್ಗೆ ಮಾತನಾಡಿದರೆ ನಾವು ದೇಶಕ್ಕೆ ಕೊಟ್ಟಿರುವ ಪ್ರಜಾಪ್ರಭುತ್ವ, ಸಂವಿಧಾನದ ಮೂಲಕ ದುರ್ಬಲ ವರ್ಗದವರಿಗೆ ಕೊಟ್ಟಿರುವ ಶಕ್ತಿ ಬಗ್ಗೆ ಮಾತನಾಡಬೇಕು.ನಾವು ಹರ್ಡಿಕರ್ ಅವರ ಕ್ಷೇತ್ರದಲ್ಲಿ ತರಬೇತಿ ಕೇಂದ್ರ ಆರಂಭಿಸಿದ್ದು, ಅಲ್ಲಿ ದೇಶದ ಯುವಕರಿಗೆ ಸರಿಯಾದ ಮಾರ್ಗದರ್ಶ ನೀಡಲಾಗುವುದು,ಎಐಸಿಸಿ ನನಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಕೊಟ್ಟಿದ್ದು, ನನ್ನ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.